ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಜೊತೆ ದಾಖಲೆ ಪಟ್ಟಿ ಸೇರಿದ ಮಯಾಂಕ್

Mayank Agarwal joins Virender Sehwag and Rohit Sharma in illustrious list

ಪುಣೆ, ಅಕ್ಟೋಬರ್ 10: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲೂ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ತನ್ನ ಬ್ಯಾಟಿಂಗ್ ಫಾರ್ಮ್ ಮುಂದುವರೆಸಿದ್ದಾರೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಗುರುವಾರ (ಅಕ್ಟೋಬರ್ 10) ಅಗರ್ವಾಲ್ ಶತಕ ಬಾರಿಸಿದ್ದಾರೆ.

80 ವರ್ಷಗಳ ಹಿಂದಿನ ಅನಗತ್ಯ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್!80 ವರ್ಷಗಳ ಹಿಂದಿನ ಅನಗತ್ಯ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್!

ದಕ್ಷಿಣ ಆಫ್ರಿಕಾ ಎದುರು ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮಯಾಂಕ್ ದ್ವಿಶತಕ (215 ರನ್) ಬಾರಿಸಿದ್ದರು. ಅದಾಗಿ ದ್ವಿತೀಯ ಟೆಸ್ಟ್‌ನಲ್ಲೂ ಅಗರ್ವಾಲ್ 195 ಎಸೆತಗಳಿಗೆ 108 ರನ್ ಬಾರಿಸಿ ವೇಗಿ ಕಾಗಿಸೋ ರಬಾಡ ಓವರ್‌ನಲ್ಲಿ ನಾಯಕ ಫಾ ಡು ಪ್ಲೆಸಿಸ್‌ಗೆ ಕ್ಯಾಚಿತ್ತರು.

ಭಾರತ vs ದಕ್ಷಿಣ ಆಫ್ರಿಕಾ, 2ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

1
46114

ದ್ವಿತೀಯ ಟೆಸ್ಟ್‌ನಲ್ಲಿ 16 ಬೌಂಡರಿ, 2 ಸಿಕ್ಸರ್‌ನೊಂದಿಗೆ ಶತಕ ಪೂರೈಸಿ ದಕ್ಷಿಣ ಆಫ್ರಿಕಾ ವಿರುದ್ಧ ಹಲವು ಶತಕ ಬಾರಿಸಿದ ಆರಂಭಿಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಮಯಾಂಕ್ ಕಾರಣರಾಗಿದ್ದಾರೆ.

ಸೆಹ್ವಾಗ್, ರೋಹಿತ್ ಸಾಲಿಗೆ ಮಯಾಂಕ್

ಸೆಹ್ವಾಗ್, ರೋಹಿತ್ ಸಾಲಿಗೆ ಮಯಾಂಕ್

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿದ ಆರಂಭಿಕರಾಗಿ ವೀರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಶರ್ಮಾ ಸಾಲಿನಲ್ಲಿ ಮಯಾಂಕ್ ಅಗರ್ವಾಲ್ ಕೂಡ ಸೇರಿಕೊಂಡಿದ್ದಾರೆ. ಸೆಹ್ವಾಗ್ ಈ ಸಾಧನೆ ಮಾಡಿದ ಮೊದಲನೆಯವರಾಗಿ (2010ರಲ್ಲಿ) ಗುರುತಿಸಿಕೊಂಡರೆ, ರೋಹಿತ್ ಇದೇ ಸರಣಿಯ ಹಿಂದಿನ ಟೆಸ್ಟ್‌ನಲ್ಲಿ ಈ ಸಾಧನೆ ಮೆರೆದಿದ್ದರು.

ಅಝರುದ್ದೀನ್ ಮೊದಲಿಗ

ಅಝರುದ್ದೀನ್ ಮೊದಲಿಗ

ದಕ್ಷಿಣ ಆಫ್ರಿಕಾ ವಿರುದ್ಧ ಬೆನ್ನು ಬೆನ್ನಿಗೆ ಶತಕ ಬಾರಿಸಿದ 5ನೇ ಭಾರತೀಯ ಆಟಗಾರನಾಗಿ ಮಯಾಂಕ್ ದಾಖಲೆ ಪುಟ ಸೇರಿದ್ದಾರೆ. ಈ ಸಾಧನೆ ಮೊದಲು ಮಾಡಿದ್ದು ಮೊಹಮ್ಮದ್ ಅಝರುದ್ದೀನ್. 1996ರಲ್ಲಿ ಕೋಲ್ಕತ್ತಾ ಮತ್ತು ಕಾನ್ಪುರದಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯಗಳಲ್ಲಿ ಅಝರ್ ಶತಕ ಬಾರಿಸಿದ್ದರು.

5ನೇ ಭಾರತದ ಬ್ಯಾಟ್ಸ್‌ಮನ್

5ನೇ ಭಾರತದ ಬ್ಯಾಟ್ಸ್‌ಮನ್

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಭಾರತೀಯರಲ್ಲಿ ಮಯಾಂಕ್ 5ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಮೊಹಮ್ಮದ್ ಅಝರುದ್ದೀನ್ (ಕೋಲ್ಕತ್ತಾದಲ್ಲಿ 109 ರನ್, ಕಾನ್ಪುರದಲ್ಲಿ ಅಜೇಯ 163 ರನ್-1996), ಸಚಿನ್ ತೆಂಡೂಲ್ಕರ್ (ನಾಗ್ಪುರದಲ್ಲಿ 100, ಕೋಲ್ಕತ್ತದಲ್ಲಿ 106, ಸೆಂಚುರಿಯನ್‌ನಲ್ಲಿ 111*-2010), ವೀರೇಂದ್ರ ಸೆಹ್ವಾಗ್ (ನಾಗ್ಪುರ 109, ಕೋಲ್ಕತ್ತಾ 165-2010), ರೋಹಿತ್ ಶರ್ಮಾ (ವಿಶಾಖಪಟ್ಟಣ 176, 127-2019), ಮಯಾಂಕ್ ಅಗರ್ವಾಲ್ (ವಿಶಾಖಪಟ್ಟಣ 215, ಪುಣೆ 108-2019).

ಭಾರತ ಉತ್ತಮ ಆರಂಭ

ಭಾರತ ಉತ್ತಮ ಆರಂಭ

ಸೌತ್ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 203 ರನ್ ಜಯ ದಾಖಲಿಸಿದ್ದ ಭಾರತ, ದ್ವಿತೀಯ ಟೆಸ್ಟ್‌ನಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೊಹ್ಲಿ ಪಡೆ, ಗುರುವಾರ (ಅಕ್ಟೋಬರ್ 10) ದಿನದಾಟದ ಅಂತ್ಯಕ್ಕೆ ಮಯಾಂಕ್ 108, ರೋಹಿತ್ 14, ಚೇತೇಶ್ವರ್ ಪೂಜಾರ 58, ವಿರಾಟ್ ಕೊಹ್ಲಿ 63*, ಅಜಿಂಕ್ಯ ರಹಾನೆ 18* ರನ್‌ನೊಂದಿಗೆ 85.1 ಓವರ್‌ಗೆ 3 ವಿಕೆಟ್‌ ನಷ್ಟದಲ್ಲಿ 273 ರನ್ ಬಾರಿಸಿತ್ತು.

Story first published: Thursday, October 10, 2019, 18:23 [IST]
Other articles published on Oct 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X