ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೂಜಾರ, ಗವಾಸ್ಕರ್ ದಾಖಲೆ ಸರಿಗಟ್ಟಲಿದ್ದಾರೆ ಮಯಾಂಕ್ ಅಗರ್ವಾಲ್

Mayank Agarwal 36 runs away from surpassing Cheteshwar Pujara and Sunil Gavaskar in elite list

ಕ್ರೈಸ್ಟ್‌ಚರ್ಚ್, ಫೆಬ್ರವರಿ 28: ಆರಂಭಿಕ ಟೆಸ್ಟ್ ಪಂದ್ಯ ಸೋತಿರುವ ಟೀಮ್ ಇಂಡಿಯಾ, ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಶನಿವಾರ (ಫೆಬ್ರವರಿ 29) ದ್ವಿತೀಯ ಪಂದ್ಯವನ್ನಾಡಲಿದೆ. ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಸ್ಟೆಡಿಯಂನಲ್ಲಿ ಭಾರತೀಯ ಕಾಲಮಾನ 4 amನಂತೆ ಈ ಪಂದ್ಯ ಆರಂಭಗೊಳ್ಳಲಿದೆ. ಭಾರತ ಸೋತರೆ, ಕೊಹ್ಲಿ ಪಡೆಯ ಹೆಸರಿನಲ್ಲಿ ಮತ್ತೊಂದು ಕೆಟ್ಟ ದಾಖಲೆ ನಿರ್ಮಾಣವಾಗಲಿದೆ.

ಐಪಿಎಲ್ : ಟೀಂ ಇಂಡಿಯಾ ಆಟಗಾರರಿಗೆ ಕಪಿಲ್ ದೇವ್ ಯಾಕೆ ಈ ಮಾತನ್ನು ಹೇಳಿದರು?ಐಪಿಎಲ್ : ಟೀಂ ಇಂಡಿಯಾ ಆಟಗಾರರಿಗೆ ಕಪಿಲ್ ದೇವ್ ಯಾಕೆ ಈ ಮಾತನ್ನು ಹೇಳಿದರು?

ವೆಲ್ಲಿಂಗ್ಟನ್‌ನಲ್ಲಿ ನಡೆದಿದ್ದ ಆರಂಭಿಕ ಪಂದ್ಯವನ್ನು ಭಾರತ 10 ವಿಕೆಟ್‌ನಿಂದ ಹೀನಾಯವಾಗಿ ಸೋತಿತ್ತು. ಎರಡು ಪಂದ್ಯಗಳ ಟೆಸ್ಟ್ ಸರಣಿ ಉಳಿಸಿಕೊಳ್ಳಬೇಕಾದರೆ ಭಾರತ ದ್ವಿತೀಯ ಪಂದ್ಯವನ್ನು ಗೆಲ್ಲಲೇಬೇಕು. ಆದರೆ ಆಟಗಾರರ ಗಾಯದ ಸಮಸ್ಯೆ ಎದುರಿಸುತ್ತಿರುವ ಭಾರತ, 2ನೇ ಟೆಸ್ಟ್‌ನಲ್ಲಿ ಗೆಲ್ಲೋ ಮಾತು ಸುಲಭವಿಲ್ಲ.

ಅಂತಾರಾಷ್ಟ್ರೀಯ ಟಿ20 ದಾಖಲೆ ನಿರ್ಮಿಸಿದ 16ರ ಹುಡುಗಿ ಶೆಫಾಲಿ ವರ್ಮಾ!ಅಂತಾರಾಷ್ಟ್ರೀಯ ಟಿ20 ದಾಖಲೆ ನಿರ್ಮಿಸಿದ 16ರ ಹುಡುಗಿ ಶೆಫಾಲಿ ವರ್ಮಾ!

ಶನಿವಾರ ನಡೆಯುತ್ತಿರುವ ಟೆಸ್ಟ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್‌ಗೆ ದಾಖಲೆ ನಿರ್ಮಿಸಲು ಅವಕಾಶವಿದೆ. ಮಯಾಂಕ್, ಚೇತೇಶ್ವರ ಪೂಜಾರ, ಶುಭ್‌ಮಾನ್ ಗಿಲ್, ಹನುಮ ವಿಹಾರಿ ಉತ್ತಮ ಆಟ ನೀಡಿದರೆ, ಭಾರತ ಗೆಲ್ಲುವ ಸಾಧ್ಯತೆಯೂ ಖಂಡಿತಾ ಇದೆ.

ಕೇವಲ 36 ರನ್ ಬೇಕು

ಕೇವಲ 36 ರನ್ ಬೇಕು

ಹ್ಯಾಗ್ಲಿ ಓವಲ್‌ನಲ್ಲಿ ನಡೆಯುವ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್‌ಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 1000 ರನ್ ಪೂರೈಸಲು ಅವಕಾಶವಿದೆ. ದ್ವಿತೀಯ ಟೆಸ್ಟ್‌ನಲ್ಲೇ ಮಯಾಂಕ್ ಕೇವಲ 36 ರನ್ ಗಳಿಸಿದರೂ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದಲ್ಲಿ 1000 ರನ್ ಬಾರಿಸಿದ ದಾಖಲೆಗೆ ಕಾರಣರಾಗಲಿದ್ದಾರೆ.

