ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯಾವುದೇ ಪರಿಸ್ಥಿತಿಯಲ್ಲಿಯೂ ಭಾರತದ ಈ ದಾಂಡಿಗನಿಗೆ ಬೌಲಿಂಗ್ ಕಷ್ಠ: ಮಾರ್ಕ್‌ ವುಡ್

Mark Wood said its difficult to bowl at Rohit Sharma In any condition

ಬೆಂಗಳೂರು, ಆಗಸ್ಟ್ 8: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ ಅಮೋಘ ಪ್ರದರ್ಶನದಿಂದಾಗಿ ಇಂಗ್ಲೆಂಡ್ 157 ರನ್‌ಗಳ ಅಂತರದಿಮದ ಭಾರತಕ್ಕೆ ಶರಣಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರೂ ಕೂಡ ಎರಡನೇ ಇನ್ನಿಂಗ್ಸ್‌ನಲ್ಲಿ ನೀಡಿದ ಅಮೋಘ ಆಟದಿಂದಾಗಿ ಗೆದ್ದು ಬೀಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಭಾರತ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿ ಪಂದ್ಯವನ್ನು ಕೈವಶ ಮಾಡಿಕೊಂಡಿತು.

ಈ ಪಂದ್ಯದ ಬಳಿಕ ಇಂಗ್ಲೆಂಡ್ ತಂಡದ ಪ್ರಮುಖ ವೇಗದ ಬೌಲರ್ ಮಾರ್ಕ್‌ವುಡ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾರ್ಕ್‌ವುಡ್ ಭಾರತ ತಂಡದ ಓರ್ವ ದಾಂಡಿಗನ ಬಗ್ಗೆ ವಿಶೇಷ ಮಾತುಗಳನ್ನು ಆಡಿದ್ದಾರೆ. ಯಾವುದೇ ಪರಿಸ್ಥಿತಿಯಲದಲಿಯೂ ಟೀಮ್ ಇಂಡಿಯಾದ ಈ ಬ್ಯಾಟ್ಸ್‌ಮನ್‌ಗೆ ಬೌಲಿಂಗ್ ಮಾಡುವುದು ಬಹಳ ಕಠಿಣ ಎಂಬ ಮಾತನ್ನು ಆಡಿದ್ದಾರೆ ಮಾರ್ಕ್‌ವುಡ್.

ಇಂಗ್ಲೆಂಡ್‌ಗೆ ಡ್ರಾ ಮಾಡಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂಬುದು ನಾಚಿಕೆಗೇಡು; ಕಿಡಿಕಾರಿದ ಆಂಗ್ಲ ಕ್ರಿಕೆಟಿಗ!ಇಂಗ್ಲೆಂಡ್‌ಗೆ ಡ್ರಾ ಮಾಡಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂಬುದು ನಾಚಿಕೆಗೇಡು; ಕಿಡಿಕಾರಿದ ಆಂಗ್ಲ ಕ್ರಿಕೆಟಿಗ!

ಹಾಗಾದರೆ ಇಂಗ್ಲೆಂಡ್ ತಂಡದ ಈ ವೇಗದ ಬೌಲರ್ ಭಾರತದ ಯಾವ ಆಟಗಾರನ ಬಗ್ಗೆ ಈ ರೀತಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ? ಮುಂದೆ ಓದಿ..

