ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಸಿಎಲ್ : ಲಿಬ್ರಾ ತಂಡದಲ್ಲಿ ಗಂಗೂಲಿ ಹಾಗೂ ಕಾಲಿಸ್

By Mahesh

ದುಬೈ, ಡಿ.07: ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ (ಎಂಸಿಎಲ್) ಟ್ವೆಂಟಿ20 ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲು ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಕ್ರಿಕೆಟ್ ಕ್ಷೇತ್ರದ ದಿಗ್ಗಜರು ಸೇರಿದಂತೆ ಸುಮಾರು 250 ಮಂದಿ ಆಟಗಾರರು ಹರಾಜಿಗೆ ಸಿದ್ಧವಾಗಿದ್ದಾರೆ.

ಮಾಸ್ಟರ್ ಕ್ರಿಕೆಟ್ ಲೀಗ್ ಗೆ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಅನುಮತಿ ನೀಡಿರುವುದರಿಂದ ಈ ಲೀಗ್ ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮಾನ್ಯತೆ ಕೂಡಾ ಸಿಕ್ಕಿದೆ. ಟಿ20 ಮಾದರಿಯ ಈ ಪಂದ್ಯಾವಳಿಯಲ್ಲಿ ಆರು ತಂಡಗಳು ಭಾಗವಹಿಸಲಿವೆ. ಜನವರಿ 28, 2016ರಿಂದ ಮೊದಲ ಆವೃತ್ತಿ ಶುರುವಾಗಲಿದೆ ಫೆಬ್ರವರಿ 14ರ ತನಕ ನಡೆಯಲಿದೆ. [ಮಾಸ್ಟರ್ಸ್ ಚಾಂಪಿಯನ್ಸ್ ಲೀಗ್ ಟಿ 20 ಫುಲ್ ಗೈಡ್]

LIVE: Masters Champions League (MCL) Auction: Lara, Kallis sold

ರಾಶಿ ಆಧಾರಿತ ತಂಡಗಳು: ಜೆಮಿನಿ, ಲಿಬ್ರಾ, ಲಿಯೋ, ಸಾಜಿಟಾರಿಯಸ್, ವಿರ್ಗೋ, ಕಾಪ್ರಿಕೊರ್ನ್

ಐಕಾನ್ ಆಟಗಾರರು 1,00,000 ಡಾಲರ್ ಮೂಲಧನ

* ಪಾಲ್ ಕಾಲಿಂಗ್ ವುಡ್ (ಇಂಗ್ಲೆಂಡ್) 1,40,000 ಡಾಲರ್ ಮೊತ್ತಕ್ಕೆ ಟೀಂ ಕಾಪ್ರಿಕೋರ್ನ್ ಪಾಲು
* ಮುತ್ತಯ್ಯ ಮುರಳಿಧರನ್ (ಶ್ರೀಲಂಕಾ) 1,20,000 ಡಾಲರ್ ಮೊತ್ತಕ್ಕೆ ಟೀಂ ಜೆಮಿನಿ ಪಾಲು
* ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ) 1,75,000 ಡಾಲರ್ ಮೊತ್ತಕ್ಕೆ ಟೀಂ ಲಿಬ್ರಾ ಪಾಲು
* ಬ್ರೆಟ್ ಲೀ (ಆಸ್ಟ್ರೇಲಿಯಾ) 1,00,000 ಡಾಲರ್ ಮೊತ್ತಕ್ಕೆ ಟೀಂ ವಿರ್ಗೋ ಪಾಲು
* ಆಡಂ ಗಿಲ್ ಕ್ರಿಸ್ಟ್ (ಆಸ್ಟ್ರೇಲಿಯಾ) 1,70,000 ಡಾಲರ್ ಮೊತ್ತಕ್ಕೆ ಟೀಂ ಸಾಜಿಟಾರಿಯಸ್ ಪಾಲು
* ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) 1,00,000 ಡಾಲರ್ ಮೊತ್ತಕ್ಕೆ ಟೀಂ ಲಿಯೋ ಪಾಲು

Sehwag


ಎ+ (ಮೂಲಧನ 30,000 ಡಾಲರ್)

