ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಭಾರತೀಯ ಕ್ರಿಕೆಟಿಗನ ಬೆಳವಣಿಗೆ ಅಮೋಘ: ಆಸಿಸ್ ದಿಗ್ಗಜ ಹೊಗಳಿದ್ದು ಯಾರನ್ನು ಗೊತ್ತಾ?

Matthew Hayden praises Hardik Pandya said He has grown a lot as a cricketer

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಎಡವಿದರೂ ಬ್ಯಾಟಿಂಗ್ ವಿಭಾಗದ ಪ್ರದರ್ಶನ ಅದ್ಭುತವಾಗಿತ್ತು. ಆಸ್ಟ್ರೇಲಿಯಾದ ಬೌಲರ್‌ಗಳನ್ನು ಸಮರ್ಥವಾಗಿ ದಂಡಿಸಿದ ಭಾರತೀಯ ದಾಂಡಿಗರು ಮಿಂಚಿ ಹರಿಸಿದರು. ಈ ಮೂಲಕ ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಪ್ರಮುಖ ಆಟಗಾರರಾದ ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ನೀಡಿದ ಸ್ಪೋಟಕ ಪ್ರದರ್ಶನದ ಕಾರಣದಿಂದಾಗಿ ಭಾರತ ಬೃಹತ್ ಮೊತ್ತದ ಗುರಿಯನ್ನು ಆಸಿಸ್ ತಂಡಕ್ಕೆ ನೀಡಿತ್ತು.

ಆದರೆ ಬೌಲಿಂಗ್ ವಿಭಾಗದ ನೀರಸ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಹೀಗಾಗಿ ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಆದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಓರ್ವ ಆಟಗಾರ ನೀಡಿದ ಪ್ರದರ್ಶನದ ಬಗ್ಗೆ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಮ್ಯಾಥ್ಯೂ ಹೇಡನ್ ಪ್ರತಿಕ್ರಿಯೆ ನೀಡಿದ್ದು ವಿಶೇಷ ಮಾತುಗಳನ್ನಾಡಿದ್ದಾರೆ. ಭಾರತದ ಈ ಆಟಗಾರನ ಬೆಳವಣಿಗೆ ಅತ್ಯಂತ ಅಮೋಘವಾಗಿದೆ ಎಂದು ಹೇಡನ್ ಪ್ರಶಂಸಿದ್ದಾರೆ.

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್: ಇಂಡಿಯಾ ಲೆಜೆಂಡ್ಸ್‌ಗೆ ಇಂದು ಇಂಗ್ಲೆಂಡ್ ದಿಗ್ಗಜರ ಸವಾಲುರೋಡ್ ಸೇಫ್ಟಿ ವರ್ಲ್ಡ್ ಸಿರೀಸ್: ಇಂಡಿಯಾ ಲೆಜೆಂಡ್ಸ್‌ಗೆ ಇಂದು ಇಂಗ್ಲೆಂಡ್ ದಿಗ್ಗಜರ ಸವಾಲು

ಹಾರ್ದಿಕ್ ಬಗ್ಗೆ ಹೇಡನ್ ವಿಶೇಷ ಮಾತು

ಹಾರ್ದಿಕ್ ಬಗ್ಗೆ ಹೇಡನ್ ವಿಶೇಷ ಮಾತು

ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಹೊಗಳಿಕೆಯ ಮಾತುಗಳನ್ನಾಡಿದ್ದು ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ. ಇತ್ತೀಚಿನ ದಿನಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಅನೇಕ ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್ ಪ್ರದರ್ಶಿಸಿರುವ ಹಾರ್ದಿಕ್ ಪಾಂಡ್ಯ ತಂಡದ ಪ್ರಮುಖ ಭಾಗವಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿಯೂ ಸ್ಪೋಟಕ ಪ್ರದ್ಶನ ನೀಡಿರುವ ಹಾರ್ದಿಕ್ 30 ಎಸೆತಗಳಲ್ಲಿ 71 ರನ್‌ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣವಾಗಿದ್ದರು. ಈ ಮೂಲಕ ಹಾರ್ದಿಕ್ ಪಾಂಡ್ಯ ವಿಶ್ವಕಪ್‌ನಲ್ಲಿಯೂ ಭಾರತ ತಂಡದ ಪರವಾಗಿ ಪ್ರಮುಖ ಪಾತ್ರವಹಿಸುವ ಸೂಚನೆ ನೀಡಿದ್ದಾರೆ.

