ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೈನಾ ಹೊರಗಿಟ್ಟು ಈತನನ್ನೇ ಪ್ರಮುಖ ಬ್ಯಾಟರ್ ಆಗಿ ಕಣಕ್ಕಿಳಿಸಿ: ಮಂಜ್ರೇಕರ್ ಹೇಳಿದ ಅಚ್ಚರಿಯ ಹೆಸರು!

Manjrekar said Jadeja Shuould play as a pure batter and leave out Suresh Raina

ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಸುರೇಶ್ ರೈನಾ ವಿಫಲವಾಗಿದ್ದಾರೆ. ಹೇಳಿಕೊಳ್ಳುವಂತಾ ಪ್ರದರ್ಶನ ರೈನಾ ಬ್ಯಾಟಿಂಗ್ ಮೂಲಕ ಬಂದಿಲ್ಲ. ಇಡೀ ತಂಡದ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ರೈನಾ ಮಾತ್ರ ಹಿನ್ನಡೆ ಅನುಭವಿಸುತ್ತಿದ್ದಾರೆ. ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿಯಾಗಿರುವ ಸುರೇಶ್ ರೈನಾ ಈ ಮಟ್ಟಕ್ಕೆ ವೈಫಲ್ಯವನ್ನು ಅನುಭವಿಸುತ್ತಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದೆ.

ಸುರೇಶ್ ರೈನಾ ನೀಡುತ್ತಿರುವ ಈ ಕಳಪೆ ಪ್ರದರ್ಶನದ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿದೆ. ಈ ಮಧ್ಯೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಸುರೇಶ್ ರೈನಾರನ್ನ ಆಡುವ ಬಳಗದಿಂದ ಹೊರಗಿಡಬೇಕು ಎಂಬ ಅಭಿಪ್ರಾಯಪಟ್ಟಿದ್ದಾರೆ. ಅಚ್ಚರಿಯೇನಂದ್ರೆ ಸಂಜಯ್ ಮಂಜ್ರೇಕರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನ್ನೋರ್ವ ಆಲ್‌ರೌಂಡರ್ ಆಟಗಾರನನ್ನು ಪ್ರಮುಖ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಸಬೇಕು ಎಂದು ಹೆಸರಿಸಿದ್ದಾರೆ.

ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್ಐಪಿಎಲ್: ಪ್ಲೇ ಆಫ್ಸ್‌ ಭರವಸೆ ಕಳೆದುಕೊಂಡ ಮೊದಲ ತಂಡ ಹೈದರಾಬಾದ್

ಮಾಜಿ ಕ್ರಿಕೆಟಿಗ ಹಾಗೂ ಕಾಮಂಟೇಟರ್ ಸಂಜಯ್ ಮಂಜ್ರೇಕರ್ ಸುರೇಶ್ ರೈನಾ ಪ್ರದರ್ಶನದ ಬಗ್ಗೆ ಹೇಳಿದ್ದೇನು? ಯಾವ ಆಟಗಾರನನ್ನು ಪ್ರಮುಖ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿಸಲು ಸಲಹೆ ನೀಡಿದ್ದಾರೆ.. ಮುಂದೆ ಓದಿ...

ರಾಯುಡು-ರೈನಾ ಮಧ್ಯೆ ರಾಯುಡು ಆಯ್ಕೆ ಮಾಡಿದ ಮಂಜ್ರೇಕರ್

ರಾಯುಡು-ರೈನಾ ಮಧ್ಯೆ ರಾಯುಡು ಆಯ್ಕೆ ಮಾಡಿದ ಮಂಜ್ರೇಕರ್

ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಆರಂಭಕ್ಕೂ ಮುನ್ನ ಮಂಜ್ರೇಕರ್ ದಫಾ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಸುರೇಶ್ ರೈನಾ ಹಾಗೂ ಅಂಬಾಟಿ ರಾಯುಡು ಮಧ್ಯೆ ಯಾವ ಒಬ್ಬ ಆಟಗಾರನನ್ನು ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಮಂಜ್ರೇಕರ್ ಅಂಬಾಟು ರಾಯುಡು ಅವರನ್ನು ಆಯ್ಕೆ ಮಾಡಿದರು. ದೀರ್ಘಾವಧಿಗೆ ರೈನಾಗಿಂತ ಅಂಬಾಟಿ ರಾಯುಡು ಉತ್ತಮ ಆಯ್ಕೆಯಾಗಬಲ್ಲರು ಎಂದಿದ್ದಾರೆ. "ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಚಾರವಾಗಿ ಸುರೇಶ್ ರೈನಾ ಹಾಗೂ ಅಂಬಾಟಿ ರಾಯುಡು ಇಬ್ಬರು ಕೂಡ ಕಳವಳ ಮೂಡಿಸುತ್ತಾರೆ. ಇಬ್ಬರೂ ಕಳೆಗುಂದಿದ್ದಾರೆ. ರಾಯುಡುಗಿಂತಲೂ ಸುರೇಶ್ ರೈನಾ ಪ್ರದರ್ಶನ ಕಳಪೆಯಾಗಿದೆ. ಹೀಗಾಗಿ ಒಬ್ಬರನ್ನ ಆಯ್ಕೆ ಮಾಡಬೇಕೆಂದರೆ ರಾಯುಡು ಅವರನ್ನೇ ಆಯ್ದುಕೊಳ್ಳುತ್ತೇನೆ" ಎಂದಿದ್ದಾರೆ ಮಂಜ್ರೇಕರ್.

