ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ ಇಂಗ್ಲೆಂಡ್‌ನ ಮಾರ್ಕಸ್‌ ಟ್ರೆಸ್ಕೋಥಿಕ್‌

Marcus Trescothick announces his retirement from professional cricket

ಲಂಡನ್‌, ಜೂನ್‌ 27: ಇಂಗ್ಲೆಂಡ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ 43 ವರ್ಷದ ಮಾರ್ಕಸ್‌ ಟ್ರೆಸ್ಕೋಥಿಕ್‌ ಪ್ರಸಕ್ತ ಕೌಂಟಿ ಕ್ರಿಕೆಟ್‌ ಚಾಂಪಿಯನ್‌ಷಿಪ್‌ ಅಂತ್ಯಗೊಂದಿಗೆ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಹೇಳುವುದಾಗಿ ಗುರುವಾರ ಘೋಷಿಸಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

"ವೃತ್ತಿ ಬದುಕಿನ 27 ವರ್ಷಗಳು ಅದ್ಭತವಾಗಿತ್ತು. ಆದರೆ, ಎಲ್ಲದಕ್ಕೂ ಒಂದು ಅಂತ್ಯವಿದ್ದೇ ಇರುತ್ತದೆ. ನನ್ನ ಮುಂದಿನ ದಿನಗಳ ಕುರಿತಾಗಿ ಕ್ಲಬ್‌ ಮತ್ತು ಕುಟುಂಬದವರೊಡನೆ ಚರ್ಚಿಸಿ, ನಿವೃತ್ತೊಗೆ ಇದು ಸೂಕ್ತ ಸಮಯ ಎಂಬ ನಿರ್ಧಾರಕ್ಕೆ ಬಂದಿದ್ದೇನೆ,'' ಎಂದು ಸಮರ್‌ಸೆಟ್‌ ತಂಡ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಟ್ರೆಸ್ಕೋತಿಕ್‌ ತಿಳಿಸಿದ್ದಾರೆ.

ಕೌಂಟಿ ಕ್ರಿಕೆಟ್‌ನಲ್ಲಿ ಟ್ರೆಸ್ಕೋಥಿಕ್‌ ಪಾಲ್ಗೊಳ್ಳುತ್ತಿರುವುದು ಇದು 27ನೇ ಬಾರಿ ಆಗಿದೆ. ಸಮರ್‌ಸೆಟ್‌ ಪರ ಅವರು 52 ಪ್ರಥಮ ದರ್ಜೆ ಶತಕಗಳನ್ನು ದಾಖಲಿಸಿದ್ದಾರೆ. ಅಲ್ಲದೆ ಸಮರ್‌ಸೆಟ್‌ ಪರ ಅತ್ಯಧಿಕ ರನ್‌ಗಳನ್ನು (7374) ದಾಖಲಿಸಿದ ಬ್ಯಾಟ್ಸ್‌ಮನ್‌ ಕೂಡ.

ಟೀಮ್‌ ಇಂಡಿಯಾದ ಡಿಫೆನ್ಸೀವ್‌ ಬ್ಯಾಟಿಂಗ್‌ ಕುರಿತು ಸೆಹ್ವಾಗ್‌ ಟೀಕೆ!ಟೀಮ್‌ ಇಂಡಿಯಾದ ಡಿಫೆನ್ಸೀವ್‌ ಬ್ಯಾಟಿಂಗ್‌ ಕುರಿತು ಸೆಹ್ವಾಗ್‌ ಟೀಕೆ!

"ಸೀಸನ್‌ ಅಂತ್ಯಗೊಳ್ಳಲು ಇನ್ನು ಸಾಕಷ್ಟು ಸಮಯ ಬಾಕಿ ಇದೆ. ತಂಡದ ಯಶಸ್ಸಿಗಾಗಿ ನನ್ನ ಸಾಮರ್ಥ್ಯ ಮೀರಿ ಪ್ರಯತ್ನಿಸಲಿದ್ದೇನೆ. ಈ ಕ್ಲಬ್‌, ಇಲ್ಲಿನ ಸದಸ್ಯರು ಹಾಗೂ ಬೆಂಬಲಿಗರು ನನ್ನ ಪಾಲಿಗೆ ಅತ್ಯಂತ ಮಹತ್ವದ್ದು. ಇಲ್ಲಿ ಹಲವು ಅಮೋಘ ನೆನಪುಗಳನ್ನು ಹೊಂದಿದ್ದೇನೆ. ಕ್ಲಬ್‌ಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ,'' ಎಂದು ಹೇಳಿದ್ದಾರೆ.

ಪಾಕ್‌ ಸೆಮಿಫೈನಲ್‌ ತಲುಪಲು ಭಾರತದ ನೆರವು ಬೇಡಿದ ಶೊಯೇಬ್‌ ಅಖ್ತರ್‌!ಪಾಕ್‌ ಸೆಮಿಫೈನಲ್‌ ತಲುಪಲು ಭಾರತದ ನೆರವು ಬೇಡಿದ ಶೊಯೇಬ್‌ ಅಖ್ತರ್‌!

ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಕೌಂಟಿ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು (445) ಪ್ರಥಮ ದರ್ಜೆ ಕ್ರಿಕೆಟ್‌ ಕ್ಯಾಚ್‌ಗಳನ್ನು ಹಿಡಿದ ದಾಖಲೆಯನ್ನೂ ಹೊಂದಿದ್ದಾರೆ. ಇನ್ನು ಇಂಗ್ಲೆಂಡ್‌ ಪರ ಕೂಡ ಅಷ್ಟೇ ಅದ್ಭುತ ಆಟವಾಡಿರುವ ಟ್ರೆಸ್ಕೋಥಿಕ್, 76 ಟೆಸ್ಟ್‌ ಪಂದ್ಯಗಳನ್ನಾಡಿ 43.79ರ ಸರಾಸರಿಯಲ್ಲಿ 5800 ರನ್‌ಗಳನ್ನು ಗಳಿಸಿದ್ದಾರೆ. 2005ರಲ್ಲಿ ಆಷಸ್‌ ಗೆದ್ದಿರುವ ಟ್ರೆಸ್ಕೋಥಿಕ್‌, ಓಕದಿನ ಕ್ರಿಕೆಟ್‌ನಲ್ಲೂ ಇಂಗ್ಲೆಂಡ್‌ ಪರ 4335 ರನ್‌ಗಳನ್ನು ಗಳಿಸಿದ್ದಾರೆ.

Story first published: Thursday, June 27, 2019, 22:09 [IST]
Other articles published on Jun 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X