ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20: 35 ಎಸೆತದಲ್ಲೇ ಶತಕ ಬಾರಿಸಿದ ಮಾರ್ಟಿನ್ ಗುಪ್ಟಿಲ್

martin guptil hits 35 balls century in county t20

ನಾರ್ಥಂಪ್ಟನ್, ಜುಲೈ 28: ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್ ಕೇವಲ 35 ಎಸೆತಗಳಲ್ಲಿಯೇ ಶತಕ ಸಿಡಿಸಿದ್ದಾರೆ.

ವೊರ್ಸೆಸ್ಟರ್‌ಶೈರ್ ಪರ ಆಡಿದ ಗುಪ್ಟಿಲ್, ನಾರ್ಥಂಪ್ಟನ್‌ಶೈರ್‌ ವಿರುದ್ಧದ ಪಂದ್ಯದಲ್ಲಿ ವೇಗದ ಶತಕದ ದಾಖಲಿಸಿದ್ದಾರೆ.

35 ಎಸೆತಗಳಲ್ಲಿ ಮೂರಂಕಿ ಗಡಿ ತಲುಪಿದ ಗುಪ್ಟಿಲ್ 38 ಎಸೆತಗಳಲ್ಲಿ 102 ರನ್ ಚಚ್ಚಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳಿದ್ದವು.

ಇನ್ನಿಂಗ್ಸ್ ಆಡದೆಯೇ ಶ್ರೀಲಂಕಾ ವಿರುದ್ಧ ಪಂದ್ಯ ಗೆದ್ದ ಭಾರತದ ಯುವಕರು! ಇನ್ನಿಂಗ್ಸ್ ಆಡದೆಯೇ ಶ್ರೀಲಂಕಾ ವಿರುದ್ಧ ಪಂದ್ಯ ಗೆದ್ದ ಭಾರತದ ಯುವಕರು!

ಐಪಿಎಲ್‌ನಲ್ಲಿ ಆರ್‌ಸಿಬಿಯ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ಧ 2013ರಲ್ಲಿ 30 ಎಸೆತಗಳಲ್ಲಿಯೇ ಶತಕ ದಾಖಲಿಸಿದ್ದು ಟಿ20ಯ ಇದುವರೆಗಿನ ಅತಿ ವೇಗದ ಶತಕವಾಗಿದೆ.

ಭಾರತದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ದೆಹಲಿಯ ರಿಷಬ್ ಪಂತ್, ಹಿಮಾಚಲ ಪ್ರದೇಶದ ವಿರುದ್ಧ ಕೇವಲ 32 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಮಿಸ್ಲ್‌ಸೆಕ್ಸ್ ತಂಡದ ವಿರುದ್ಧ ಕೆಂಟ್ ಕೌಂಟಿ ಆಟಗಾರ ಆಂಡ್ರೂ ಸೈಮಂಡ್ಸ್ 34 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಡೇಲ್ ಸ್ಟೇನ್ ರ ಕಡೆಯ ಏಕದಿನ ಪಂದ್ಯಾಟವಾಗಲಿದೆ 2019ರ ವಿಶ್ವಕಪ್! ಡೇಲ್ ಸ್ಟೇನ್ ರ ಕಡೆಯ ಏಕದಿನ ಪಂದ್ಯಾಟವಾಗಲಿದೆ 2019ರ ವಿಶ್ವಕಪ್!

ನಾರ್ಥಂಪ್ಟನ್ ಶೈರ್ ನೀಡಿದ್ದ 188 ರನ್‌ಗಳ ಬೃಹತ್ ಗುರಿಯನ್ನು ಗುಪ್ಟಿಲ್ ಅವರ ಸಿಡಿಲಬ್ಬರದ ಶತಕದ ನೆರವಿನಿಂದ ವೊರ್ಸೆಸ್ಟರ್‌ಶೈರ್ ಕೇವಲ 13.1 ಓವರ್‌ಗಳಲ್ಲಿಯೇ ಗುಪ್ಟಿಲ್ ಅವರ ಏಕಮಾತ್ರ ವಿಕೆಟ್ ಕಳೆದುಕೊಂಡು ತಲುಪಿತು.

ಗುಪ್ಟಿಲ್ ಅವರಿಗೆ ಸೂಕ್ತ ಬೆಂಬಲ ನೀಡಿದ ಮತ್ತೊಬ್ಬ ಆರಂಭಿಕ ಆಟಗಾರ ಜೋ ಕ್ಲಾರ್ಕ್ 33 ಎಸೆತಗಳಲ್ಲಿ 61 ರನ್ ಬಾರಿಸಿ ಅಜೇಯರಾಗಿ ಉಳಿದರು. ಇವರಿಬ್ಬರೂ ಮೊದಲ ವಿಕೆಟ್‌ಗೆ 162 ರನ್ ಕಲೆಹಾಕಿದರು.

Story first published: Saturday, July 28, 2018, 10:59 [IST]
Other articles published on Jul 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X