ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂಡಕ್ಕೆ ಆಯ್ಕೆಯಾಗಲು ಮಯಾಂಕ್ ಇನ್ನೇನು ಮಾಡ್ಬೇಕು? : ಫ್ಯಾನ್ಸ್

By Mahesh
Mayank not selected to Team India Fans shocked and disappointed

ಬೆಂಗಳೂರು, ಆಗಸ್ಟ್ 23: ಕರ್ನಾಟಕದ ಪರ ಆಡುವ ಆರಂಭಿಕ ಆಟಗಾರ ಮಯಾಂಕ್ ಅಗರವಾಲ್ ಅವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು ಇನ್ನೇನು ಮಾಡಬೇಕು, ಕಳೆದ ವರ್ಷದಲ್ಲಿ ಮಯಾಂಕ್ ಗಳಿಸಿದ್ದಷ್ಟು ರನ್ ಗಳನ್ನು ಬೇರೊಬ್ಬ ಆಟಗಾರ ಗಳಿಸಿಲ್ಲ. ಆದರೂ ಆತನಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇದು ಅನ್ಯಾಯವಲ್ಲವೇ? ಎಂದು ಟೀಂ ಇಂಡಿಯಾದ ಆಯ್ಕೆದಾರರ ಸಮಿತಿಯನ್ನು ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಇಕ್ಕ ಎರಡು ಟೆಸ್ಟ್ ಪಂದ್ಯಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ಮುರಳಿ ವಿಜಯ್ ಹಾಗೂ ಕುಲದೀಪ್ ಯಾದವ್ ಬದಲಿಗೆ ಪೃಥ್ವಿ ಶಾ ಹಾಗೂ ಹನುಮ ವಿಹಾರಿ ಅವರಿಗೆ ಅವಕಾಶ ನೀಡಲಾಗಿದೆ. ಸುದ್ದಿ ತಿಳಿದು ಬೇಸರಗೊಂಡರೂ ದಕ್ಷಿಣ ಆಫ್ರಿಕಾ ಎ ವಿರುದ್ಧ ಆಡಲು ಮಯಾಂಕ್ ಅಗರವಾಲ್ ಸಜ್ಜಾಗಿ ಕಣಕ್ಕಿಳಿದಿದ್ದಾರೆ.

ಆದರೆ, ಕರ್ನಾಟಕ ಮೂಲದ ಆಟಗಾರರನ್ನು ಕಡೆಗಣಿಸಲಾಗುತ್ತಿದೆ ಎಂಬ ಕೂಗೆದಿದ್ದಿದೆ. ಕಳೆದ ತಿಂಗಳು ಆಗಸ್ಟ್ 04ರಂದು ದಕ್ಷಿಣ ಆಫ್ರಿಕಾ ಎ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಎ ಪರ ಆಡಿದ್ದ ಮಯಾಂಕ್ 251 ಎಸೆತಗಳಲ್ಲಿ 220ರನ್ ಚೆಚ್ಚಿದ್ದರು.

ಇಂಗ್ಲೆಂಡ್ ನೆಲದಲ್ಲೇ ಸತತ ಮೂರು ಶತಕ

ಜೂನ್ ತಿಂಗಳಿನಲ್ಲಿ ಇಂಗ್ಲೆಂಡ್ ನೆಲದಲ್ಲೇ ಸತತ ಮೂರು ಶತಕ ಬಾರಿಸಿ, ಉತ್ತಮ ಲಯದಲ್ಲಿದ್ದರು. ಇನ್ನು 2017-18 ರಣಜಿ ಸೀಸನ್ ನಲ್ಲಿ 1,000ರನ್ ಗಳಿಸಿದ ಏಕೈಕ ಆಟಗಾರ ಎಂಬ ಸಾಧನೆ ಮಾಡಿದ್ದರು. 13 ಇನ್ನಿಂಗ್ಸ್ ಗಳಲ್ಲಿ 5 ಶತಕ, 2 ಅರ್ಧಶತಕ ಸೇರಿದಂತೆ 1,160ರನ್ (105.45 ರನ್ ಸರಾಸರಿ) ಗಳಿಸಿದ್ದಾರೆ.

ಇನ್ನೆಷ್ಟು ರನ್ ಬಾರಿಸಬೇಕು?

ಇಂಡಿಯಾ ಎ ಹಾಗೂ ರಣಜಿ ಸೀಸನ್ ನಲ್ಲಿ ಮಯಾಂಕ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಇದನ್ನು ಏಕೆ ಆಯ್ಕೆದಾರರು ಪರಿಗಣಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಮುರಳಿ ವಿಜಯ್ ಬಗ್ಗೆ ಕೂಡಾ ಪ್ರಶ್ನೆ

ಮುರಳಿ ವಿಜಯ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದು ಏಕೆ? ಹಾಗೆ ನೋಡಿದರೆ ಕೆಎಲ್ ರಾಹುಲ್ ಕೂಡಾ ಹೆಚ್ಚು ರನ್ ಗಳಿಸಿಲ್ಲ. ಹನುಮ ವಿಹಾರಿಗಿಂತ ಮಯಾಂಕ್ ಅಗರವಾಲ್ ಏನು ಕಡಿಮೆ ರನ್ ಗಳಿಸಿದ್ದಾರೆ.

ಹನುಮ ವಿಹಾರಿಗೆ ಅದೃಷ್ಟದ ಕರೆ

ಹನುಮ ವಿಹಾರಿಗೆ ಅದೃಷ್ಟದ ಕರೆ, ಆದರೆ, ಮಯಾಂಕ್ ಅಗರವಾಲ್ ದುರದೃಷ್ಟದ ಕತೆ ಮುಂದುವರೆದಿದೆ.

Story first published: Thursday, August 23, 2018, 19:04 [IST]
Other articles published on Aug 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X