ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ಪ್ರಸ್ತುತ ಅಗ್ರ 5 ಆಟಗಾರರನ್ನ ಹೆಸರಿಸಿದ ಮಾರ್ಕ್ ವಾ: ಕೊಹ್ಲಿ, ಬಾಬರ್‌ಗಿಲ್ಲ ಸ್ಥಾನ

Glenn maxwell

ಮುಂದಿನ ತಿಂಗಳು ನಡೆಯಲಿರುವ ಐಸಿಸಿಯ ಟಿ20 ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯ ಮಾಜಿ ಆಟಗಾರ ಮಾರ್ಕ್ ವಾ ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ಅಗ್ರ ಐದು ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಏಷ್ಯಾದ ತಾರೆಗಳಿಗೆ ಆದ್ಯತೆ ನೀಡಿರುವ ವಾ, ಟಾಪ್ ಐವರನ್ನು ಆಯ್ಕೆ ಮಾಡಿರುವುದು ಗಮನಾರ್ಹ. ಭಾರತದ ಒಬ್ಬ ವ್ಯಕ್ತಿ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮಾರ್ಕ್ ವಾ 1999 ಏಕದಿನ ವಿಶ್ವಕಪ್ ಗೆದ್ದ ಆಸೀಸ್ ತಂಡದ ಭಾಗವಾಗಿದ್ದರು. ಅವರು ಏಕದಿನ ಕ್ರಿಕೆಟ್‌ನಲ್ಲಿ 8500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ ಮತ್ತು ಮಾಜಿ ಲೆಜೆಂಡರಿ ನಾಯಕ ಸ್ಟೀವ್ ವಾ ಅವರ ಸಹೋದರರಾಗಿದ್ದಾರೆ. ಆಕ್ರಮಣಕಾರಿ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದ ವಾ, ಅತ್ಯುತ್ತಮ ಫೀಲ್ಡರ್ ಕೂಡ ಆಗಿದ್ದರು.

ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ

ಭಾರತದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಮಾರ್ಕ್ ವಾ ತನ್ನ ಅಗ್ರ ಐದು ಟಿ20 ಆಟಗಾರರಲ್ಲಿ ಸೇರಿಸಿಕೊಂಡಿದ್ದಾರೆ. ಬುಮ್ರಾ ಹೊರತುಪಡಿಸಿ, ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಜೋಸ್ ಬಟ್ಲರ್, ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಅಫ್ಘಾನಿಸ್ತಾನದ ಸ್ಪಿನ್ ಸೂಪರ್‌ಸ್ಟಾರ್ ರಶೀದ್ ಖಾನ್ ಮತ್ತು ಪಾಕಿಸ್ತಾನದ ವೇಗದ ಸ್ಟಾರ್ ಶಾಹೀನ್ ಶಾ ಅಫ್ರಿದಿ ಅಗ್ರ ಐದರಲ್ಲಿ ಉಳಿದ ನಾಲ್ವರು.

ಭಾರತದ ಮಾಜಿ ನಾಯಕ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ನಾಯಕ ಮತ್ತು ವಿಶ್ವದ ಎರಡನೇ ಶ್ರೇಯಾಂಕಿತ ಬಾಬರ್ ಅಜಮ್ ವಾ ಅವರ ಅಗ್ರ ಐದರಲ್ಲಿ ಸ್ಥಾನ ಪಡೆಯಲಿಲ್ಲ.

ಜಸ್ಪ್ರೀತ್ ಬುಮ್ರಾ ಎಲ್ಲಾ ಸ್ವರೂಪಗಳಲ್ಲಿ ಅದ್ಭುತ ಬೌಲರ್ ಎಂದು ನಾನು ಭಾವಿಸುತ್ತೇನೆ ಎಂದು ಮಾರ್ಕ್ ವಾ ಹೇಳಿದ್ದಾರೆ. ಟಿ20ಯಲ್ಲಿ ವಿಕೆಟ್ ಪಡೆಯುವಲ್ಲಿ ಬುಮ್ರಾ ಅವರ ಸಾಮರ್ಥ್ಯ ಬಹಳ ಮುಖ್ಯ. ಬುಮ್ರಾ ಅವರು ಡೆತ್ ಓವರ್‌ಗಳಲ್ಲಿ ಮತ್ತು ಮೊದಲ ಓವರ್‌ಗಳಲ್ಲಿ ಬೌಲಿಂಗ್‌ನಲ್ಲಿ ಮಿಂಚುವರು ಎಂದು ಮಾರ್ಕ್ ವಾ ಹೇಳಿದ್ದಾರೆ.

