ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಗುಡುಗಿದ ಯೋಗ್‌ರಾಜ್ ಸಿಂಗ್: ಈ ಬಾರಿ ಧೋನಿ ಜೊತೆ ಕೊಹ್ಲಿಗೂ ಕ್ಲಾಸ್

Many Have Backstabbed Yuvraj Singh Including Kohli, Dhoni: Yograj Singh

ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ತಂದೆ ಯೋಗ್‌ರಾಜ್ ಸಿಂಗ್ ಈ ಹಿಂದೆ ಹಲವು ಬಾರಿ ಸುದ್ದಿಯಾಗಿದ್ದಾರೆ. ಯುವರಾಜ್ ಸಿಂಗ್‌ಗೆ ಟೀಮ್ ಇಂಡಿಯಾದಲ್ಲಿ ಅನ್ಯಾಯವಾಗಿದೆ, ಅದಕ್ಕೆ ಧೋನಿ ಕಾರಣ ಎಂದು ಯೋಜ್‌ರಾಜ್ ಸಿಂಗ್ ಆರೋಪವನ್ನು ಮಾಡಿದ್ದರು. ಮಾಜಿ ಕ್ರಿಕೆಟಿಗರೂ ಆಗಿರುವ ಯೋಗ್‌ರಾಜ್ ಸಿಂಗ್ ಈಗ ಮತ್ತೊಮ್ಮೆ ಗುಡುಗಿದ್ದಾರೆ.

ತನ್ನ ಮಗನಿಗೆ ಯಾರಿಂದೆಲ್ಲಾ ಅನ್ಯಾಯವಾಗಿದೆ ಎಂಬುದನ್ನು ಯೋಗ್‌ರಾಜ್ ಸಿಂಗ್ ಈ ಬಾರಿ ಹೇಳಿಕೊಂಡಿದ್ದಾರೆ. ಯುವರಾಜ್ ಸಿಂಗ್ ಕೆರಿಯರ್ ಹಾಳಾಗಲು ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ಜೊತೆಗೆ ಹಾಲಿ ನಾಯಕ ವಿರಾಟ್ ಕೊಹ್ಲಿಯೂ ಕಾರಣ ಎಂಬುದನ್ನು ಯೋಗ್‌ರಾಜ್ ಸಿಂಗ್ ಹೇಳಿದ್ದಾರೆ.

ಕೆ.ಎಲ್ to ಡಿ.ಕೆ : ಐಪಿಎಲ್‌ನಲ್ಲಿ ತವರು ತಂಡವನ್ನು ಮುನ್ನಡೆಸದ ಐದು ಸ್ಟಾರ್ ಆಟಗಾರರುಕೆ.ಎಲ್ to ಡಿ.ಕೆ : ಐಪಿಎಲ್‌ನಲ್ಲಿ ತವರು ತಂಡವನ್ನು ಮುನ್ನಡೆಸದ ಐದು ಸ್ಟಾರ್ ಆಟಗಾರರು

ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ ಲೈವ್‌ನಲ್ಲಿ ಯುವರಾಜ್ ಸಿಂಗ್ ಸಂವಾದವನ್ನು ನಡೆಸಿದ್ದರು. ಈ ಸಂವಾದದಲ್ಲಿ ಯುವಿ ಸೌರವ್ ಗಂಗೂಲಿ ರೀತಿಯಲ್ಲಿ ತಂಡದ ನಾಯಕನಿಂದ ಬೆಂಬಲ ಧೋನಿಯಿಂದಾಗಲಿ ವಿರಾಟ್ ಕೊಹ್ಲಿಯಿಂದಾಗಲಿ ಸಿಗಲಿಲ್ಲ ಎಂದು ಹೇಳಿಕೊಂಡಿದ್ದರು. ಅದಾದ ಬಳಿಕ ಮತ್ತೆ ಸಿಂಗ್ ಈ ವಿಚಾರವಾಗಿ ಗುಡುಗಿದ್ದಾರೆ.

ಧೋನಿ ಮತ್ತು ವಿರಾಟ್ ಕೊಹ್ಲಿಯ ಜೊತೆಗೆ ಯುವರಾಜ್ ಸಿಂಗ್ ಕೆರಿಯರ್ ಹಾಳಾಗಲು ಆಯ್ಕೆ ಸಮಿತಿಯು ಕಾರಣ ಎಂದು ಯೋಗ್‌ರಾಜ್ ಸಿಂಗ್ ಹೇಳಿದ್ದಾರೆ. ಇತ್ತೀಚೆಗಷ್ಟೇ ನಾನು ರವಿ ಶಾಸ್ತ್ರಿಯವರನ್ನು ಭೇಟಿಯಾಗಿದ್ದೆ ಈ ಸಂದರ್ಭದಲ್ಲಿ ಅವರಲ್ಲಿ ನಾನು ತಂಡಕ್ಕೆ ಬಹಳ ವರ್ಷಗಳ ಕಾಲ ಕೊಡುಗೆಯನ್ನು ಕೊಟ್ಟ ಆಟಗಾರರಿಗೆ ಗೌರವಯುತ ನಿವೃತ್ತಿ ಸಿಗಬೇಕು ಎಂದು ಕೇಳಿಕೊಂಡಿದ್ದೇನೆ ಎಂದು ಯೋಗ್‌ರಾಜ್ ಸಿಂಗ್ ಹೇಳಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ನಿಸ್ವಾರ್ಥ ಆಟಗಳುಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ನಿಸ್ವಾರ್ಥ ಆಟಗಳು

ಮಹೇಂದ್ರ ಸಿಂಗ್ ಧೋನಿಯಾಗಲಿ, ವಿರಾಟ್ ಕೊಹ್ಲಿಯಾಗಲಿ ಅಥವಾ ರೋಹಿತ್ ಶರ್ಮಾ ಯಾರೇ ಆಗಲಿ ನಿವೃತ್ತಿಯನ್ನು ತೆಗೆದುಕೊಳ್ಳುತ್ತಾರೆ ಎಂಬುದಾದರೆ ಅವರಿಗೆ ಗೌರವಯುತ ನಿವೃತ್ತಿ ಸಿಗಬೇಕು. ಬಹಳ ಕಾಲ ಟೀಮ್ ಇಂಡಿಯಾಗೆ ಸೇವೆ ಸಲ್ಲಿಸಿದ ಅದೆಷ್ಟೋ ಕ್ರಿಕೆಟಿಗರಿಗೆ ಸರಿಯಾಗಿ ನಿವೃತ್ತಿ ತೆಗೆದುಕೊಳ್ಳುವಂತಾಗಲಿಲ್ಲ ಎಂದು ಯೋಗರಾಜ್ ಸಿಂಗ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Story first published: Wednesday, May 6, 2020, 22:53 [IST]
Other articles published on May 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X