ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾದ ವೇಗಿ ಲಸಿತ್‌ ಮಾಲಿಂಗ ನಿವೃತ್ತಿಗೆ ಮುಹೂರ್ತ ಫಿಕ್ಸ್‌

ಇನ್ನುಮುಂದೆ ಮಲಿಂಗಾ ಆಟ ನೋಡಲು ಸಿಗೊಲ್ಲಾ..? | Lasith Malinga | Oneindia Kannada
Malinga to retire from ODIs after 1st game against Bangladesh

ಕೊಲಂಬೊ, ಜುಲೈ 23: ವಿಶ್ವ ಕ್ರಿಕೆಟ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಲಸಿತ್‌ ಮಾಲಿಂಗ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದು, ಮುಂಬರುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಅವರ ವೇತ್ತಿ ಜೀವನದ ಕೊನೆಯ ಒಡಿಐ ಪಂದ್ಯವಾಗಲಿದೆ.

ಶ್ರೀಲಂಕಾ ತಂಡ ಬಾಂಗ್ಲಾದೇಶ ವಿರುದ್ಧ ತವರು ನೆಲದಲ್ಲಿ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನಾಡಲಿದೆ. ಇತ್ತೀಚೆಗಷ್ಟೇ ಅಂತ್ಯಗೊಂಡ ವಿಶ್ವಕಪ್‌ ಟೂರ್ನಿಯಲ್ಲಿ ಲಂಕಾ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಮಾಲಿಂಗ, ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡುತ್ತಿರುವುದನ್ನು ನಾಯಕ ದಿಮುತ್‌ ಕರುಣಾರತ್ನೆ ಖಾತ್ರಿ ಪಡಿಸಿದ್ದಾರೆ.

ಭಾರತ ವಿರುದ್ಧದ ಟಿ20ಗಾಗಿ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್!ಭಾರತ ವಿರುದ್ಧದ ಟಿ20ಗಾಗಿ ಬಲಿಷ್ಠ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್!

"ಸರಣಿಯ ಮೊದಲ ಪಂದ್ಯದಲ್ಲಿ ಮಾಲಿಂಗ ಆಡಲಿದ್ದಾರೆ. ಇದಾದ ಬಳಿಕ ಅವರು ನಿವೃತ್ತಿ ಘೋಷಿಸಲಿದ್ದಾರೆ. ಇಷ್ಟನ್ನೇ ಅವರು ನನ್ನ ಬಳಿ ಹೇಳಿರುವುದು. ಆದರೆ ಆಯ್ಕೆ ಸಮಿತಿ ಸದಸ್ಯರ ಎದುರು ಅವರು ಏನು ಹೇಳಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ನನ್ನ ಬಳಿ ಕೇವಲ ಒಂದು ಪಂದ್ಯವನ್ನಷ್ಟೇ ಆಡುವುದಾಗಿ ಹೇಳಿದ್ದಾರೆ, " ಎಂದು ಕರುಣಾರತ್ನೆ ತಿಳಿಸಿದ್ದಾರೆ. ಜುಲೈ 26ರಂದು ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಮೊದಲ ಪಂದ್ಯವನ್ನಾಡಲಿದೆ.

ಟೆನಿಸ್‌ ಬಾಲ್‌ ಕ್ರಿಕೆಟರ್‌ಗೆ ಇಂದು ಟೀಮ್‌ ಇಂಡಿಯಾ ಟಿಕೆಟ್‌!ಟೆನಿಸ್‌ ಬಾಲ್‌ ಕ್ರಿಕೆಟರ್‌ಗೆ ಇಂದು ಟೀಮ್‌ ಇಂಡಿಯಾ ಟಿಕೆಟ್‌!

36 ವರ್ಷದ ಅನುಭವಿ ವೇಗದ ಬೌಲರ್‌ ಲಸಿತ್‌ ಮಾಲಿಂಗ ಬಾಂಗ್ಲಾದೇಶ ವಿರುದ್ಧದ ಸರಣಿಗೆ ಪ್ರಕಟಿಸಲಾದ 22 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಸರಣಿಯ ಮೂರೂ ಪಂದ್ಯಗಳು ಕೊಲಂಬೊದ ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ಜುಲೈ 26, 28 ಮತ್ತು 31ರಂದು ನಡೆಯಲಿವೆ.

ವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಪ್ರಕಟ, 3 ಕನ್ನಡಿಗರಿಗೆ ಸ್ಥಾನವಿಂಡೀಸ್‌ ಪ್ರವಾಸಕ್ಕೆ ಟೀಮ್‌ ಇಂಡಿಯಾ ಪ್ರಕಟ, 3 ಕನ್ನಡಿಗರಿಗೆ ಸ್ಥಾನ

ಏಕದಿನ ಕ್ರಿಕೆಟ್‌ನಲ್ಲಿ 225 ಪಂದ್ಯಗಳಿಂದ 335 ವಿಕೆಟ್‌ಗಳನ್ನು ಪಡೆದಿರುವ ಮಾಲಿಂಗ, ಶ್ರೀಲಂಕಾ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದವರ ಪೈಕಿ ಮೂರನೇ ಸ್ಥಾನದಲ್ಲಿದ್ದು, ಚಮಿಂಡಾ ವಾಸ್‌ (399) ಮತ್ತು ಮುತ್ತಯ್ಯ ಮುರಳೀಧರನ್‌ (523) ಮಾತ್ರವೇ ಮಾಲಿಂಗಾಗಿಂತಲೂ ಮುಂದಿದ್ದಾರೆ. ಇನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಟೂರ್ನಿಯಲ್ಲೂ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎಂಬ ಖ್ಯಾತಿ ಮಾಲಿಂಗ ಅವರದ್ದು.

 ಟೆಸ್ಟ್‌ ಕ್ರಿಕೆಟ್‌ ಸಾಧನೆ

ಟೆಸ್ಟ್‌ ಕ್ರಿಕೆಟ್‌ ಸಾಧನೆ

30 ಪಂದ್ಯ
101 ವಿಕೆಟ್‌
5/50 ಶ್ರೇಷ್ಠ ಬೌಲಿಂಗ್‌
9/210 ಪಂದ್ಯದಲ್ಲಿ ಶ್ರೇಷ್ಠ ಸಾಧನೆ
33.1 ಸರಾಸರಿ
3.85 ಎಕಾನಮಿ
03 ಐದು ವಿಕೆಟ್‌ ಸಾಧನೆ

ಏಕದಿನ ಕ್ರಿಕೆಟ್‌ ಸಾಧನೆ

ಏಕದಿನ ಕ್ರಿಕೆಟ್‌ ಸಾಧನೆ

225 ಪಂದ್ಯ
335 ವಿಕೆಟ್‌
6/38 ಶ್ರೇಷ್ಠ ಸಾಧನೆ
29.02 ಸರಾಸರಿ
5.36 ಎಕಾನಮಿ
32.4 ಸ್ಟ್ರೈಕ್‌ ರೇಟ್‌

ಅಂತಾರಾಷ್ಟ್ರೀಯ ಟಿ20 ಸಾಧನೆ

ಅಂತಾರಾಷ್ಟ್ರೀಯ ಟಿ20 ಸಾಧನೆ

73 ಪಂದ್ಯ
97 ವಿಕೆಟ್‌
5/31 ಶ್ರೇಷ್ಠ ಸಾಧನೆ
19.70 ಸರಾಸರಿ
7.29 ಎಕಾನಮಿ
16.1 ಸ್ಟ್ರೈಕ್‌ ರೇಟ್‌

ಐಪಿಎಲ್‌ನಲ್ಲಿ ಮಾಲಿಂಗ ಮಿಂಚು

ಐಪಿಎಲ್‌ನಲ್ಲಿ ಮಾಲಿಂಗ ಮಿಂಚು

122 ಪಂದ್ಯ
170 ವಿಕೆಟ್‌
5/13 ಶ್ರೇಷ್ಠ ಸಾಧನೆ
19.80 ಸರಾಸರಿ
7.14 ಎಕಾನಮಿ
16.62 ಸ್ಟ್ರೈಕ್‌ರೇಟ್‌

Story first published: Tuesday, July 23, 2019, 14:34 [IST]
Other articles published on Jul 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X