ಶಾಹಿನ್ ಅಫ್ರಿದಿ

ಶಾಹಿನ್ ಅಫ್ರಿದಿ

ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಬೌಲಿಂಗ್ ತೆರೆಯಲು ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ನನ್ನ ಮುಂದಿನ ಆಯ್ಕೆ ಎಂದು ತಿಳಿಸಿದ್ದಾರೆ. ಅಫ್ರಿದಿ ಅವರು ಉತ್ತಮ ಎಡಗೈ ವೇಗದ ಬೌಲರ್ ಹಾಗೂ ವಿಕೆಟ್ ಟೇಕರ್ ಆಗಿದ್ದಾರೆ. ಅವರು ಕುಸಿದ ತಂಡವನ್ನ ಮೇಲೆತ್ತಬಲ್ಲರು. ಶಾಹೀನ್ ಅಫ್ರಿದಿಯನ್ನು ಇತರರು ಸಹ ಬೆಂಬಲಿಸುತ್ತಾರೆ ಎಂದು ಮಾರ್ಕ್ ವಾ ಗಮನಸೆಳೆದಿದ್ದಾರೆ.

ಎಡಗೈ ಬೌಲರ್ ಆಗಿರುವುದು ಶಾಹೀನ್‌ನ ಮತ್ತೊಂದು ವಿಶಿಷ್ಟ ಲಕ್ಷಣವಾಗಿದೆ. ಅವರು ಬಲಗೈ ಬ್ಯಾಟರ್ ವಿರುದ್ಧ ಚೆಂಡನ್ನು ಇನ್‌ ಸ್ವಿಂಗ್ ಮಾಡಬಹುದು. ಇದು ಉತ್ತಮ ವೇಗವನ್ನು ಸಹ ಹೊಂದಿದೆ. ಹೀಗಾಗಿ ಶಾಹೀನ್‌ಗೆ ಎರಡನೇ ಸ್ಥಾನ ನೀಡುವುದಾಗಿ ವಾ ಹೇಳಿದ್ದಾರೆ.

ಇನ್ನೆಂಥಾ ಫಾರ್ಮ್ ಬೇಕು!: ಅದ್ಭುತ ಪ್ರದರ್ಶನ ನೀಡಿದರೂ ವಿಶ್ವಕಪ್‌ಗೆ ಆಯ್ಕೆಯಾಗದ ನಾಲ್ವರು ಕ್ರಿಕೆಟಿಗರು!

ರಶೀದ್ ಖಾನ್

ರಶೀದ್ ಖಾನ್

ಮಾರ್ಕ್ ವಾ ಮೂರನೇ ಆಯ್ಕೆಯಾಗಿ ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿದರು. ನೀವು ಆಡುವ ಪ್ರತಿಯೊಂದು ಪಂದ್ಯಾವಳಿಯಲ್ಲಿ ನಾಲ್ಕು ಓವರ್‌ಗಳನ್ನು ಬೌಲ್ ಮಾಡುವ ಒಬ್ಬ ವ್ಯಕ್ತಿ ಇದ್ದರೆ ಅದು ರಶೀದ್ ಖಾನ್. ಅವರು ಸುಮಾರು 20 ರನ್ ನೀಡಿ ಎರಡು-ಮೂರು ವಿಕೆಟ್‌ಗಳನ್ನು ಪಡೆಯುತ್ತಾರೆ. ರಶೀದ್ ಬ್ಯಾಟಿಂಗ್ ಕೂಡ ಮಾಡಬಲ್ಲರು. ಬೌಂಡರಿಗಳ ಮೇಲೆ ಸಿಕ್ಸರ್ ಬಾರಿಸುವುದರಲ್ಲಿ ರಶೀದ್ ಉತ್ತಮ ಎಂದು ಮಾರ್ಕ್ ವಾ ಅಂದಾಜಿಸಿದ್ದಾರೆ.

