ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

3ನೇ ಟೆಸ್ಟ್‌ಗೆ ಮಯಾಂಕ್ ಬದಲು ರೋಹಿತ್, ಬ್ರಿಸ್ಬೇನ್‌ನಲ್ಲೇ 4ನೇ ಟೆಸ್ಟ್

Mayank Agarwal to make way for Rohit Sharma, Brisbane Test on schedule

ಸಿಡ್ನಿ: ಸೋಮವಾರ (ಜನವರಿ 4) ಭಾರತ ಮತ್ತು ಆಸ್ಟ್ರೇಲಿಯಾ ಆಟಗಾರರು ಚಾರ್ಟರ್ಡ್ ಫ್ಲೈಟ್ ಮೂಲಕ ಸಿಡ್ನಿಗೆ ತಲುಪಿದ್ದಾರೆ. ಕೋವಿಡ್ ಪ್ರೋಟೋಕಾಲ್ ಮೀರಿದ್ದರಿಂದ ಭಾರತದ ಐದು ಆಟಗಾರರನ್ನು ಪ್ರತ್ಯೇಕ ಇಡಬೇಕೆಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಭಾರತದ ಎಲ್ಲಾ ಆಟಗಾರರ ಕೊರೊನಾ ಪರೀಕ್ಷಾ ಫಲಿತಾಂಶ ನೆಗೆಟಿವ್ ಬಂದಿದ್ದರಿಂದ ಟೀಮ್ ಇಂಡಿಯಾ ಈಗ ನಿರಾಳವಾಗಿದೆ.

ಮೌರ್ಯ ಸರ್ಕಲ್‌ನಲ್ಲಿ ಬೀದಿಗಿಳಿದ ತರಬೇತುದಾರರು: ಭಿಕ್ಷೆ ಬೇಡಿ ಸರ್ಕಾರದ ವಿರುದ್ಧ ಪ್ರತಿಭಟನೆಮೌರ್ಯ ಸರ್ಕಲ್‌ನಲ್ಲಿ ಬೀದಿಗಿಳಿದ ತರಬೇತುದಾರರು: ಭಿಕ್ಷೆ ಬೇಡಿ ಸರ್ಕಾರದ ವಿರುದ್ಧ ಪ್ರತಿಭಟನೆ

ಟೀಮ್ ಇಂಡಿಯಾ ಆಟಗಾರರು ಕೊರೊನಾ ಮುನ್ನೆಚ್ಚರಿಕಾ ನೀತಿ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಭಾರತದ ಐವರು ಆಟಗಾರರಾದ ರೋಹಿತ್ ಶರ್ಮಾ, ರಿಷಭ್ ಪಂತ್, ಶುಬ್ಮನ್ ಗಿಲ್, ನವದೀಪ್ ಸೈನಿ, ಪೃಥ್ವಿ ಶಾ ವಿರುದ್ಧ ಕೊರೊನಾ ನಿಯಮ ಮೀರಿದ ಆರೋಪ ಕೇಳಿ ಬಂದಿತ್ತು.

ಭಾರತೀಯ ಅಭಿಮಾನಿಯೊಬ್ಬರು ಆಟಗಾರರ ಜೊತೆ ಒಂದೇ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬಳಿಕ ಭಾರತ ತಂಡ ಭೀತಿ ಎದುರಿಸಿತ್ತು. ಆದರೆ ಆಟಗಾರರ ಕೊರೊನಾ ಫಲಿತಾಂಶ ನೆಗೆಟಿವ್ ಬಂದಿರುವುದರಿಂದ ಇನ್ನು ಅಂಥ ಸಮಸ್ಯೆಯೇನಿಲ್ಲ. 3ನೇ ಟೆಸ್ಟ್‌ನಲ್ಲಿ ಭಾರತ ತಂಡದಲ್ಲಿ ಮಯಾಂಕ್ ಅಗರ್ವಾಲ್ ಬದಲು ಹಿಟ್‌ಮ್ಯಾನ್ ರೋಹಿತ್ ಶರ್ಮಾ ಆಡಲಿದ್ದಾರೆ.

ಭಾರತ vs ಆಸ್ಟ್ರೇಲಿಯಾ: 3ನೇ ಟೆಸ್ಟ್‌ನಲ್ಲಿ ಮುರಿಯಬಲ್ಲ ಪ್ರಮುಖ 5 ದಾಖಲೆಗಳುಭಾರತ vs ಆಸ್ಟ್ರೇಲಿಯಾ: 3ನೇ ಟೆಸ್ಟ್‌ನಲ್ಲಿ ಮುರಿಯಬಲ್ಲ ಪ್ರಮುಖ 5 ದಾಖಲೆಗಳು

ಇತ್ತಂಡಗಳ ನಡುವಿನ 4ನೇ ಟೆಸ್ಟ್‌ ಕೂಡ ಹಿಂದಿನ ವೇಳಾಪಟ್ಟಿಯಂತೆ ಬ್ರಿಸ್ಬೇನ್‌ ಗಬ್ಬಾ ಸ್ಟೇಡಿಯಂನಲ್ಲೇ ಜನವರಿ 15ರಿಂದ 19ರ ವರೆಗೆ ನಡೆಯಲಿದೆ. 3ನೇ ಟೆಸ್ಟ್ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಜನವರಿ 7ಕ್ಕೆ 5 AMಗೆ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾದಲ್ಲಿ ಕೊರೊನಾ ಪ್ರಕರಣಗಳ ಕಾರಣ ನಾಲ್ಕನೇ ಟೆಸ್ಟ್‌ ಸಿಡ್ನಿಗೆ ಸ್ಥಳಾಂತರವಾಗಲಿದೆ ಎನ್ನಲಾಗುತ್ತಿತ್ತು. ಆದರೆ ಈ ಪಂದ್ಯದ ತಾಣ ಬದಲಾಗುತ್ತಿಲ್ಲ.

Story first published: Tuesday, January 5, 2021, 17:27 [IST]
Other articles published on Jan 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X