ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಚ್ ಅವಧಿ ಅಂತ್ಯ: ಆರ್‌ಸಿಬಿ ಕೋಚ್ ಸಹಿತ ರವಿ ಶಾಸ್ತ್ರಿ ಮುಂದಿದೆ ಪ್ರಮುಖ ಆಯ್ಕೆಗಳು!

Many options for Ravi Shastri including RCB coaching Role

ಟೀಮ್ ಇಂಡಿಯಾದ ಹಾಲಿ ಕೋಚ್ ರವಿ ಶಾಸ್ತ್ರಿ ಅವರ ಒಪ್ಪಂದದ ಅವಧಿ ಮುಕ್ತಾಯಕ್ಕೆ ಬಂದು ತಲುಪಿದೆ. ಟಿ20 ವಿಶ್ವಕಪ್ ಅಂತ್ಯವಾಗುವುದರೊಂದಿಗೆ ಕೋಚ್ ಆಗಿ ರವಿ ಶಾಸ್ತ್ರಿ ಅವರ ಸೇವಾವಧಿಯು ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಹಾಲಿ ಕೋಚ್ ರವಿ ಶಾಸ್ತ್ರಿ ಮುಂದಿನ ಹಾದಿ ಏನಾಗಿರಲಿದೆ ಎಂಬುದು ಈಗ ಸಾಕಷ್ಟು ಕುತೂಹಲ ಮೂಡಿಸಿದೆ. ಕ್ರಿಕೆಟ್ ಕ್ಷೇತ್ರದಲ್ಲಿ ಈಗಾಗಲೇ ಅನೇಕ ರೀತಿಯಲ್ಲಿ ತೊಡಗಿಸಿಕೊಂಡಿರುವ ರವಿ ಶಾಸ್ತ್ರಿ ಅವರ ಮುಂದಿನ ಹೆಜ್ಜೆ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ಆದರೆ ರವಿ ಶಾಸ್ತ್ರಿ ಮುಂದೆ ಈಗಾಗಲೇ ಸಾಕಷ್ಟು ಆಯ್ಕೆಗಳಿವೆ ಎಂಬುದಂತೂ ಸ್ಪಷ್ಟ. ಟೀಮ್ ಇಂಡಿಯಾ ಪರವಾಗಿ ಎರಡು ಅವಧಿಗೆ ಕೋಚ್ ಆಗಿ ಕರ್ತವ್ಯ ನಿರ್ವಹಿಸಿರುವ ಶಾಸ್ತ್ರಿ ಮುಂದೆ ಐಪಿಎಲ್ ಮತ್ತು ಕಾಮೆಂಟರಿ ಕ್ಷೇತ್ರ ಕೂಡ ಪ್ರಮುಖ ಆಯ್ಕೆಯಾಗಿದೆ.

ಟಿ20 ವಿಶ್ವಕಪ್: ಧೋನಿ ಮೆಂಟರ್ ಆಗುತ್ತಿರುವ ಬಗ್ಗೆ ನಾಯಕ ಕೊಹ್ಲಿ ಹೇಳಿದ್ದಿಷ್ಟು!ಟಿ20 ವಿಶ್ವಕಪ್: ಧೋನಿ ಮೆಂಟರ್ ಆಗುತ್ತಿರುವ ಬಗ್ಗೆ ನಾಯಕ ಕೊಹ್ಲಿ ಹೇಳಿದ್ದಿಷ್ಟು!

ಐಪಿಎಲ್ ಮೇಲಿದ್ಯಾ ರವಿ ಶಾಸ್ತ್ರಿ ಕಣ್ಣು

ಐಪಿಎಲ್ ಮೇಲಿದ್ಯಾ ರವಿ ಶಾಸ್ತ್ರಿ ಕಣ್ಣು

ಇನ್ನು ಟೀಮ್ ಇಂಡಿಯಾ ಕೋಚ್ ಆಗಿ ಕರ್ತವ್ಯ ನಿರ್ವಹಿಸಿರುವ ರವಿ ಶಾಸ್ತ್ರಿ ಮುಂದೆ ಐಪಿಎಲ್‌ನಲ್ಲಿ ಕೋಚ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ರವಿ ಶಾಸ್ತ್ರಿ ಟೀಮ್ ಇಂಡಿಯಾ ಕೋಚ್ ಹುದ್ದೆಯ ಅವಧಿ ಮುಕ್ತಾಯವಾದ ಐದು ತಿಂಗಳ ಅವಧಿಯಲ್ಲಿ ಮತ್ತೊಂದು ಐಪಿಎಲ್ ಆವೃತ್ತಿ ನಡೆಯಲಿದ್ದು ಇದು ಸಾಕಷ್ಟು ಕುತೂಹಲ ಮೂಡಿಸಿದೆ.

