ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಸಾಹಾ ಕೆರಿಯರ್ ಜೊತೆ ಟೀಮ್ ಮ್ಯಾನೇಜ್‌ಮೆಂಟ್ ಆಟವಾಡುತ್ತಿದೆ !'

Management Playing With Career Of Wriddhiman Saha: Sandeep Patil
Is Team India management playing with Saha's career ? | Saha | Cricket | Oneindia Kannada

ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಹೇಳಿದ ಬಳಿಕ ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಕೀಪರ್ ಆಗಿ ವೃದ್ಧಿಮಾನ್ ಸಾಹಾ ಆಯ್ಕೆಯಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ವಿಕೆಟ್‌ನ ಹಿಂದೆ ಸಾಹಾ ಅದ್ಭುತವಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು ಅಗತ್ಯವಿದ್ದಾಗ ಬ್ಯಾಟಿಂಗ್‌ನಲ್ಲೂ ಮಿಂಚಿ ತಂಡಕ್ಕೆ ನೆರವಾಗುತ್ತಿದ್ದಾರೆ.

ಆದರೆ ಕಳೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವೃದ್ಧಿಮಾನ್ ಸಾಹಾ ಅವರನ್ನು ಆಡಿಸದೆ ಯುವ ಆಟಗಾರ ರಿಷಭ್ ಪಂತ್‌ಗೆ ಅವಕಾಶವನ್ನು ನೀಡಲಾಯಿತು. ಎರಡೂ ಪಂದ್ಯಗಳಲ್ಲೂ ರಿಷಭ್ ಪಂತ್ ನೀರಸ ಆಟವನ್ನು ಪ್ರದರ್ಶಿಸಿದ್ದಾರೆ. ಸೀಮಿತ ಓವರ್‌ಗಳ ಬಳಿಕ ಟೆಸ್ಟ್‌ನಲ್ಲೂ ಅದೇ ಛಾಳಿಯನ್ನು ಮುಂದುವರಿಸಿದ್ದಾರೆ. ಇದಕ್ಕೆ ಟೀಮ್ ಇಂಡಿಯಾದ ಆಯ್ಕೆ ಮಂಡಳಿಯ ಮಾಜಿ ಮುಖ್ಯಸ್ಥ ಸಂದೀಪ್ ಪಾಟೀಲ್ ಕಿಡಿಕಾರಿದ್ದಾರೆ.

 ಈ ಇಬ್ಬರು ಆಟಗಾರರು ಕೀವಿಸ್ ಪರಿಸ್ಥಿತಿಗೆ ಸೂಕ್ತವಾಗಿದ್ದರು : ಮಂಜ್ರೆಕರ್ ಈ ಇಬ್ಬರು ಆಟಗಾರರು ಕೀವಿಸ್ ಪರಿಸ್ಥಿತಿಗೆ ಸೂಕ್ತವಾಗಿದ್ದರು : ಮಂಜ್ರೆಕರ್

ಸಂದೀಪ್ ಪಾಟೀಲ್ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ ನಿರ್ಧಾರಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ರಿಷಭ್ ಪಂತ್‌ಗೆ ಅವಕಾಶವನ್ನು ನೀಡಲು ಹೋಗಿ ಟೀಮ್ ಮ್ಯನೇಜ್‌ಮೆಂಟ್ ವೃದ್ಧಿಮಾನ್ ಸಾಹಾ ಅವರ ಕ್ರಿಕೆಟ್‌ ವೃತ್ತಿಜೀವನವನ್ನು ಹಾಳು ಮಾಡಲು ಹೊರಟಿದೆ ಎಂದಿದ್ದಾರೆ.

ವೃದ್ಧಿಮಾನ್ ಸಾಹಾ ವಿಕೆಟ್ ಕೀಪಿಂಗ್‌ನ ಜೊತೆಗೆ ಬ್ಯಾಟ್‌ನಿಂದಲೂ ಗಮನಾರ್ಹ ಪ್ರದರ್ಶನವನ್ನು ನೀಡುತ್ತಿದ್ದಾರೆ. ಆದರೆ ವಿದೇಶಿ ಪಂದ್ಯಗಳಲ್ಲಿ ಸಾಹಾ ಅವರಿಗೆ ಅವಕಾಶವನ್ನು ನೀಡದೆ ಅವರ ವಿಶ್ವಾಸವನ್ನು ಕುಂದಿಸುವ ಕೆಲಸವಾಗುತ್ತಿದೆ ಎಂದಿದ್ದಾರೆ ಸಂದೀಪ್ ಪಾಟೀಲ್.

ಐಪಿಎಲ್‌ಗೆ ಕೊರೊನಾ ವೈರಸ್ ಭೀತಿ: ಪ್ರತಿಕ್ರಿಯಿಸಿದ ಬ್ರಿಜೇಶ್, ಗಂಗೂಲಿಐಪಿಎಲ್‌ಗೆ ಕೊರೊನಾ ವೈರಸ್ ಭೀತಿ: ಪ್ರತಿಕ್ರಿಯಿಸಿದ ಬ್ರಿಜೇಶ್, ಗಂಗೂಲಿ

ಸರಣಿ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಂತ್ ಪ್ರದರ್ಶನದ ಬಗ್ಗೆ ಹೇಳಿಕೆಯನ್ನು ನೀಡಿದ್ದರು. ಪಂತ್‌ಗೆ ಸಾಕಷ್ಟು ಅವಕಾಶವನ್ನು ನೀಡಲಾಗಿದೆ ಎನ್ನುತ್ತಲೇ ರಿಷಭ್ ಪಂತ್ ಅವರನ್ನು ಸಮರ್ಥಿಸಿಕೊಂಡು ಮಾತುಗಳನ್ನಾಡಿದ್ದರು.

Story first published: Wednesday, March 4, 2020, 12:10 [IST]
Other articles published on Mar 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X