ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ನಂ.1 ಆಟಗಾರ್ತಿ ಮಂಧಾನರ ಬ್ಯಾಟಿಂಗ್‌ಗೆ ಚಾಹಲ್ ಸ್ಫೂರ್ತಿಯಂತೆ!

Mandhana reveals the reason behind wearing jersey number 18 on Chahal TV - Watch

ನವದೆಹಲಿ, ಫೆಬ್ರವರಿ 7: ಮಹಿಳಾ ಏಕದಿನ ಬ್ಯಾಟಿಂಗ್‌ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಭಾರತದ ಸ್ಮೃತಿ ಮಂಧಾನ ಅವರಿಗೆ ಭಾರತದ ಸ್ಪಿನ್ನರ್ ಚಾಹಲ್ ಸ್ಫೂರ್ತಿಯಂತೆ. ಚಾಹಲ್ ಟಿವಿ ಜೊತೆ ಮಾತನಾಡುತ್ತ ಮಂಧಾನ ತನ್ನ 18 ನಂಬರ್ ಜೆರ್ಸಿಯ ಗುಟ್ಟನ್ನೂ ಬಿಚ್ಚಿಟ್ಟಿದ್ದಾರೆ.

ಕುಂಬ್ಳೆಗೆ ಹತ್ತೂ ವಿಕೆಟ್‌ಗಳನ್ನು ಒಪ್ಪಿಸಿ ಪಾಕ್ ಶರಣಾಗಿದ್ದು ಫೆ. 7ರ ಇದೇ ದಿನ!ಕುಂಬ್ಳೆಗೆ ಹತ್ತೂ ವಿಕೆಟ್‌ಗಳನ್ನು ಒಪ್ಪಿಸಿ ಪಾಕ್ ಶರಣಾಗಿದ್ದು ಫೆ. 7ರ ಇದೇ ದಿನ!

ಚಾಹಲ್ ಟಿವಿ ಜೊತೆ ಮಾತನಾಡುತ್ತ ಸ್ಮೃತಿ, 'ನ್ಯೂಜಿಲ್ಯಾಂಡ್-ಭಾರತ 4ನೇ ಏಕದಿನ ಪಂದ್ಯದಲ್ಲಿ ನಿಮ್ಮ (ಚಾಹಲ್) ಬ್ಯಾಟಿಂಗ್‌ ನನಗೆ ಸ್ಫೂರ್ತಿಯಾಯಿತು ಎನ್ನುತ ಉಕ್ಕೋ ನಗುವನ್ನು ಅರೆಬರೆ ತಡೆ ಹಿಡಿಯೋ ಪ್ರಯತ್ನ ಮಾಡಿದ್ದಾರೆ. ಅಸಲಿಗೆ ಚಾಹಲ್ ಸ್ಪಿನ್ ಬೌಲರ್ ಆಗಿದ್ದರೂ ಕಿವೀಸ್ ವಿರುದ್ಧ 4ನೇ ಏಕದಿನ ಪಂದ್ಯದಲ್ಲಿ ತಂಡದ ಪರ ಕೊಸರಾಡಿದ್ದು ನಿಜವೆ. ಆ ವೇಳೆ ಚಾಹಲ್ ಅಜೇಯ 18 ರನ್ ಬಾರಿಸಿದ್ದರು. ಚಾಹಲ್ ಅವರ ಈ ರನ್ನೇ ಅಂದು ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಈ ಪಂದ್ಯವನ್ನು ಭಾರತ 8 ವಿಕೆಟ್‌ಗಳಿಂದ ಸೋತಿತ್ತು.

ಭಾರತ vs ನ್ಯೂಜಿಲ್ಯಾಂಡ್: 2ನೇ ಟಿ20 ಪಂದ್ಯಕ್ಕೆ ಸಂಭಾವ್ಯ ಭಾರತ ತಂಡಭಾರತ vs ನ್ಯೂಜಿಲ್ಯಾಂಡ್: 2ನೇ ಟಿ20 ಪಂದ್ಯಕ್ಕೆ ಸಂಭಾವ್ಯ ಭಾರತ ತಂಡ

ಚಾಹಲ್ ಅವರ ಚಾಹಲ್ ಟಿವಿ ಜೊತೆ ಮಾತನಾಡುತ್ತ ಮಂಧಾನ ಇನ್ನೂ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕ್ರಿಕೆಟ್ ಆಟಗಾರರು, ಆಟಗಾರ್ತಿಯರು ಧರಿಸುವ ಜರ್ಸಿಗೆ ವಿಶೇಷತೆಯಿದೆ. ಹಿನ್ನೆಲೆಯಿದೆ, ಕಾರಣವಿದೆ. ಅದರಂತೆ ತಾನು 18 ನಂಬರ್ ಜರ್ಸಿ ಧರಿಸುತ್ತಿರೋದ್ಯಾಕೆ ಎಂಬ ವಿಚಾರವನ್ನು ಸ್ಮೃತಿ ಹೇಳಿಕೊಂಡಿದ್ದಾರೆ.

'ಶಾಲೆಯಲ್ಲಿ ನನ್ನದು 7ನೇ ಹಾಜರಿ ಸಂಖ್ಯೆ. ಹೀಗಾಗಿ ನಾನು 7ನೇ ನಂಬರ್‌ ಜರ್ಸಿ ಆರಿಸಬೇಕೆಂದಿದ್ದೆ. ಆದರೆ ಆ ಜರ್ಸಿಯನ್ನು ಮೊದಲೇ ಯಾರೋ ಆರಿಸಿಕೊಂಡಾಗಿತ್ತು. ಹೀಗಾಗಿ ಬಿಸಿಸಿಐ ಮ್ಯಾನೇಜರ್ ನೀನು 18 ನಂಬರ್ ಜರ್ಸಿ ತೆಗೆದುಕೊಳ್ಳು ಎಂದರು' ಎಂದು ಜೆರ್ಸಿಯ ಹಿನ್ನೆಲೆ ವಿವರಿಸಿದರು.

ಸೌರಾಷ್ಟ್ರಕ್ಕೆ ಸೋಲುಣಿಸಿ 2ನೇ ಬಾರಿಗೆ 'ರಣಜಿ ಟ್ರೋಫಿ' ಎತ್ತಿದ ವಿದರ್ಭಸೌರಾಷ್ಟ್ರಕ್ಕೆ ಸೋಲುಣಿಸಿ 2ನೇ ಬಾರಿಗೆ 'ರಣಜಿ ಟ್ರೋಫಿ' ಎತ್ತಿದ ವಿದರ್ಭ

ಮಾತು ಮುಂದುವರೆಸಿದ ಮಂಧಾನ, 'ನನ್ನ ಹುಟ್ಟುಹಬ್ಬ ಜುಲೈ 18 ಆಗಿದ್ದರಿಂದ ಬಿಸಿಸಿಐ ಮ್ಯಾನೇಜರ್ ಸಲಹೆ ನನಗೆ ಹಿಡಿಸಿತು. ಆದರೆ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯೂ ಇದೇ ನಂಬರ್‌ನ ಜೆರ್ಸಿ ಧರಿಸೋದು ನನ್ನ ಗಮನಕ್ಕೆ ಬಂದಿರಲಿಲ್ಲ' ಎಂದರು.

Story first published: Thursday, February 7, 2019, 19:12 [IST]
Other articles published on Feb 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X