ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಕಣಕ್ಕಿಳಿಯಲಿದ್ದಾರೆ ಇಬ್ಬರು ಭಾರತಿಯ ಕ್ರಿಕೆಟಿಗರು

Manpreet Gony and Manvinder Bisla to feature in Lanka Premier League

ಕೊರೊನಾ ವೈರಸ್‌ನ ಕಾರಣದಿಂದಾಗಿ ಮುಂದೂಡಿಕೆಯಾಗಿದ್ದ ಚೊಚ್ಚಲ ಲಂಕಾ ಪ್ರೀಮಿಯರ್ ಲೀಗ್ ಮುಂದಿನ ತಿಂಗಳಿನಲ್ಲಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಇಬ್ಬರು ಬಾರತೀಯ ಕ್ರಿಕೆಟಿಗರು ಪಾಲ್ಗೊಳ್ಳುವುದು ಬಹುತೇಕ ಖಚಿತವೆನಿಸಿದೆ. ಸೋಮವಾರ ನಡೆದ ಡ್ರಾಫ್ಟ್‌ನಲ್ಲಿ ಇಬ್ಬರು ಆಟಗಾರರ ಹೆಸರು ಕಾಣಿಸಿಕೊಂಡಿದೆ.

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಐದು ತಂಡಗಳು ಭಾಗಿಯಾಗಲಿದೆ. ಇದರಲ್ಲಿ ಕೊಲಂಬೋ ಕಿಂಗ್ಸ್ ತಂಡ ಡ್ರಾಫ್ಟ್‌ನಲ್ಲಿ ಮನ್‌ಪ್ರೀತ್ ಗೋನಿ ಹಾಗೂ ಮನ್ವಿಂದರ್ ಬಿಸ್ಲಾ ಅವರನ್ನು ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಈ ಇಬ್ಬರು ಆಟಗಾರರು ಲಂಕಾ ಪ್ರಿಮಿಯರ್ ಲೀಗ್‌ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತವೆನಿಸಿದೆ.

ರೊನಾಲ್ಡೊಗೆ ಮತ್ತೆ ಕೊರೊನಾ ಪಾಸಿಟಿವ್: ಮೆಸ್ಸಿ ವಿರುದ್ಧದ ಪಂದ್ಯಕ್ಕೆ ಮಿಸ್?ರೊನಾಲ್ಡೊಗೆ ಮತ್ತೆ ಕೊರೊನಾ ಪಾಸಿಟಿವ್: ಮೆಸ್ಸಿ ವಿರುದ್ಧದ ಪಂದ್ಯಕ್ಕೆ ಮಿಸ್?

ಮನ್‌ಪ್ರೀತ್ ಗೋನಿ ಬಲಗೈ ಮಧ್ಯಮ ವೇಗದ ಬೌಲರ್ ಆಗಿದ್ದು 2 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಒಂದು ಹಾಂಕಾಂಗ್ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿದಿದ್ದರೆ ಇನ್ನೊಂದು ಪಂದ್ಯವನ್ನು ಬಾಂಗ್ಲಾದೇಶದ ವಿರುದ್ಧ ಆಡಿದ್ದರು. ಐಪಿಎಲ್‌ನಲ್ಲೂ ಆಡಿರುವ 36ರರ ಹರೆಯದ ಗೋನಿ 44 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ.

ಮತ್ತೊಂದೆಡೆ ಮನ್ವಿಂದರ್ ಬಿಸ್ಲಾ ಐಪಿಎಲ್‌ನಲ್ಲಿ ಕೆಲ ಪಂದ್ಯಗಳಲ್ಲಿ ಕಾಣಿಸಿಕೊಂಡ ಆಟಗಾರನಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಬಿಸ್ಲಾ 35 ಐಪಿಎಲ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 798 ರನ್ ಗಳಸಿದ್ದಾರೆ. ಇನ್ನೂ ಈ ಮುನ್ನ ಈ ಬಾರಿಯ ಎಲ್‌ಪಿಎಲ್‌ನಲ್ಲಿ ಇರ್ಫಾನ್ ಪಠಾಣ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಮಾತುಗಳು ಕೇಳಿ ಬಂದಿತ್ತು.

Story first published: Friday, October 23, 2020, 10:23 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X