* ಜಾಂಟಿ ರೋಡ್ಸ್ (ದಕ್ಷಿಣ ಆಫ್ರಿಕಾ) 40,000 ಡಾಲರ್ ಮೊತ್ತಕ್ಕೆ ಟೀಂ ವಿರ್ಗೋ ಪಾಲು
* ಹರ್ಷಲ್ ಗಿಬ್ಸ್ (ದಕ್ಷಿಣ ಆಫ್ರಿಕಾ) 40,000 ಡಾಲರ್ ಮೊತ್ತಕ್ಕೆ ಟೀಂ ಲಿಯೋ ಪಾಲು
* ಬ್ರೆಂಡನ್ ಟೇಲರ್ (ಜಿಂಬಾಬ್ವೆ) 70,000 ಡಾಲರ್ ಮೊತ್ತಕ್ಕೆ ಟೀಂ ಲಿಯೋ ಪಾಲು
* ಆಂಡ್ರ್ಯೂ ಸೈಮಂಡ್ಸ್ (ಆಸ್ಟ್ರೇಲಿಯಾ) 120,000 ಡಾಲರ್ ಮೊತ್ತಕ್ಕೆ ಟೀಂ ಕಾಪ್ರಿಕೋರ್ನ್ ಪಾಲು
Gnaguly

ಎಂಸಿಎಲ್ ನಲ್ಲಿರುವ ಲೆಜೆಂಡ್ಸ್: [ಮಾಸ್ಟರ್ ಲೀಗ್: ಲಿಬ್ರಾ ಲೆಜೆಂಡ್ ತಂಡದಲ್ಲಿ ಗಂಗೂಲಿ]
* ಟೀಂ ಕಾಪ್ರಿಕೊರ್ನ್: ಅಬ್ದುಲ್ ರಜಾಕ್ (ಪಾಕಿಸ್ತಾನ, ಮೈಕಲ್ ವಾಘನ್ (ಇಂಗ್ಲೆಂಡ್)
* ಟೀಂ ಜೆಮಿನಿ : ವೀರೇಂದ್ರ ಸೆಹ್ವಾಗ್ (ಭಾರತ), ಕುಮಾರ್ ಸಂಗಕ್ಕಾರ (ಶ್ರೀಲಂಕಾ)
* ಟೀಂ ಲಿಯೋ : ಸ್ಕಾಟ್ ಸ್ಟೈರಿಸ್ (ನ್ಯೂಜಿಲೆಂಡ್), ಹೀತ್ ಸ್ಟ್ರೈಕ್ (ಜಿಂಬಾಬ್ವೆ)
* ಟೀಂ ಲಿಬ್ರಾ: ಸೌರವ್ ಗಂಗೂಲಿ (ಭಾರತ), ಗ್ರಹಾಂ ಸ್ವಾನ್ (ಇಂಗ್ಲೆಂಡ್)
* ಟೀಂ ಸಾಜಿಟಾರಿಯಸ್: ಮಹೇಲ ಜಯವರ್ದನೆ (ಶ್ರೀಲಂಕಾ), ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್)
* ಟೀಂ ವಿರ್ಗೋ : ಗ್ರಹಾಂ ಸ್ಮಿತ್ (ದಕ್ಷಿಣ ಆಫ್ರಿಕಾ), ಅಜರ್ ಮಹಮದ್ (ಪಾಕಿಸ್ತಾನ)

ಕ್ರೀಡಾಂಗಣಗಳು:
* ಶಾರ್ಜಾ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ, ಶಾರ್ಜಾ
* ಶೇಖ್ ಜಾಯೇದ್ ಕ್ರಿಕೆಟ್ ಸ್ಟೇಡಿಯಂ, ಅಬುಧಾಬಿ
* ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ದುಬೈ

Masters Champions League (MCL)

ಅರ್ಹತೆ, ನಿಯಮ:
* ವೃತ್ತಿಪರ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಆಟಗಾರರಿಗೆ ಮಾತ್ರ ಅವಕಾಶ.
* 6 ತಂಡಗಳು ರೌಂಡ್ ರಾಬಿನ್ ಮಾದರಿಯಲ್ಲಿ ಆಡಲಿವೆ.
* ಪ್ರತಿ ತಂಡ ಮತ್ತೊಂದು ತಂಡವನ್ನು ಒಮ್ಮೆಯಾದರೂ ಎದುರಿಸಬೇಕಾಗುತ್ತದೆ.
* ಟಾಪ್ 4 ತಂಡಗಳು ಸೆಮಿಫೈನಲ್ಸ್ ತಲುಪಲಿವೆ.
* ಲೀಗ್ ಹಂತದಲ್ಲಿ 5 ಪಂದ್ಯಗಳು ಪ್ರತಿ ತಂಡಗಳು ಆಡಬೇಕಾಗುತ್ತದೆ.

(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X