ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ವಿಶ್ವ ದಾಖಲೆ ಸರಿಗಟ್ಟಿದ ಮಾರ್ಟಿನ್ ಗಪ್ಟಿಲ್!

Martin Guptill Goes Past Rohit Sharma To Record Most Sixes In T20Is

ಡುನೆಡಿನ್: ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್ ಶರ್ಮಾ ಸಿಕ್ಸ್ ಬಾರಿಸುವುದಕ್ಕೇನೇ ಹೆಚ್ಚು ಫೇಮಸ್. ಇದಕ್ಕಾಗೇ ರೋಹಿತ್‌ಗೆ 'ಹಿಟ್‌ಮ್ಯಾನ್' ಅನ್ನೋ ಪ್ರೀತಿಯ ಹೆಸರಿದೆ. ಟೆಸ್ಟ್‌, ಏಕದಿನ ಮತ್ತು ಟಿ20ಐ ಈ ಮೂರೂ ಕ್ರಿಕೆಟ್ ಮಾದರಿಗಳಲ್ಲಿ ರೋಹಿತ್ ಅತ್ಯಧಿಕ ಸಿಕ್ಸರ್‌ಗಳ ದಾಖಲೆ ಹೊಂದಿದ್ದಾರೆ. ಆದರೆ ನ್ಯೂಜಿಲೆಂಡ್ ಸ್ಫೋಟಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಹಿಟ್‌ಮ್ಯಾನ್‌ ಹೆಸರಿನಲ್ಲಿದ್ದ ಸಿಕ್ಸ್ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ವಿಜಯ್‌ ಹಜಾರೆ: ಸ್ಫೋಟಕ ಬ್ಯಾಟಿಂಗ್‌ಗಾಗಿ ಇತಿಹಾಸ ಬರೆದ ಪೃಥ್ವಿ ಶಾ!ವಿಜಯ್‌ ಹಜಾರೆ: ಸ್ಫೋಟಕ ಬ್ಯಾಟಿಂಗ್‌ಗಾಗಿ ಇತಿಹಾಸ ಬರೆದ ಪೃಥ್ವಿ ಶಾ!

ಗುರುವಾರ (ಫೆಬ್ರವರಿ 25) ಡುನೆಡಿನ್‌ನ ಯುನಿವರ್ಸಿಟಿ ಓವಲ್‌ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್-ಆಸ್ಟ್ರೇಲಿಯಾ ದ್ವಿತೀಯ ಟಿ20ಐ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಸಿಕ್ಸ್‌ನಲ್ಲಿ ರೋಹಿತ್ ವಿಶ್ವದಾಖಲೆ ಸರಿಗಟ್ಟಿದ್ದಾರೆ. ಟಿ20ಐನಲ್ಲಿ ಅತೀ ಹೆಚ್ಚು ಸಿಕ್ಸ್‌ ದಾಖಲೆಪಟ್ಟಿಯಲ್ಲಿ ಈಗ ಗಪ್ಟಿಲ್ ಅಗ್ರ ಸ್ಥಾನದಲ್ಲಿದ್ದಾರೆ.

ಗಪ್ಟಿಲ್ ಸ್ಫೋಟಕ ಬ್ಯಾಟಿಂಗ್

ಗಪ್ಟಿಲ್ ಸ್ಫೋಟಕ ಬ್ಯಾಟಿಂಗ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್‌ನಿಂದ ಆರಂಭಿಕ ಬ್ಯಾಟ್ಸ್‌ಮನ್‌ ಮಾರ್ಟಿನ್ ಗಪ್ಟಿಲ್ 50 ಎಸೆತಗಳಲ್ಲಿ 97 ರನ್ ಬಾರಿಸಿದ್ದಾರೆ. ಇದರಲ್ಲಿ 6 ಫೋರ್ಸ್, 8 ಸಿಕ್ಸರ್ ಸೇರಿತ್ತು. ಈ 8 ಸಿಕ್ಸರ್‌ಗಳ ಸಾಧನೆ ಅವರನ್ನು ಟಿ20ಐ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಮೊದಲನೇ ಬ್ಯಾಟ್ಸ್‌ಮನ್‌ ಸಾಲಿಗೆ ತಂದು ನಿಲ್ಲಿಸಿದೆ.

