ಮಯಾಂತಿ ಲ್ಯಾಂಗರ್-ಸ್ಟುವರ್ಟ್ ಬಿನ್ನಿ ದಂಪತಿಗೆ ಗಂಡು ಮಗು ಜನನ

ಬೆಂಗಳೂರು: ಭಾರತದ ಮುಂಚೂಣಿ ನಿರೂಪಕಿ ಮತ್ತು ಭಾರತದ ಕ್ರಿಕೆಟರ್ ಸ್ಟುವರ್ಟ್ ಬಿನ್ನಿ ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಭಾಗವಹಿಸುವುದನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಮಯಾಂತಿ-ಬಿನ್ನಿ ದಂಪತಿಗೆ ಗಂಡು ಮಗು ಜನಿಸಿದೆ. ಈ ವಿಚಾರವನ್ನು ಮಯಾಂತಿ ಖಾತರಿಪಡಿಸಿದ್ದಾರೆ.

ಈ ಐಪಿಎಲ್‌ ಸೀಸನ್‌ನ ನಿರೂಪಕರ ಸಂಪೂರ್ಣ ಪಟ್ಟಿ, ಮಯಾಂತಿ ಇಲ್ಲ!

ಐಪಿಎಲ್‌ನಲ್ಲಿ ನಿರೂಪಕರಾಗಿ ಜವಾಬ್ದಾರಿ ನಿರ್ವಹಿಸಲಿರುವ ನಿರೂಪಕರ ಪಟ್ಟಿಯನ್ನು ಸ್ಟಾರ್‌ಸ್ಪೋರ್ಟ್ಸ್ ಗುರುವಾರ (ಸೆಪ್ಟೆಂಬರ್ 17) ಪ್ರಕಟಿಸಿತ್ತು. ಇದರಲ್ಲಿ ಕನ್ನಡತಿ ಮಯಾಂತಿ ಹೆಸರಿರಲಿಲ್ಲ. ಇದು ಅನೇಕ ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೀಡು ಮಾಡಿತ್ತು. ಆದರೆ ಮಯಾಂತಿ ಈ ಬಾರಿ ಐಪಿಎಲ್‌ನಲ್ಲಿ ಭಾಗವಹಿಸದಿರುವುದಕ್ಕೆ ಕಾರಣ ಈಗ ಬಯಲಾಗಿದೆ.

ಇನ್ನಷ್ಟು ಕನ್ನಡ ಪದಗಳ ಸೇರಿಸಿ 2ನೇ ಬಾರಿಗೆ 'ಥೀಮ್ ಸಾಂಗ್' ಬಿಟ್ಟ ಆರ್‌ಸಿಬಿ!

ತಮಗೆ ಗಂಡು ಮಗು ಜನಿಸಿರುವ ವಿಚಾರವನ್ನು ಮಯಾಂತಿ ಸಾಮಾಜಿಕ ಜಾಲತಾಣದ ಮೂಲಕ ಖಾತರಿಪಡಿಸಿದ್ದಾರೆ. ಸೆಪ್ಟೆಂಬರ್ 18ರಂದು ಟ್ವೀಟ್ ಮಾಡಿರುವ ಮಯಾಂತಿ, 'ಈ ಐಪಿಎಲ್ ಅನ್ನು ನೋಡಲು ನನಗೆ ಖುಷಿಯಾಗಿದೆ. ಆಲ್ ದ ಬೆಸ್ಟ್ ಟೀಮ್' ಎಂದು ಬಿನ್ನಿಯ ರಾಜಸ್ಥಾನ್ ರಾಯಲ್ಸ್‌ಗೆ ಶುಭ ಕೋರಿದ್ದಾರೆ.

ಕಾಮೆಂಟರಿ ಪ್ಯಾನೆಲ್‌ನಿಂದ ಹೊರದಬ್ಬಿದ್ದಕ್ಕೆ ಅಸಲಿ ಕಾರಣ ಹೇಳಿದ ಮಂಜ್ರೇಕರ್!

13ನೇ ಆವೃತ್ತಿಯ ಐಪಿಎಲ್ ಸೆಪ್ಟೆಂಬರ್ 19ರಂದು ಆರಂಭವಾಗಿ ನವೆಂಬರ್ 10ಕ್ಕೆ ಕೊನೆಗೊಳ್ಳಲಿದೆ. ಆರಂಭಿಕ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಉದ್ಘಾಟನಾ ಪಂದ್ಯ ದುಬೈನಲ್ಲಿ ಭಾರತೀಯ ಕಾಲಮಾನ 7.30 pmಗೆ ಆರಂಭವಾಗಲಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, September 18, 2020, 21:33 [IST]
Other articles published on Sep 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X