ಜಾಸ್ ಬಟ್ಲರ್

ಜಾಸ್ ಬಟ್ಲರ್

ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಅವರನ್ನು ನಾಲ್ಕನೇ ಆಯ್ಕೆಯನ್ನಾಗಿ ಮಾರ್ಕ್ ವಾ ಸೂಚಿಸಿದ್ದಾರೆ. ಬಟ್ಲರ್ ಈ ಸ್ವರೂಪದಲ್ಲಿ ನಂಬರ್ ಒನ್ ಬ್ಯಾಟರ್ ಎಂದು ವಾ ಬಣ್ಣಿಸಿದರು.

ನನ್ನ ಪ್ರಕಾರ ಜೋಸ್ ಬಟ್ಲರ್ ಪ್ರಸ್ತುತ ಟಿ20 ಮಾದರಿಯಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ನಂಬರ್ ಒನ್ ಬ್ಯಾಟ್ಸ್‌ಮನ್. ಅವರು ಕ್ಲೀನ್ ಸ್ಟ್ರೈಕರ್. ಪ್ರತಿ ಪಂದ್ಯಾವಳಿಯಲ್ಲೂ ಬಟ್ಲರ್ ನೋಡಿದ್ದೇವೆ. ಬಟ್ಲರ್ ಇತರ ಆಟಗಾರರಿಗಿಂತ ವಿಭಿನ್ನ ಮಟ್ಟದಲ್ಲಿ ಕಾಣುತ್ತಾರೆ ಎಂದು ಮಾರ್ಕ್ ವಾ ಹೇಳಿದ್ದಾರೆ.

IND vs SA 2022: ಭಾರತ ತಂಡ ಹೀಗಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಖಚಿತ ಎಂದ ಆಕಾಶ್ ಚೋಪ್ರಾ

ಗ್ಲೆನ್ ಮ್ಯಾಕ್ಸ್‌ವೆಲ್

ಗ್ಲೆನ್ ಮ್ಯಾಕ್ಸ್‌ವೆಲ್

ಅಂತಿಮವಾಗಿ, ತನ್ನದೇ ದೇಶದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಮಾರ್ಕ್ ವಾ ಅವರ ನೆಚ್ಚಿನ ಐವರನ್ನಾಗಿ ಆಯ್ಕೆ ಮಾಡಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟ್ ಮತ್ತು ಬಾಲ್‌ನಿಂದ ಆಟವನ್ನು ಗೆಲ್ಲುವ ಆಟಗಾರ. ಅನೇಕರು ಅವನನ್ನು ಕೀಳಾಗಿ ನೋಡುತ್ತಾರೆ. ಆದ್ರೆ ಆತ ಮ್ಯಾಚ್ ವಿನ್ನರ್ ಆಗಿದ್ದು, 30 ಎಸೆತಗಳನ್ನು ಬ್ಯಾಟ್ ಮಾಡಿದರೆ ತಂಡವನ್ನ ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಮ್ಯಾಕ್ಸ್‌ವೆಲ್ ಅವರು ಸ್ಥಿರವಾಗಿಲ್ಲದಿದ್ದರೂ ನಿರ್ದಿಷ್ಟ ದಿನದಂದು ಪಂದ್ಯವನ್ನು ಗೆಲ್ಲುವ ಎಕ್ಸ್‌ ಫ್ಯಾಕ್ಟರ್ ಆಗಿದ್ದಾರೆ ಎಂದು ಮಾರ್ಕ್ ವಾ ಸೇರಿಸಿದ್ದಾರೆ.

Story first published: Wednesday, September 28, 2022, 17:24 [IST]
Other articles published on Sep 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X