ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೀಮಿತ ಓವರ್‌ನಲ್ಲಿ ರೋಹಿತ್ ಅಲಭ್ಯತೆ ಆಸ್ಟ್ರೇಲಿಯಾಗೆ ಅನುಕೂಲ: ಮ್ಯಾಕ್ಸ್‌ವೆಲ್

Maxwell feels Rohits absence is a big positive for the hosts

ಈ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರೋಹಿತ್ ಶರ್ಮಾ ಸೀಮಿತ ಓವರ್‌ಗಳಲ್ಲಿ ಕಣಕ್ಕಿಳಿಯುತ್ತಿಲ್ಲ. ಇದು ದೊಡ್ಡ ಭಾರತಕ್ಕೆ ಹಿನ್ನೆಡೆಯಾದರೆ ಆತಿಥೇಯ ಆಸ್ಟ್ರೇಲಿಯಾಗೆ ಅನುಕೂಲವಾಗಲಿದೆ ಎಂದು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿನ ಪಂದ್ಯದ ಸಂದರ್ಭದಲ್ಲಿ ರೋಹಿತ್ ಶರ್ಮಾ ಗಾಯಗೊಂಡಿದ್ದರು, ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಅವರನ್ನು ಚುಟುಕು ಸೀಮಿತ ಓವರ್‌ಗಳ ಸರಣಿಯಿಂದ ಹೊರಗಿಡಲಾಯಿತು. ಕೇವಲ ಟೆಸ್ಟ್ ಪಂದ್ಯಗಳಿಗೆ ಮಾತ್ರವೇ ಅಂತಿಮ ಹಂತದಲ್ಲಿ ರೋಹಿತ್ ಶರ್ಮಾ ಅವರನ್ನು ಸೇರ್ಪಡೆಗೊಳಿಸಲಾಗಿದೆ.

ತಂದೆಯ ಕನಸನ್ನು ಪೂರೈಸಲು ತಂಡದ ಜೊತೆಗೆ ಉಳಿದುಕೋ: ತಾಯಿಯ ಮಾತು ನೆನಪಿಸಿದ ಸಿರಾಜ್ತಂದೆಯ ಕನಸನ್ನು ಪೂರೈಸಲು ತಂಡದ ಜೊತೆಗೆ ಉಳಿದುಕೋ: ತಾಯಿಯ ಮಾತು ನೆನಪಿಸಿದ ಸಿರಾಜ್

"ರೋಹಿತ್ ಶರ್ಮಾ ಓರ್ವ ಅದ್ಭುತವಾದ ಆಟಗಾರ. ಏಕದಿನದಲ್ಲಿ ಮೂರು ದ್ವಿಶತಕಗಳನ್ನು ದಾಖಲಿಸಿರುವ ಅವರು ಸ್ಥಿರವಾದ ಪ್ರದರ್ಶನ ನೀಡುತ್ತಾರೆ. ಯಾವುದೇ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರಂತಾ ಆಟಗಾರ ಇಲ್ಲದಿದ್ದರೆ ಅದು ನಿಮಗೆ ಸಕಾರಾತ್ಮಕ ಅಂಶ" ಎಂದು ಮಾಧ್ಯಮ ಸಂವಾದದಲ್ಲಿ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮ್ಯಾಕ್ಸ್‌ವೆಲ್ ಟೀಮ್ ಇಮಡಿಯಾ ರೋಹಿತ್ ಶರ್ಮಾ ಅವರನ್ನು ಹೊರತುಪಡಿಸಿಯೂ ಅತ್ಯುತ್ತಮ ಆಟಗಾರನ್ನು ಹೊಂದಿದೆ. ಇದನ್ನು ಎಲ್ಲಾ ತಂಡಗಳು ಕೂಡ ಬಯಸುತ್ತದೆ ಎಂದಿದ್ದಾರೆ. ಕೆಎಲ್ ರಾಹುಲ್ ಅವರ ಪ್ರದರ್ಶನವನ್ನು ನಾವು ಐಪಿಎಲ್‌ನಲ್ಲಿ ನೊಡಿದ್ದೇವೆ. ಅವರು ಆರಂಭಿಕನಾಗಿ ಕಣಕ್ಕಿಳಿಯದಿದ್ದರೂ ಆತನೋರ್ವ ಅದ್ಭುತ ಆಟಗಾರ ಎಂದು ಮ್ಯಾಕ್ಸವೆಲ್ ಹೇಳಿದ್ದಾರೆ.

ಭಾರತ 'ಎ' ವಿರುದ್ಧದ ಪಂದ್ಯಕ್ಕೆ ಮಿಚೆಲ್ ಮಾರ್ಷ್ ಕಮ್‌ಬ್ಯಾಕ್‌ ಸಾಧ್ಯತೆಭಾರತ 'ಎ' ವಿರುದ್ಧದ ಪಂದ್ಯಕ್ಕೆ ಮಿಚೆಲ್ ಮಾರ್ಷ್ ಕಮ್‌ಬ್ಯಾಕ್‌ ಸಾಧ್ಯತೆ

ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಟೀಮ್ ಇಂಡಿಯಾ ಆರಂಬಿಕರಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಖಚಿತವಾಗಿಲ್ಲ. ಶಿಖರ್ ಧವನ್ ಜೊತೆಯಲ್ಲಿ ಮಯಾಂಕ್ ಅಗರ್ವಾಲ್ ಅಥವಾ ಶುಭ್ಮನ್ ಗಿಲ್ ಕಣಕ್ಕಿಳಿಯುವ ಸಾಧ್ಯತೆಯಿದೆ.

Story first published: Tuesday, November 24, 2020, 9:50 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X