ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಗೆ ರೋಟರಿ ವಂದನಾ ಪ್ರಶಸ್ತಿ

By Mahesh

ಮಂಗಳೂರು, ಮೇ.26: ಮಾಜಿ ಕ್ರಿಕೆಟರ್, 'ಮೈಸೂರು ಎಕ್ಸ್ ಪ್ರೆಸ್' ಎಂದೇ ಖ್ಯಾತಿ ಗಳಿಸಿರುವ ಜಾವಗಲ್ ಶ್ರೀನಾಥ್ ಅವರನ್ನು ಈ ಸಾಲಿನ ರಾಜ್ಯ ಮಟ್ಟದ ಪ್ರತಿಷ್ಠಿತ ರೋಟರಿ ವಂದನಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿನ ಜೀವಮಾನ ಸಾಧನೆಗಾಗಿ ಜಾವಗಲ್ ಶ್ರೀನಾಥ್ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ.

ದೇಶ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ಮೇ 29ರಂದು ರಾತ್ರಿ ನಗರದ ಹೋಟೆಲ್ ದೀಪಾ ಕಂಫರ್ಟ್ಸ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

 Javagal Srinath Chosen for Rotary "Vandana Award"


ಈ ಪ್ರಶಸ್ತಿಯನ್ನು ರೋಟರಿ ಮಂಗಳೂರು ಸೆಂಟ್ರಲ್ ಮತ್ತು ರೋಟರಿ ಮಂಗಳೂರು ಸಿಟಿ ಜಂಟಿಯಾಗಿ ಈ ಪ್ರಶಸ್ತಿಯನ್ನು ಪ್ರಾಯೋಜಿಸಿವೆ. ಜಾವಗಲ್ ಶ್ರೀನಾಥ್ ಅವರು ಈಗಾಗಲೇ ದೇಶದ ಅತ್ಯತ್ತಮ ಪ್ರಶಸ್ತಿಗಳಲ್ಲಿ ಒಂದಾಗಿರುವ ರಾಷ್ಟ್ರ ಮಟ್ಟದ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದಾರೆ.

ರೋಟರಿ ವಂದನಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಂಗಳೂರು ವಿವಿ ಉಪಕುಲಪತಿ ಪ್ರೊ. ಡಾ.ಕೆ. ಬೈರಪ್ಪ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಸತೀಶ್ ಬೋಳಾರ್ ಮತ್ತು ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ರಜಾಕ್ ಕಬಕರ್ಸ್ ಪಾಲ್ಗೊಳ್ಳಲಿದ್ದು ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ನ ಅಧ್ಯಕ್ಷ ಸಂತೋಷ್ ಶೇಟ್ ಅಧ್ಯಕ್ಷತೆ ವಹಿಸಲಿದ್ದಾರೆ.

ಜಾವಗಲ್ ಶ್ರೀನಾಥ್ ಅವರು ಭಾರತ ಪರ 67 ಟೆಸ್ಟ್ ಪಂದ್ಯವಾಡಿದ್ದು 236 ವಿಕೆಟ್ ಪಡೆದಿದ್ದಾರೆ. 229 ಏಕದಿನ ಕ್ರಿಕೆಟ್ ಪಂದ್ಯದಲ್ಲಿ 315 ವಿಕೆಟ್ ಉರುಳಿಸಿದ್ದಾರೆ. 4 ವಿಶ್ವಕಪ್ ಟೂರ್ನಿಯಲ್ಲಿ 44 ವಿಕೆಟ್ ಅಲ್ಲದೆ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 500ಕ್ಕೂ ಅಧಿಕ ವಿಕೆಟ್ ಪಡೆದಿದ್ದಾರೆ.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X