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಭವಿಸಿದ ಐದು ಕುತೂಹಲಕಾರಿ ಸಂಗತಿಗಳಿವು

ಆರ್‌ಸಿಬಿ ಕೋಚ್ ಆಗಲಿದ್ದಾರಾ ರವಿ ಶಾಸ್ತ್ರಿ

ಆರ್‌ಸಿಬಿ ಕೋಚ್ ಆಗಲಿದ್ದಾರಾ ರವಿ ಶಾಸ್ತ್ರಿ

ಟೀಮ್ ಇಂಡಿಯಾದ ಹಾಲಿ ಕೋಚ್ ಆಗಿರುವ ರವಿ ಶಾಸ್ತ್ರಿ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ ತಂಡದ ಕೋಚ್ ಆಗಿ ಕಾಣಿಸಿಕೊಂಡರೆ ಅಚ್ಚರಿಯಿಲ್ಲ. ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ ಹಾಗೂ ರವಿ ಶಾಸ್ತ್ರಿ ಮಧ್ಯೆ ಅತ್ಯುತ್ತಮವಾದ ಬಾಂಧವ್ಯವಿದೆ. ಆರ್‌ಸಿಬಿ ನಾಯಕತ್ವವನ್ನು ಮುಂದಿನ ಆವೃತ್ತಿಯಲ್ಲಿ ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದರೂ ತಂಡದ ಆಟಗಾರನಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಕೊಹ್ಲಿ ಹಾಗೂ ಶಾಸ್ತ್ರಿ ನಡುವಿನ ಬಾಂಧವ್ಯದಿಂದಾಗಿ ರವಿ ಶಾಸ್ತ್ರಿ ಆರ್‌ಸಿಬಿ ತಂಡದ ಕೋಚ್ ಆಗಿ ನೇಮಕವಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಇತರ ತಂಡಗಳು ಕೂಡ ಸೆಳೆಯುವ ಪ್ರಯತ್ನ

ಇತರ ತಂಡಗಳು ಕೂಡ ಸೆಳೆಯುವ ಪ್ರಯತ್ನ

ಇನ್ನು ಐಪಿಎಲ್‌ನಲ್ಲಿ ಕೋಚ್ ಹುದ್ದೆಯ ಮೇಲೆ ರವಿ ಶಾಸ್ತ್ರಿ ಕಣ್ಣಿಟ್ಟಿರುವುದು ನಿಜವೇ ಆಗಿದ್ದರೆ ಇತರ ಕೆಲ ತಂಡಗಳು ಕೂಡ ರವಿ ಶಾಸ್ತ್ರಿಯನ್ನು ಕೋಚ್ ಆಗಿ ಹೊಂದಲು ಪೈಪೋಟಿ ನಡೆಸುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ಮುಂಬರುವ ಐಪಿಎಲ್‌ಗೆ ಎರಡು ಹೊಸ ತಂಡಗಳು ಕೂಡ ಸೇರ್ಪಡೆಯಾಗಲಿದ್ದು ಹೊಸ ತಂಡಗಳು ಕೂಡ ರವಿ ಶಾಸ್ತ್ರಿಯ ಅನುಭವವನ್ನು ತಮ್ಮ ತಂಡಕ್ಕೆ ಬಳಸಿಕೊಳ್ಳಲು ಪೈಪೋಟಿ ನಡೆಸಲಿದೆ. ರವಿ ಶಾಸ್ತ್ರಿ ಮಾತ್ರವಲ್ಲದೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಭರತ್ ಅರುಣ್ ಹಾಗೂ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಕೂಡ ಸಾಕಷ್ಟು ಬೇಡಿಕೆಯ ಕೋಚ್‌ಗಳಾಗಲಿದ್ದಾರೆ.

ಐಪಿಎಲ್: ಮೆಗಾ ಆಕ್ಷನ್‌ನಲ್ಲಿ ಧೋನಿಯನ್ನು ರೀಟೈನ್ ಮಾಡಿಕೊಳ್ಳುವುದು ಖಚಿತ ಎಂದ ಸಿಎಸ್‌ಕೆ

ತನ್ನ ಸ್ಥಾನವನ್ನು KL ರಾಹುಲ್ ಗೆ ದಾನ ಮಾಡಿದ ವಿರಾಟ್ | Oneindia Kannada
ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಾರಾ ಶಾಸ್ತ್ರಿ

ಕಾಮೆಂಟರಿ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳುತ್ತಾರಾ ಶಾಸ್ತ್ರಿ

ಟೀಮ್ ಇಂಡಿಯಾ ಕೋಚ್ ಆಗುವುದಕ್ಕೂ ಮುನ್ನ ರವಿ ಶಾಸ್ತ್ರಿ ತಮ್ಮ ಕಾಮೆಂಟರಿ ಕೌಶಲ್ಯದಿಂದಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದರು. ಭಾರತ ಕ್ರಿಕೆಟ್ ತಂಡದ ಅನೇಕ ಸ್ಮರಣೀಯ ಸಂದರ್ಭಗಳಲ್ಲಿ ರವಿ ಶಾಸ್ತ್ರಿ ವೀಕ್ಷಕ ವಿವರಣೆ ಪ್ರಮುಖ ಭಾಗವಾಗಿ ಉಳಿದುಕೊಂಡಿದೆ. ಹೀಗಾಗಿ ರವಿ ಶಾಸ್ತ್ರಿ ಕಾಮೆಂಟರಿ ಕ್ಷೇತ್ರದಲ್ಲಿ ಮುಂದುವರಿಯುವ ಅವಕಾಶಗಳೂ ಇದೆ.

Story first published: Monday, October 18, 2021, 17:27 [IST]
Other articles published on Oct 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X