ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂಡದಲ್ಲಿ ತಾನೆದುರಿಸಿದ ವರ್ಣಬೇಧ ನೀತಿಯ ಘೋರ ಸತ್ಯ ಹೇಳಿದ ಮಖಾಯ ಎನ್‌ಟಿನಿ

Makhaya Ntini Opens Up On Racism He Faced In South African Team

ವಿಶ್ವದಲ್ಲಿ ವರ್ಣಬೇಧ ನೀತಿಯ ವಿರುದ್ಧ ಆಂಧೊಲನ ನಡೆಯುತ್ತಿದೆ. ಇಂತಾ ಸಂದರ್ಭದಲ್ಲಿ ಕ್ರಿಕೆಟ್‌ನಲ್ಲೂ ಜನಾಂಗೀಯ ನಿಂದನೆಗಳನ್ನು ಎದುರಿಸಿದ್ದ ಬಗ್ಗೆ ವೆಸ್ಟ್ ಇಂಡಿಸ್‌ನ ಕ್ರಿಕೆಟಿಗರಾಗ ಕ್ರಿಸ್ ಗೇಲ್ ಹೇಳಿದ ನಂತರ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ. ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮಖಾಯ ಎನ್‌ಟಿನಿ ತಂಡದಲ್ಲಿ ಸಹ ಆಟಗಾರರಿಂದ ತಾನು ಎದುರಿಸಿದ ವರ್ಣ ಬೇಧ ನೀತಿಯ ಕರಾಳತೆಯನ್ನು ವಿವರಿಸಿದ್ದಾರೆ.

ಶಾನ್ ಪೊಲಕ್, ಜಾಕ್ ಕ್ಯಾಲೀಸ್, ಮಾರ್ಕ್ ಬೌಷರ್, ಲ್ಯಾನ್ಸ್ ಕ್ಲೂಸ್ನರ್, ಗ್ರೇಮ್ ಸ್ಮಿತ್ ಅವರಂತಾ ಆಟಗಾರರ ಜೊತೆ ಆಡಿದ ಮಖಾಯ ಎನ್‌ಟಿನಿ ಬ್ಲಾಕ್ ಲೈವ್ಸ್ ಮ್ಯಾಟರ್ ಅಭಿಯಾನದ ಹಿನ್ನೆಲೆಯಲ್ಲಿ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ. 'ತಾನು ತಂಡದಲ್ಲಿದ್ದರೂ ಶಾಶ್ವತ ಒಬ್ಬಂಟಿಯಾಗಿದ್ದೆ' ಎಂದಿದ್ದಾರೆ.

ಕಡುಬಡತನವನ್ನು ಹಿಮ್ಮೆಟ್ಟಿಸಿ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ 6 ಟೀಮ್ ಇಂಡಿಯಾ ಆಟಗಾರರುಕಡುಬಡತನವನ್ನು ಹಿಮ್ಮೆಟ್ಟಿಸಿ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ 6 ಟೀಮ್ ಇಂಡಿಯಾ ಆಟಗಾರರು

'ಆ ಸಂದರ್ಭದಲ್ಲಿ ನಾನು ಶಾಶ್ವತವಾಗಿ ಒಂಟಿಯಾಗಿದ್ದೆ' ಎಂದು ಎನ್‌ಟಿನಿ ಹೇಳಿಕೊಂಡಿದ್ದಾರೆ. 'ಊಟಕ್ಕೆ ಹೋಗಲು ಯಾರೂ ನನ್ನ ಬಾಗಿಲು ತಟ್ಟಲಿಲ್ಲ. ತಂಡದ ಸದಸ್ಯರು ನನ್ನ ಮುಂದೆ ಯೋಜನೆಗಳನ್ನು ರೂಪಿಸುತ್ತಿದ್ದರು, ನನ್ನನ್ನು ಬಿಟ್ಟುಬಿಡುತ್ತಿದ್ದರು. ಬೆಳಗಿನ ಉಪಾಹಾರ ಕೋಣೆಗೆ ಕಾಲಿಟ್ಟಾಗ, ಯಾರೂ ನನ್ನೊಂದಿಗೆ ಕುಳಿತುಕೊಳ್ಳಲು ಬರುತ್ತಿರಲಿಲ್ಲ' ಎಂದು ತಂಡದಲ್ಲೇ ಆದ ಅನುಭವವನ್ನು ಹೇಳಿಕೊಂಡಿದ್ದಾರೆ.

ನಾವು ಒಂದೇ ಸಮವಸ್ತ್ರವನ್ನು ಧರಿಸಿ ಒಂದೇ ರಾಷ್ಟ್ರಗೀತೆ ಹಾಡುತ್ತೇವೆ. ಹೀಗಾಗಿ ನಾನು ಒಂಟಿತನವನ್ನು ಜಯಿಸಬೇಕಾಗಿತ್ತು ಎಂದು ಮಖಾಯ ಎನ್‌ಟಿನಿ ಹೇಳಿದ್ದಾರೆ. 'ಪ್ರತ್ಯೇಕವಾಗಿರುವುದನ್ನು ತಪ್ಪಿಸಲು ತಾನಿ ಬಸ್‌ನಲ್ಲಿ ಪ್ರಯಾಣಿಸುವುದನ್ನು ತಪ್ಪಿಸುತ್ತಿದ್ದೆ. ಬಸ್‌ನಲ್ಲಿ ಪ್ರಯಾಣಿಸಿ ಪ್ರತ್ಯೇಕವಾಗಿರುವ ಬದಲು ಮೈದಾನಕ್ಕೆ ಓಡಿ ಹೋಗುವುದಕ್ಕೆ ಆದ್ಯತೆ ನೀಡುತ್ತಿದ್ದೆ' ಎಂದು ಹೇಳಿಕೊಂಡಿದ್ದಾರೆ ಎನ್‌ಟಿನಿ.

'ಒಂಟಿತನದಿಂದ ನಾನೂ ದೂರ ಹೋಗುತ್ತಿದ್ದೆ. ನಾನು ಬಸ್‌ನಲ್ಲಿ ಹೊಂಬದಿಯಲ್ಲಿ ಕುಳಿತಿರುತ್ತಿದ್ದರೆ ಅವರು ಬಸ್‌ನ ಮುಂದೆ ತೆರಳುತ್ತಿದ್ದರು. ಯಾವಾಗ ತಂಡ ಗೆಲ್ಲುತ್ತಿತ್ತೋ ಆಗ ತುಂಬಾ ಸಂಭ್ರವಿರುತ್ತಿತ್ತು. ಆದರೆ ಪ್ರತಿ ಬಾರಿ ಸೋತಾಗಲೂ ಮೊದಲಿಗೆ ನಿಂದನೆಗೆ ಒಳಗಾಗುತ್ತಿದ್ದಿದ್ದು ನಾನು' ಎಂದು ತಮ್ಮ ಕರಾಳ ಅನುಭವವನ್ನು ಎನ್‌ಟಿನಿ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಂಡರ್‌ 19 ತಂಡದಲ್ಲಿ ತನ್ನ ಮಗನೂ ಇದೇ ರೀತಿ ವರ್ಣಬೇಧಕ್ಕೆ ಒಳಗಾಗಿದ್ದಾನೆ ಎಂದು ಹೇಳಿದ್ದಾರೆ.

Story first published: Saturday, July 18, 2020, 9:44 [IST]
Other articles published on Jul 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X