ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ XI vs ಭಾರತ ಅಭ್ಯಾಸ ಪಂದ್ಯ ಡ್ರಾ: ಫಾರ್ಮ್‌ಗೆ ಮರಳಿದ ಮಯಾಂಕ್

IND vs NZ 1st test : India goes through a tough time prior 1st test match
Mayank Agarwal And Rishabh Pant Find Form On Last Day Of A Drawn Game

ನ್ಯೂಜಿಲೆಂಡ್ XI ವಿರುದ್ಧ ಟೀಮ್ ಇಂಡಿಯಾ ಅಭ್ಯಾಸ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಫಾರ್ಮ್‌ಗೆ ಮರಳಿದ್ದಾರೆ. ಅದರಲ್ಲೂ ಏಕದಿನದಲ್ಲಿ ಆರಂಭಿಕನಾಗಿ ಅವಕಾಶವನ್ನು ಪಡೆದ ಮಯಾಂಕ್ ಅಗರ್ವಾಲ್ ಮುಗ್ಗರಿಸಿದ್ದರು. ಆದರೆ ಟೆಸ್ಟ್‌ನಲ್ಲಿ ಎಂದಿನ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ತಿಂಗಳ 21ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಗೂ ಮುನ್ನ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ ಪಾಲ್ಗೊಂಡಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಬೇಗನೆ ಫೆವಿಲಿಯನ್ ಸೇರಿದಾಗ ಆತಂಕದ ಕರಿಛಾಯೆ ಟೀಮ್ ಇಂಡಿಯಾ ಪಾಳೆಯದಲ್ಲಿ ಮೂಡಿತ್ತು. ಆರಂಭಿಕರಾದ ಪೃಥ್ವಿ ಶಾ, ಮಯಾಂಕ್ ಅಗರ್ವಾಲ್ ಮತ್ತು ಶುಭ್‌ಮನ್‌ ಗಿಲ್ ತಂಡದ ಮೊತ್ತ 5 ಆಗುವಷ್ಟರಲ್ಲಿ ವಿಕೆಟ್ ಒಪ್ಪಿಸಿದ್ದರು.

ಭಾರತ vs ಕಿವೀಸ್, 0, 0, 1: ಟೆಸ್ಟ್‌ಗೂ ಮುನ್ನ ಸಮಸ್ಯೆಯ ಸುಳಿಯಲ್ಲಿ ಭಾರತ!ಭಾರತ vs ಕಿವೀಸ್, 0, 0, 1: ಟೆಸ್ಟ್‌ಗೂ ಮುನ್ನ ಸಮಸ್ಯೆಯ ಸುಳಿಯಲ್ಲಿ ಭಾರತ!

ಆದರೆ ಹನುಮ ವಿಹಾರಿ ಮತ್ತು ಚೇತೇಶ್ವರ್ ಪೂಜಾರ ಉತ್ತಮವಾಗಿ ಆಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಹನುಮ ವಿಹಾರಿ ಶತಕವನ್ನು ಸಿಡಿಸಿ ಮಿಂಚಿದರು. ಈ ಮೂಲಕ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ವಿಹಾರಿ ಸಂದೇಶವೊಂದನ್ನು ಕಳುಹಿಸಿದ್ದಾರೆ. ಇನ್ನು ಅನುಭವಿ ಆಟಗಾರ ಚೇತೇಶ್ವರ್ ಪೂಜಾರ 93 ರನ್ ಗಳಿಸಿ ಔಟಾದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಜೋಡಿ ಅರ್ಧ ಶತಕದ ಜೊತೆಯಾಟವನ್ನು ನೀಡಿತು. ಅದರಲ್ಲೂ ಮಯಾಂಕ್ ಅಗರ್ವಾಲ್ ಭರ್ಜರಿ 81 ರನ್‌ಗಳನ್ನು ಗಳಿಸಿ ನಿವೃತ್ತಿ ಪಡೆದುಕೊಂಡರು. ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಕೂಡ ಅರ್ಧ ಶತಕವನ್ನು ಬಾರಿಸಿದ್ದಾರೆ.

ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಪಡೆ ಕೂಡ ಲಯಕ್ಕೆ ಮರಳಿದಂತೆ ಕಂಡುಬಂದಿದೆ. ಮೊಹಮದ್ ಶಮಿ 3 ವಿಕೆಟ್ ಪಡೆದುಕೊಂಡರೆ ಬೂಮ್ರಾ, ಉಮೇಶ್ ಯಾದವ್ ಮತ್ತು ಸೈನಿ ತಲಾ ಎರಡು ವಿಕೆಟ್ ಪಡೆದುಕೊಂಡರು. ಅಶ್ವಿನ್ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

Story first published: Sunday, February 16, 2020, 10:48 [IST]
Other articles published on Feb 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X