ಪೂಜಾರ, ಗವಾಸ್ಕರ್ ದಾಖಲೆ ಬದಿಗೆ

ಪೂಜಾರ, ಗವಾಸ್ಕರ್ ದಾಖಲೆ ಬದಿಗೆ

ದ್ವಿತೀಯ ಟೆಸ್ಟ್‌ನಲ್ಲೇ ಮಯಾಂಕ್ ಏನಾದರೂ 36ಕ್ಕೂ ಹೆಚ್ಚು ರನ್ ಗಳಿಸಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದಲ್ಲಿ 1000 ರನ್ ಬಾರಿಸಿದ ಭಾರತೀಯರ ದಾಖಲೆ ಸಾಲಿನಲ್ಲಿ ಚೇತೇಶ್ವರ ಪೂಜಾರ ಮತ್ತು ಸುನಿಲ್ ಗವಾಸ್ಕರ್ ಹೆಸರು ಕೆಳಗೆ ಸರಿಯಲಿದೆ. ಯಾಕೆಂದರೆ ಪೂಜಾರ 18 ಇನ್ನಿಂಗ್ಸ್‌ಗಳಲ್ಲಿ, ಗವಾಸ್ಕರ್ 21 ಇನ್ನಿಂಗ್ಸ್‌ಗಳಲ್ಲಿ 1000 ರನ್ ಬಾರಿಸಿದ್ದರೆ, ಮಯಾಂಕ್ ಸದ್ಯ 15 ಇನ್ನಿಂಗ್ಸ್‌ಗಳಲ್ಲಿ 964 ರನ್ ಗಳಿಸಿದ್ದಾರೆ.

ವಿನೋದ್ ಕಾಂಬ್ಲಿಗೆ ಅಗ್ರಸ್ಥಾನ

ವಿನೋದ್ ಕಾಂಬ್ಲಿಗೆ ಅಗ್ರಸ್ಥಾನ

ಟೆಸ್ಟ್‌ನಲ್ಲಿ ಅತೀ ವೇಗದಲ್ಲಿ 1000 ರನ್ ಮೈಲಿಗಲ್ಲು ಸ್ಥಾಪಿಸಿದವರ ಪಟ್ಟಿಯಲ್ಲಿ ವಿನೋದ್ ಕಾಂಬ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕಾಂಬ್ಲಿ ಈ ದಾಖಲೆಗಾಗಿ ಕೇವಲ 14 ಇನ್ನಿಂಗ್ಸ್‌ ಬಳಸಿಕೊಂಡಿದ್ದರು. 1994ರಲ್ಲಿ ಮುಂಬೈನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕಾಂಬ್ಲಿ ಈ 1000 ರನ್ ಮೈಲಿಗಲ್ಲು ನಿರ್ಮಿಸಿದ್ದರು.

ರಾಹುಲ್ ದ್ರಾವಿಡ್‌ಗೆ 5ನೇ ಸ್ಥಾನ

ರಾಹುಲ್ ದ್ರಾವಿಡ್‌ಗೆ 5ನೇ ಸ್ಥಾನ

ಟೆಸ್ಟ್ ನಲ್ಲಿ ವೇಗವಾಗಿ 1000 ರನ್ ಗಳಿಸಿದ ದಾಖಲೆ ಪಟ್ಟಿಯಲ್ಲಿ ವಿನೋದ್ ಕಾಂಬ್ಲಿ (14 ಇನ್ನಿಂಗ್ಸ್‌, vs ವೆಸ್ಟ್ ಇಂಡೀಸ್), ಚೇತೇಶ್ವರ ಪೂಜಾರ (18 ಇನ್ನಿಂಗ್ಸ್‌, vs ಆಸ್ಟ್ರೇಲಿಯಾ), ಸುನಿಲ್ ಗವಾಸ್ಕರ್ (21 ಇನ್ನಿಂಗ್ಸ್‌, vs ಇಂಗ್ಲೆಂಡ್), ಸಂಜಯ್ ಮಂಜ್ರೇಕರ್ (23 ಇನ್ನಿಂಗ್ಸ್, vs ಇಂಗ್ಲೆಂಡ್), ರಾಹುಲ್ ದ್ರಾವಿಡ್ (23 ಇನ್ನಿಂಗ್ಸ್‌, vs ವೆಸ್ಟ್ ಇಂಡೀಸ್), ಸೌರವ್ ಗಂಗೂಲಿ (23 ಇನ್ನಿಂಗ್ಸ್‌, vs ಶ್ರೀಲಂಕಾ) ಮೊದಲ 6 ಸ್ಥಾನಗಳಲ್ಲಿ ಇದ್ದಾರೆ.

Story first published: Friday, February 28, 2020, 13:02 [IST]
Other articles published on Feb 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X