ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್ ತಂಡಕ್ಕೆ ಮಯಾಂಕ್ ಆಯ್ಕೆ ಕಷ್ಟ ಕಷ್ಟ

Mayank Agarwal might have to wait longer to wear blue Indian jersey
Mayank Agarwal unlikely to get India limited-overs call-up during West Indies series

ನವದೆಹಲಿ, ನವೆಂಬರ್ 18: ಟೆಸ್ಟ್ ಕ್ರಿಕೆಟ್ ನಲ್ಲಿ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡಿರುವ ಮಯಾಂಕ್ ಅಗರವಾಲ್ ಅವರು ಏಕದಿನ ಕ್ರಿಕೆಟ್ ನಲ್ಲೂ ಟೀಂ ಇಂಡಿಯಾ ಪರ ಬ್ಯಾಟ್ ಬೀಸಲು ಕಾತುರರಾಗಿದ್ದಾರೆ.

ಬಾಂಗ್ಲಾ ವಿರುದ್ಧ ಟೆಸ್ಟ್ ನಲ್ಲಿ ದ್ವಿಶತಕ ಗಳಿಸಿದ ಬಳಿಕ ಮಯಾಂಕ್ ಅವರನ್ನು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡುವ ಬಗ್ಗೆ ಸುದ್ದಿ ಹಬ್ಬಿದೆ. ಆದರೆ ಬಿಸಿಸಿಐ ಆಯ್ಕೆ ಸಮಿತಿ ಮೂಲಗಳ ಪ್ರಕಾರ, ಮಯಾಂಕ್ ಆಯ್ಕೆ ಕಷ್ಟ ಕಷ್ಟ.

ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಜೊತೆ ದಾಖಲೆ ಪಟ್ಟಿ ಸೇರಿದ ಮಯಾಂಕ್ವಿರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಜೊತೆ ದಾಖಲೆ ಪಟ್ಟಿ ಸೇರಿದ ಮಯಾಂಕ್

ಡಿಸೆಂಬರ್ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಸರಣಿಯಲ್ಲಿ ಆಡದಿರಲು ರೋಹಿತ್ ಶರ್ಮ ಏನಾದರೂ ಬಯಸಿದರೆ ಮಾತ್ರ ಮಯಾಂಕ್ ಆಯ್ಕೆ ಸಾಧ್ಯವಿದೆ. ವೆಸ್ಟ್ ಇಂಡೀಸ್ ನಲ್ಲಿ ಎರಡು ಪಂದ್ಯಗಳ ವಿಶ್ರಾಂತಿ ಬಿಟ್ಟರೆ ರೋಹಿತ್ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ವಿರಾಟ್ ರಂತೆ ರೋಹಿತ್ ಕೂಡಾ ವಿಶ್ರಾಂತಿ ಪಡೆಯಲು ಬಯಸಿದರೆ ಬಿಸಿಸಿಐ ಆಯ್ಕೆ ಸಮಿತಿ ಇಲ್ಲ ಎನ್ನುವುದಿಲ್ಲ.

ಆದರೆ, ರೋಹಿತ್ ಈ ಸರಣಿ ತಪ್ಪಿಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಬಹುದು. ಹೀಗಾಗಿ 27 ವರ್ಷ ವಯಸ್ಸಿನ ಕರ್ನಾಟಕದ ಪ್ರತಿಭೆ ಮಯಾಂಕ್ ಗೆ ನೀಲಿ ಜರ್ಸಿ ಧರಿಸಿ ಭಾರತದ ಪರ ಒಡಿಐನಲ್ಲಿ ಆಡುವುದು ಸದ್ಯಕ್ಕೆ ಕನಸಾಗೇ ಉಳಿಯಲಿದೆ.

ಇತಿಹಾಸ ಬರೆದ ರೋಹಿತ್ ಶರ್ಮಾ, 25 ವರ್ಷಗಳ ಹಿಂದಿನ ದಾಖಲೆ ಬದಿಗೆ!ಇತಿಹಾಸ ಬರೆದ ರೋಹಿತ್ ಶರ್ಮಾ, 25 ವರ್ಷಗಳ ಹಿಂದಿನ ದಾಖಲೆ ಬದಿಗೆ!

ಶಿಖರ್ ಹಾಗೂ ರೋಹಿತ್ ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಮತ್ತೊಬ್ಬ ಆರಂಭಿಕ ಆಟಗಾರ ಕರ್ನಾಟಕದ ಕೆಎಲ್ ರಾಹುಲ್ ಅವರಿಗೆ ಓಪನರ್ ಆಗಿ ಅವಕಾಶ ಸಿಗುವುದೇ ಕಷ್ಟವಾಗಿದೆ. ಹೀಗಾಗಿ ನಾಯಕ ವಿರಾಟ್ ಗೆ ಪ್ರತಿ ಬಾರಿ ಆಡುವ ಹನ್ನೊಂದು ಬಳಗ ಆಯ್ಕೆ ಕಷ್ಟಕರ ಸಂಗತಿ.

ಮಯಾಂಕ್ ರನ್ನು ಏಕದಿನ ಅಥವಾ ಟಿ 20 ತಂಡಕ್ಕೆ ಸೇರಿಸುವ ಆತುರ ಬಿಸಿಸಿಐ ಆಯ್ಕೆದಾರರಲ್ಲೂ ಇಲ್ಲ, ಈ ಬಗ್ಗೆ ಗಟ್ಟಿಯಾಗಿ ದನಿ ಎತ್ತುವವರೂ ಇಲ್ಲ.

ಲಿಸ್ಟ್ ಎ ಪಂದ್ಯಗಳಲ್ಲಿ 13 ಶತಕ ಗಳಿಸಿರುವ ಮಯಾಂಕ್, 100 ಪ್ಲಸ್ ಸ್ಟ್ರೈಕ್ ರೇಟ್, 50 ಪ್ಲಸ್ ರನ್ ಸರಾಸರಿಯಂತೆ ಸ್ಕೋರ್ ಮಾಡಿದ್ದಾರೆ.

Story first published: Monday, November 18, 2019, 20:45 [IST]
Other articles published on Nov 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X