ಪರದಾಡಿದ ಪ್ರಮುಖ ಆಟಗಾರರು

ಪರದಾಡಿದ ಪ್ರಮುಖ ಆಟಗಾರರು

ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ಕೆಲ ಪ್ರಮುಖ ಆಟಗಾರರು ರನ್‌ಗಳಿಸಲು ಪರದಾಡಿದ್ದಾರೆ. ಸ್ವತಃ ನಾಯಕ ವಿರಾಟ್ ಕೊಹ್ಲಿ ಕೂಡ ಆರಂಭಿಕ ಮೂರು ಪಂದ್ಯಗಳಲ್ಲಿ ನಿಡಿದ ಪ್ರದರ್ಶನ ಆಘಾತಕಾರಿಯಾಗಿತ್ತು. ಚೇತೇಶ್ವರ್ ಪೂಜಾರ ಕೂಡ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಎದುರಿಸಲು ವಿಫಲವಾಗಿದ್ದರು. ಟೀಮ್ ಇಂಡಿಯಾದ ಉಪ ನಾಯಕ ಅಜಿಂಕ್ಯಾ ರಹಾನೆಯಂತೂ ಸರಣಿಯ ಕೊನೆಯ ಹಂತಕ್ಕೆ ಬಂದಿದ್ದರೂ ಲಯವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಒಂದು ಇನ್ನಿಂಗ್ಸ್‌ನಲ್ಲಿ ಮಾತ್ರವೇ ಅರ್ಧ ಶತಕ ದಾಖಲಿಸಿದ್ದು ರಹಾನೆ ಅತ್ಯುತ್ತಮ ಪ್ರದರ್ಶನವಾಗಿದೆ.

ಸರಣಿಯುದ್ದಕ್ಕೂ ಮಿಂಚಿದ ರೋಹಿತ್ ಶರ್ಮಾ

ಸರಣಿಯುದ್ದಕ್ಕೂ ಮಿಂಚಿದ ರೋಹಿತ್ ಶರ್ಮಾ

ಆದರೆ ಈ ಸರಣಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ್ದು ಟೀಮ್ ಇಂಡಿಯಾದ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ. ಅದರಲ್ಲೂ ರೋಹಿತ್ ಶರ್ಮಾ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಅದ್ಭುತವಾಗಿ ಎದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಓವಲ್ ಮೈದಾನದಲ್ಲಿ ಭರ್ಜರಿ ಶತಕವನ್ನು ಕೂಡ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಒಟ್ಟಾರೆ ಈ ಸರಣಿಯ್ಲಲಿ ರೋಹಿತ್ ಶರ್ಮಾ ಆಡಿದ 8 ಇನ್ನಿಂಗ್ಸ್‌ಗಳಲ್ಲಿ 369 ರನ್‌ಗಳಿಸಿದ್ದಾರೆ. ಈ ಮೂಲಕ ಭಾರತ ಇಂಗ್ಲೆಂಡ್ ನೆಲದಲ್ಲಿ ಮೇಲುಗೈ ಸಾಧಿಸಲು ರೋಹಿತ್ ಶರ್ಮಾ ಪ್ರಮುಖ ಪಾತ್ರವಹಿಸಿದ್ದಾರೆ.

ಮಾರ್ಕ್‌ವುಡ್‌ಗೆ ಸವಾಲಾದ ದಾಂಡಿಗ ಕೂಡ ರೋಹಿತ್ ಶರ್ಮಾ

ಮಾರ್ಕ್‌ವುಡ್‌ಗೆ ಸವಾಲಾದ ದಾಂಡಿಗ ಕೂಡ ರೋಹಿತ್ ಶರ್ಮಾ

ಇಂಗ್ಲೆಂಡ್ ತಮಡದ ವೇಗಿ ಮಾರ್ಜ್‌ವುಡ್ ಕೂಡ ಟೀಮ್ ಇಂಡಿಯಾದ ಅತ್ಯಂತ ಕಠಿಣ ಬ್ಯಾಟ್ಸ್‌ಮನ್ ಎಂದು ಹೆಸರಿಸಿದ್ದು ರೋಹಿತ್ ಶರ್ಮಾ ಹೆಸರನ್ನೇ. ಯಾವುದೇ ಪರಿಸ್ಥೊತಿಯಲ್ಲಾದರೂ ರೋಹಿತ್ ಶರ್ಮಾಗೆ ಬೌಲಿಂಗ್ ಮಾಡುವುದು ಬಹಳ ಕಠಿಣ ಎಂದಿದ್ದಾರೆ ಮಾರ್ಕ್‌ವುಡ್. "ರೋಹಿತ್ ಶರ್ಮಾ ಓರ್ವ ಅದ್ಭುತವಾದ ಬ್ಯಾಟ್ಸ್‌ಮನ್. ಯಾವುದೇ ಪರಿಸ್ಥಿತಿಯಲ್ಲಾದರೂ ಆತನಿಗೆ ಬೌಲಿಂಗ್ ನಡೆಸುವುದು ಬಹಳ ಕಠಿಣ" ಎಂದಿದ್ದಾರೆ ಮಾರ್ಕ್‌ವುಡ್. ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮತ್ತೋರ್ವ ಆರಂಭಿಕ ಆಟಗಾರ ಕೆಎಲ್ ರಾಹುಲ್ ಬಗ್ಗೆ ಮಾತನಾಡಿದ ಮಾರ್ಕ್‌ವುಡ್ "ರಾಹುಲ್ ಆಟ ಕೂಡ ತನಗೆ ಮೆಚ್ಚುಗೆಯಾಯಿತು. ಆತ ಬಹಳ ತಾಳ್ಮೆಯಿಂದ ಆಡಬಲ್ಲ ಆಟಗಾರ. ಆತ ಒಮ್ಮೆ ಲಯವನ್ನು ಕಂಡುಕೊಂಡರೆ ಬಹಳ ಸುಂದರವಾಗಿ ಆಡುತ್ತಾರೆ. ಭಾರತದ ಆರಂಭಿಕರಿಬ್ಬರ ವಿಕೆಟ್ ನಮಗೆ ಬಹಳ ದೊಡ್ಡ ವಿಕೆಟ್‌ ಆಗಿದೆ" ಎಂದು ಮಾರ್ಕ್‌ವುಡ್ ವಿವರಿಸಿದ್ದಾರೆ.