ಹಾರ್ದಿಕ್ ಆತ್ಮವಿಶ್ವಾಸವೇ ಇಂಥಾ ಪ್ರದರ್ಶನಕ್ಕೆ ಕಾರಣ

ಹಾರ್ದಿಕ್ ಆತ್ಮವಿಶ್ವಾಸವೇ ಇಂಥಾ ಪ್ರದರ್ಶನಕ್ಕೆ ಕಾರಣ

ಈ ಸಂದರ್ಭದಲ್ಲಿ ಮ್ಯಾಥ್ಯೂ ಹೇಡನ್ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಂದ ಇಂಥಾ ಅದ್ಭುತ ಪ್ರದರ್ಶನ ಬಾರಲು ಆತನಲ್ಲಿರುವ ಆತ್ಮವಿಶ್ವಾಸವೇ ಕಾರಣ ಎಂದಿದ್ದಾರೆ. "ಆತನಲ್ಲಿ ಅದ್ಭುತವಾದ ಆತ್ಮವಿಶ್ವಾಸವಿದೆ. ಆತನ ಪ್ರತಿಭೆ ಒಂದು ಭಾಗವಾಗಿರಬಹುದು. ಆದರೆ ಆತನಲ್ಲಿರುವ ತನ್ನ ಮೇಲಿನ ನಂಬಿಕೆಯಿಂದಾಗಿಯೇ ಆತ ಇಂಥಾ ಪ್ರದರ್ಶನವನ್ನು ನೀಡಲು ಸಾಧ್ಯವಾಗುತ್ತಿದೆ. ಆತ ಐಪಿಎಲ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿರುವುದನ್ನು ನೋಡಿದ್ದೇವೆ. ಆ ಕ್ರಮಾಂಕದಲ್ಲಿ ಹಾರ್ದಿಕ್ ಹೇಗೆ ಬ್ಯಾಟಿಂಗ್ ನಡೆಸಬಲ್ಲ ಎಂಬ ಅನುಮಾನಗಳು ನಮ್ಮೆಲ್ಲರಲ್ಲೂ ಇದ್ದವು. ಆದರೆ ಹಾರ್ದಿಕ್ ಅದ್ಭುತವಾಗಿ ಬ್ಯಾಟಿಂಗ್ ನಡೆಸಿದ್ದರು" ಎಂದು ಮ್ಯಾಥ್ಯೂ ಹೇಡನ್ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಮಾತನಾಡುತ್ತಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆಟಗಾರನಾಗಿ ಬೆಳವಣಿಗೆ ಅಮೋಘ

ಆಟಗಾರನಾಗಿ ಬೆಳವಣಿಗೆ ಅಮೋಘ

ಇನ್ನು ಇದೇ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಆಟಗಾರನಾಗಿ ಸಾಧಿಸಿರುವ ಪ್ರಗತಿಯ ಬಗ್ಗೆಯೂ ಹೇಡನ್ ವಿಶೇಷ ಮಾತುಗಳನ್ನಾಡಿದ್ದಾರೆ. "ಆತ ನಿಜಕ್ಕೂ ಉತ್ತಮವಾಗಿ ಹೊಂದಿಕೊಳ್ಳಬಲ್ಲಂತಾ ಕ್ರಿಕೆಟಿಗ. ಕ್ರಿಕೆಟಿಗನಾಗಿ ಆತನ ಬೆಳವಣಿಗೆ ನಿಜಕ್ಕೂ ಅಮೋಘವಾಗಿದೆ. ಆತನಲ್ಲಿರುವ ವಿಶೇಷ ಸಾಮರ್ಥ್ಯವೇ ತನ್ನ ಮೇಲಿರುವ ನಂಬಿಕೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಒತ್ತಡವನ್ನು ಅರ್ಥ ಮಾಡಿಕೊಂಡು ಅದನ್ನು ನಿಭಾಯಿಸಲು ಮತ್ತು ಅದನ್ನು ಸಾಧಿಸಲು ಪೂರಕವಾದ ಸಾಮರ್ಥ್ಯವನ್ನು ಬೆಳೆಸಿಕೊಂಡಿರುವುದು ಆತನನ್ನು ಇನ್ನಷ್ಟು ಉನ್ನತ ಮಟ್ಟಕ್ಕೇರಿಸುತ್ತದೆ" ಎಂದಿದ್ದಾರೆ ಮ್ಯಾಥ್ಯೂ ಹೇಡನ್.

ಎರಡನೇ ಪಂದ್ಯಕ್ಕೆ ಸಜ್ಜಾದ ಇತ್ತಡಗಳು

ಎರಡನೇ ಪಂದ್ಯಕ್ಕೆ ಸಜ್ಜಾದ ಇತ್ತಡಗಳು

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ನಡೆಯಲಿದೆ. ಈ ಪಂದ್ಯವನ್ನಾಡಲು ಎರಡು ತಂಡಗಳು ಕೂಡ ಮೊಹಾಲಿಯಿಂದ ನಾಗ್ಪುರಕ್ಕೆ ಬಂದಿಳಿದಿದ್ದು ಅಭ್ಯಾಸ ಆರಂಭಿಸಿದೆ. ಮೊದಲ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದ ಬಳಿಕ ಸರಣಿಯಲ್ಲಿ ಜೀವಂತವಾಗುಳಿಯಬೇಕಾದರೆ ಎರಡನೇ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಬೇಕಾದರೆ ಈ ಸರಣಿಯ ಗೆಲುವು ಭಾರತ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ.

Story first published: Thursday, September 22, 2022, 14:08 [IST]
Other articles published on Sep 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X