ರೋಹಿತ್ ದಾಖಲೆ ಬದಿಗೆ

ರೋಹಿತ್ ದಾಖಲೆ ಬದಿಗೆ

ಗುರುವಾರದ ಪಂದ್ಯದಲ್ಲಿ 8 ಸಿಕ್ಸ್‌ ಬಾರಿಸಿದ್ದರಿಂದ ಟಿ20ಐನಲ್ಲಿ ಗಪ್ಟಿಲ್ ಒಟ್ಟಾರೆ 132 ಸಿಕ್ಸರ್‌ಗಳನ್ನು ಬಾರಿಸಿದಂತಾಗಿದೆ. ಹೀಗಾಗಿ ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ರೋಹಿತ್ ಕೆಳಗಿಳಿಸಿದ್ದಾರೆ. ಟಿ20ಐನಲ್ಲಿ ರೋಹಿತ್ ಒಟ್ಟು 127 ಸಿಕ್ಸರ್‌ಗಳ ದಾಖಲೆ ಹೊಂದಿದ್ದರು.

ಟಿ20ಐ ಸಿಕ್ಸ್‌ ದಾಖಲೆ ಪಟ್ಟಿ

ಟಿ20ಐ ಸಿಕ್ಸ್‌ ದಾಖಲೆ ಪಟ್ಟಿ

1. ಮಾರ್ಟಿನ್ ಗಪ್ಟಿಲ್, ನ್ಯೂಜಿಲೆಂಡ್, 132 ಸಿಕ್ಸರ್
2. ರೋಹಿತ್ ಶರ್ಮಾ, ಭಾರತ, 127 ಸಿಕ್ಸರ್
3. ಇಯಾನ್ ಮಾರ್ಗನ್, ಇಂಗ್ಲೆಂಡ್, 113 ಸಿಕ್ಸರ್
4. ಕಾಲಿನ್ ಮುನ್ರೋ, ನ್ಯೂಜಿಲೆಂಡ್, 107
5. ಕ್ರಿಸ್ ಗೇಲ್, ವೆಸ್ಟ್‌ ಇಂಡೀಸ್, 105

ಸಂಕ್ಷಿಪ್ತ ಸ್ಕೋರ್‌ಕಾರ್ಡ್

ಸಂಕ್ಷಿಪ್ತ ಸ್ಕೋರ್‌ಕಾರ್ಡ್

* ನ್ಯೂಜಿಲೆಂಡ್: ಮಾರ್ಟಿನ್ ಗಪ್ಟಿಲ್ 97, ಕೇನ್ ವಿಲಿಯಮ್ಸನ್ 53, ಜೇಮ್ಸ್ ನೀಶಮ್ 45, ಟೋಟಲ್ ಸ್ಕೋರ್-219-7 (20 Ov)
* ಆಸ್ಟ್ರೇಲಿಯಾ: ಮ್ಯಾಥ್ಯೂ ವೇಡ್ 24, ಆ್ಯರನ್ ಫಿಂಚ್ 12, ಜೋಶ್ ಫಿಲಿಪ್ 45, ಮಾರ್ಕಸ್ ಸ್ಟೋಯ್ನಿಸ್ 78, ಡೇನಿಯಲ್ ಸ್ಯಾಮ್ಸ್ 41, ಟೋಟಲ್ ಸ್ಕೋರ್‌-215-8 (20 Ov)
* ಫಲಿತಾಂಶ: ನ್ಯೂಜಿಲೆಂಡ್‌ಗೆ 4 ರನ್ ರೋಚಕ ಜಯ.

Story first published: Friday, February 26, 2021, 8:50 [IST]
Other articles published on Feb 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X