ಐದನೇ ಟೆಸ್ಟ್ ಮ್ಯಾಚ್ ಗೆ ಈ ಇಬ್ಬರು ಆಟಗಾರರು ಇರಲ್ಲಾ! | Oneindia Kannada
ಪ್ರತಿ ಆಟಗಾರನಿಗೂ ನಮ್ಮಲ್ಲಿ ಯೋಜನೆಗಳಿವೆ

ಪ್ರತಿ ಆಟಗಾರನಿಗೂ ನಮ್ಮಲ್ಲಿ ಯೋಜನೆಗಳಿವೆ

ಇನ್ನು ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ವೇಗದ ಬೌಲರ್ ಭಾರತ ತಂಡದ ವಿರುದ್ಧ ಬೌಲಿಂಗ್ ರಣತಂತ್ರದ ಬಗ್ಗೆ ಸುಳಿವು ನೀಡಿದರು. ಇಂಗ್ಲೆಂಡ್ ತಂಡ ಟೀಮ್ ಇಂಡಿಯಾದ ಪ್ರತಿ ಆಟಗಾರನ ವಿರುದ್ಧವೂ ಪ್ರತ್ಯೇಕವಾದ ರಣತಂತ್ರವನ್ನು ಹೆಣೆದಿದೆ ಎಂದಿದ್ದಾರೆ. "ನಾವು ತಂಡವಾಗಿ ನಮ್ಮ ಮೇಲೆ ಭರವಸೆಯನ್ನು ಹೊಂದಿದ್ದೇವೆ. ನಮ್ಮ ಬಳಿ ಪ್ರತಿ ಆತಗಾರನಿಗೂ ಪ್ರತ್ಯೇಕ ರಣತಂತ್ರವಿದೆ. ಕೆಲ ಸಂದರ್ಭದಲ್ಲಿ ಇದು ಕೆಲಸ ಮಾಡುತ್ತದೆ ಕೆಲ ಬಾರಿ ಇಲ್ಲ. ಆದರೆ ಎದುರಾಳಿ ಅತ್ಯಂತ ಬಲಿಷ್ಠ ಸಾಮರ್ಥ್ಯದ ಬ್ಯಾಟಿಂಗ್ ಲೈನ್‌ಅಪ್ ಹೊಂದಿದ್ದಾಗ ನಿಮ್ಮ ಮೇಲಿನ ನಿರೀಕ್ಷೆಗೆ ತಕ್ಕನಾಗಿ ಪ್ರದರ್ಶನ ನೀಡಲು ವಿಫಲವಾದರೆ ಎದುರಾಳಿಗಳು ನಿಮ್ಮನ್ನು ಮುಗಿಸಿಬಿಡುತ್ತಾರೆ" ಎಂದು ಮಾರ್ಕ್‌ವುಡ್ ಅಭಿಪ್ರಾಯಪಟ್ಟಿದ್ದಾರೆ.

Story first published: Thursday, September 9, 2021, 7:52 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X