ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೈದರಾಬಾದ್ ವಿರುದ್ದದ ಪಂದ್ಯದ ಗೆಲುವಿನ ಟರ್ನಿಂಗ್ ಪಾಯಿಂಟ್ ಹೇಳಿದ ಜೋರ್ಡನ್

Manish Pandeys Wicket Was Most Important says Chris Jordan After Win against SRH

ಶನಿವಾರ ನಡೆದ ಲೋ ಸ್ಕೋರಿಂಗ್ ಥ್ರಿಲ್ಲರ್‌ನಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ತಂಡ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಹೈದರಾಬಾದ್ ವಿರುದ್ಧ ಗೆಲುವನ್ನು ಸಾಧಿಸಿತು. ಪಂಜಾಬ್ ನೀಡಿದ್ದ 127 ರನ್‌ಗಳ ಗುರಿಯನ್ನು ತಲುಪಲಾಗದೆ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡ ಹೈದರಾಬಾದ್ ಪಂಜಾಬ್‌ಗೆ 12 ರನ್‌ಗಳ ಅಂತರದಿಂದ ಶರಣಾಗಿತ್ತು.

ಈ ರೋಚಕ ಗೆಲುವಿಗೆ ಕಾರಣವಾಗಿತ್ತು ಒಂಜಾಬ್ ತಂಡದ ವೇಗಿ ಕ್ರಿಸ್ ಜೋರ್ಡನ್ ಹಾಗೂ ಅರ್ಷ್‌ದೀಪ್ ಸಿಂಗ್ ಮಾರಕ ಬೌಲಿಂಗ್. ಅಂತಿಮ ಹಂತದಲ್ಲಿ ಎದುರಾಳಿಗಳ ವಿಕೆಟ್ ಮೇಲೆ ವಿಕೆಟ್ ತೆಗೆಯುವಲ್ಲಿ ಈ ಬೌಲರ್‌ಗಳು ಯಶಸ್ವಿಯಾದರು. ಈ ಪಂದ್ಯದ ಬಳಿಕ ಮಾತನಾಡಿದ ಕ್ರಿಸ್ ಜೋರ್ಡನ್ ಪಂಜಾಬ್ ಗೆಲುವಿಗೆ ತಿರುವು ಸಿಕ್ಕಿದ್ದೆಲ್ಲಿ ಎಂಬುದನ್ನು ಹಂಚಿಕೊಂಡಿದ್ದಾರೆ.

 'ಎಲ್ಲಾ ಪತ್ರಿಕೆಗಳಲ್ಲೂ ನಿನ್ನ ಚಿತ್ರವಿದೆ': ಅನಾರೋಗ್ಯ ಪೀಡಿತ ಅಪ್ಪನ ನೆನೆದ ಸಿರಾಜ್ 'ಎಲ್ಲಾ ಪತ್ರಿಕೆಗಳಲ್ಲೂ ನಿನ್ನ ಚಿತ್ರವಿದೆ': ಅನಾರೋಗ್ಯ ಪೀಡಿತ ಅಪ್ಪನ ನೆನೆದ ಸಿರಾಜ್

ಐಪಿಎಲ್ ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕ್ರಿಸ್ ಜೋರ್ಡನ್ ಹಾಗೂ ಪಂಜಾಬ್ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್‌ ಮಾತುಕತೆಯನ್ನು ನಡೆಸುವ ಸಂದರ್ಭದಲ್ಲಿ ಜಾಂಟಿ ರೋಡ್ಸ್ ಜೋರ್ಡನ್ ಬಳಿ ಯಾವುದು ಮಹತ್ವ ವಿಕೆಟ್ ಆಗಿತ್ತು ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದರು.

ಕಡಿಮೆ ರನ್‌ ಗಳಿಸಿಯೂ ಪಂಜಾಬ್ ಪಂದ್ಯ ಗೆದ್ದಿದ್ದು ಇದೇ ಮೊದಲಲ್ಲಕಡಿಮೆ ರನ್‌ ಗಳಿಸಿಯೂ ಪಂಜಾಬ್ ಪಂದ್ಯ ಗೆದ್ದಿದ್ದು ಇದೇ ಮೊದಲಲ್ಲ

ಜಾಂಟಿ ರೋಡ್ಸ್ ಕೇಳಿದ ಈ ಪ್ರಶ್ನೆಗೆ ಉತ್ತರಿಸಿದ ಜೋರ್ಡನ್ "ಬಹುಶಃ ಮನೀಶ್ ಪಾಂಡೆ ವಿಕೆಟ್ ಬಹಳ ಪ್ರಮುಖವಾಗಿತ್ತು. ಅದೇ ಪಂದ್ಯಕ್ಕೆ ತಿರುವು ನೀಡಲು ಮುಖ್ಯ ಕಾರಣವಾಯಿತು" ಎಂದು ಜೋರ್ಡನ್ ಅಭಿಪ್ರಾಯಪಟ್ಟಿದ್ದಾರೆ. ಮನೀಶ್ ಪಾಂಡೆ ವಿಕೆಟ್ ಒಪ್ಪಿಸುವ ಸಂದರ್ಭದಲ್ಲಿ ಹೈದರಾಬಾದ್ 100 ರನ್‌ಗಳಿಗೆ 4ನೇ ವಿಕೆಟ್ ಕಳೆದುಕೊಂಡಿತ್ತು. ಬಳಿಕ ಹಠಾತ್ ಕುಸಿತಕ್ಕೆ ಒಳಗಾಯಿತು.

ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಜೋರ್ಡನ್ ಮೂರು ಬಹುಮುಖ್ಯ ವಿಕೆಟ್ ಕಿತ್ತು ಗೆಲುವಿಗೆ ಪ್ರಮುಖ ಕಾರಣರಾದರು. ಮನೀಶ್ ಪಾಂಡೆ, ಜೇಸನ್ ಹೋಲ್ಡರ್ ಹಾಗೂ ರಶೀದ್ ಖಾನ್ ವಿಕೆಟ್‌ಗಳು ಜೋರ್ಡನ್ ಬೌಲಿಂಗ್‌ಗೆ ಉರುಳಿದವು.

Story first published: Sunday, October 25, 2020, 16:07 [IST]
Other articles published on Oct 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X