ಐಪಿಎಲ್ 2020: ಇನ್ಯಾವ ತಂಡದಲ್ಲೂ ಇಷ್ಟು ಅವಕಾಶ ಮ್ಯಾಕ್ಸ್‌ವೆಲ್‌ಗೆ ಸಿಗುತ್ತಿರಲಿಲ್ಲ: ಗಂಭೀರ್

ಈ ಬಾರಿಯ ಐಪಿಎಲ್‌ನಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ಅದ್ಬುತ ಪ್ರದರ್ಶನವನ್ನು ನೀಡುವ ಮೂಲಕ ಮಿಂಚಿದ್ದಾರೆ. ಹಾಗೆಯೇ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಹಲವು ಆಟಗಾರರು ತಮ್ಮ ಮೇಲಿನ ಭರವಸೆಯನ್ನು ಹುಸಿಗೊಳಿಸಲಿಲ್ಲ. ಆದರೆ ಕೆಲ ಆಟಗಾರರು ಕೋಟಿಗಟ್ಟಲೆ ಬೆಲೆಗೆ ಹರಾಜಾದರೂ ಕೂಡ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಅದರಲ್ಲಿ ಬರುವ ಪ್ರಮುಖ ಹೆಸರು ಗ್ಲೆನ್ ಮ್ಯಾಕ್ಸ್‌ವೆಲ್.

ಮ್ಯಾಕ್ಸ್‌ವೆಲ್ ಈ ಬಾರಿಯ ಟೂರ್ನಿಯಲ್ಲಿ ಅತಿ ಕಳಪೆ ಪ್ರದರ್ಶನವನ್ನು ನೀಡಿ ಟೀಕೆಗೆ ಒಳಗಾಗಿದ್ದಾರೆ. ಪಂಜಾಬ್ ಪರ ಕಣಕ್ಕಿಳಿಯುತ್ತಿರುವ ಮ್ಯಾಕ್ಸ್‌ವೆಲ್ ಸತತ ವೈಫಲ್ಯದ ಬಳಿಕವೂ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದು ಬೇರೆ ಯಾವ ಫ್ರಾಂಚೈಸಿ ಪರ ಆಡುತ್ತಿದ್ದರೂ ಮ್ಯಾಕ್ಸ್‌ವೆಲ್ ಇಷ್ಟು ದೀರ್ಘ ಕಾಲ ಆಡುವ ಬಳಗದಲ್ಲಿ ಖಂಡಿತಾ ಕಾಣಿಸಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.

ಮಂದೀಪ್ ಸಿಂಗ್‌ 'ಕೆಚ್ಚೆದೆಯ ಆಟಗಾರ' ಎಂದು ಶ್ಲಾಘಿಸಿದ ವಿರಾಟ್ ಕೊಹ್ಲಿ

ಆಲ್‌ರೌಂಡರ್ ಆದ ಕಾರಣ ಅವಕಾಶ ಪಡೆದ ಮ್ಯಾಕ್ಸ್‌ವೆಲ್

ಆಲ್‌ರೌಂಡರ್ ಆದ ಕಾರಣ ಅವಕಾಶ ಪಡೆದ ಮ್ಯಾಕ್ಸ್‌ವೆಲ್

10.75 ಕೋಟಿಗೆ ಪಂಜಾಬ್‌ ತಂಡಕ್ಕೆ ಹರಾಜಾಗಿದ್ದ ಮ್ಯಾಕ್ಸ್‌ವೆಲ್ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ಮ್ಯಾಕ್ಸ್‌ವೆಲ್ 12 ಪಂದ್ಯಗಳಲ್ಲಿ ಕಣಕ್ಕಿಳಿದು ಗಳಿಸಿದ್ದು ಕೇವಲ 102 ರನ್‌ ಮಾತ್ರ. ಹೀಗಾಗಿ ತಂಡದಲ್ಲಿ ಮ್ಯಾಕ್ಸ್‌ವೆಲ್ ಪಾತ್ರದ ಮೇಲೆ ಸಾಕಷ್ಟು ಪ್ರಶ್ನೆಗಳು ಎದ್ದಿತ್ತು. ಆದರೆ ಆಲ್‌ರೌಂಡರ್ ಆಗಿರುವ ಕಾರಣ ಮ್ಯಾಕ್ಸ್‌ವೆಲ್ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಹೆಣಗಾಟ ಸ್ಪಷ್ಟವಾಗಿದೆ

ಹೆಣಗಾಟ ಸ್ಪಷ್ಟವಾಗಿದೆ

ಕ್ರಿಕ್‌ ಇನ್ಫೋಗೆ ನೀಡಿದ ಸಂದರ್ಶನದಲ್ಲಿ ಗೌತಮ್ ಗಂಭೀರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮ್ಯಾಕ್ಸ್‌ವೆಲ್‌ಗೆ ಬದಲಿಯಾಗಿ ಕಣಕ್ಕಿಳಿಯಬಲ್ಲ ಆಟಗಾರ ಪಂಜಾಬ್ ತಂಡದಲ್ಲಿ ಇಲ್ಲ ಎಂದು ಹೇಳಿರುವ ಗಂಭೀರ್ "ನೀವು ಆತನನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದ್ದೀರಿ, ನಾಲ್ಕನೇ ಕ್ರಮಾಂಕದಲ್ಲಿ ಅವಕಾಶ ನೀಡಿದ್ದೀರಿ. ಮ್ಯಾಕ್ಸ್‌ವೆಲ್ ಅವರ ಪ್ರದರ್ಶನವನ್ನು ನೀಡಲು ಅದ್ಭುತವಾದ ಬೌಲಿಂಗ್ ಲೈನ್‌‌ಅಪ್‌ಅನ್ನೂ ಹೊಂದಿತ್ತು. ಆದರೆ ಆತ ಈ ಟೂರ್ನಿಯಲ್ಲಿ ಹೆಣಗಾಟವನ್ನು ನಡೆಸಿರುವುದು ಸ್ಪಷ್ಟವಾಗಿ ಗೊಚರಿಸಿದೆ" ಎಂದು ಗಂಭೀರ್ ಹೇಳಿದ್ದಾರೆ.

ತಂಡ ಸಾಕಷ್ಟು ನಿರೀಕ್ಷೆ ಹೊಂದಿತ್ತು

ತಂಡ ಸಾಕಷ್ಟು ನಿರೀಕ್ಷೆ ಹೊಂದಿತ್ತು

"ಆಟಗಾರನಾಗಿ ಇದು ಆತನಿಗೆ ಅತಿ ಕೆಟ್ಟ ಆವೃತ್ತಿ. ಇದು ಪಂಜಾಬ್ ತಂಡಕ್ಕೆ ತುಂಬಾ ಆಘಾತವನ್ನು ನಿಡಿದೆ, ಯಾಕೆಂದರೆ ಆತನ ಮೇಲೆ ಆ ತಂಡ ಸಾಕಷ್ಟು ನಿರೀಕ್ಷೆಯನ್ನು ಇರಿಸಿತ್ತು. ಆರಮಬದಿಂದ ಈವರೆಗೂ ಆತನಿಂದ ಉತ್ತಮ ಪ್ರದರ್ಶನ ಕಂಡು ಬರಲೇ ಇಲ್ಲ" ಎಂದು ಗಂಭೀರ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, October 27, 2020, 23:42 [IST]
Other articles published on Oct 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X