ರೈನಾ ಕಳಪೆ ಆಟ

ರೈನಾ ಕಳಪೆ ಆಟ

ಸುರೇಶ್ ರೈನಾ ಐಪಿಎಲ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿರುವ ಆಟಗಾರ. ಆದರೆ 2019ರ ಐಪಿಎಲ್‌ನ ಬಳಿಕ ರೈನಾ ಹಿಂದಿನ ಚಾರ್ಮ್ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. 2019ರ ಆವೃತ್ತಿಯಲ್ಲಿ ರೈನಾ 25ಕ್ಕೂ ಕಡಿಮೆ ಸರಾಸರಿ ಹೊಂದಿದ್ದರು. ಆಡಿದ 9 ಪಂದ್ಯಗಳಲ್ಲಿ ರೈನಾ 24ರ ಸರಾಸರಿಯಲ್ಲಿ ಕೇವಲ 144 ರನ್‌ಗಳನ್ನು ಮಾತ್ರವೇ ಗಳಿಸಿದ್ದರು. 127.43ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದರು. 2020ರ ಆವೃತ್ತಿಯಲ್ಲಿ ಕೊನೆಯ ಕ್ಷಣದಲ್ಲಿ ವೈಯಕ್ತಿಕ ಕಾರಣವನ್ನು ನೀಡಿ ಟೂರ್ನಿಯಿಂದಲೇ ಹೊರಗುಳಿದಿದ್ದರು.

"ರೈನಾ ಬದಲಿಗೆ ಪ್ರಮುಖ ಬ್ಯಾಟ್ಸ್‌ಮನ್ ಆಗಿ ಜಡೇಜಾ ಕಣಕ್ಕಿಳಿಯಲಿ"

"ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಾಗದಲ್ಲಿ ಅದ್ಭುತ ತಂಡದಲ್ಲಿ ತೋರುತ್ತದೆ. ಬ್ಯಾಟಿಂಗ್‌ನ ಆಳವೂ ಅದ್ಭುತವಾಗಿದೆ. ಆದರೆ ಅಬುದಾಬಿಯಲ್ಲಿ ಸ್ಪಿನ್ ಹೆಚ್ಚು ಪರಿಣಾಮಕಾರಿಯಾಗಿರುವುದರಿಂದಾಗಿ ಮತ್ತೋರ್ವ ಸ್ಪಿನ್ನಗೆ ಅವಕಾಶವನ್ನು ನೀಡಬೇಕು. ಸುರೇಶ್ ರೈನಾರನ್ನ ಹೊರಗಿಟ್ಟು ಅವರ ಬದಲಿಗೆ ಕರ್ಣ್ ಶರ್ಮಾಗೆ ಅವಕಾಶವನ್ನು ನೀಡಬೇಕು. ರವೀಂದ್ರ ಜಡೇಜಾ ಅವ್ರನ್ನ ಪೂರ್ಣ ಕಾಲಿಕ ಬ್ಯಾಟ್ಸ್‌ಮನ್ ರೀತಿ ಬಳಸಿಕೊಳ್ಳಬೇಕು" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ABD ಔಟ್ ಆದಾಗ ಅತ್ಯಂತ ನೊಂದ ಅಭಿಮಾನಿ ಇವನೇ | Oneindia Kannada
ಸಂಪೂರ್ಣ ತಂಡ

ಸಂಪೂರ್ಣ ತಂಡ

ಮಹೇಂದ್ರ ಸಿಂಗ್ ಧೋನಿ (ನಾಯಕ), ಸುರೇಶ್ ರೈನಾ, ಅಂಬಾಟಿ ರಾಯುಡು, ರಾಬಿನ್ ಉತ್ತಪ್ಪ, ಕೆಎಂ ಆಸಿಫ್, ದೀಪಕ್ ಚಹಾರ್, ಡ್ವೇನ್ ಬ್ರಾವೋ, ಫಾಫ್ ಡು ಪ್ಲೆಸಿಸ್, ಇಮ್ರಾನ್ ತಾಹಿರ್, ಎನ್ ಜಗದೀಸನ್, ಕರ್ಣ್ ಶರ್ಮಾ, ಲುಂಗಿ ಎನ್‌ಗಿಡಿ, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಸ್ಯಾಮ್ ಕರನ್, ಆರ್ ಸಾಯಿ ಕಿಶೋರ್, ಮೊಯೀನ್ ಅಲಿ, ಕೆ ಗೌತಮ್, ಚೇತೇಶ್ವರ ಪೂಜಾರ, ಹರಿಶಂಕರ್ ರೆಡ್ಡಿ, ಭಗತ್ ವರ್ಮ, ಸಿ ಹರಿ ನಿಶಾಂತ್, ಜೋಶ್ ಹೇಜಲ್‌ವುಡ್.

Story first published: Sunday, September 26, 2021, 18:58 [IST]
Other articles published on Sep 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X