ಟೀಮ್ ಇಂಡಿಯಾದ 10 ಖ್ಯಾತ ಕ್ರಿಕೆಟಿಗರ ಪ್ರೀತಿಯ ಸಹೋದರಿಯರಿವರು

ಬೆಂಗಳೂರು: ಅಣ್ಣ-ತಂಗೀರ ಸಂಬಂಧ ಯಾವತ್ತಿಗೂ ಸ್ಪೆಶಲ್. ಅಣ್ಣನಿಗೆ ತಂಗಿ ಖುಷಿಯ ಕ್ಷಣದಲ್ಲಿ ಒಳ್ಳೆಯ ಸ್ನೇಹಿತೆಯಾಗಿ ಜೊತೆಯಾಗುತ್ತಾಳೆ. ನೋವಿನಲ್ಲಿದ್ದಾಗ ಅಮ್ಮನಂತೆ ಸಾಂತ್ವನಿಸುತ್ತಾಳೆ. ತಂಗಿಗೆ ಅಣ್ಣ ಮೊದಲ ಸ್ನೇಹಿತನಾಗಿ, ಸದಾ ರಕ್ಷಕನಾಗಿರುತ್ತಾನೆ. ಪರಸ್ಪರ ಕಿತ್ತಾಡಿಕೊಳ್ಳುತ್ತಾ, ಕಾಲೆಳೆದುಕೊಳ್ಳುತ್ತ ಮರುಕ್ಷಣ ರಾಜಿಯಾಗುತ್ತ ಸದಾ ಜೊತೆಯಾಗಿರುವ ಅಣ್ಣ-ತಂಗೀರ ಭಾವ ಬಂಧನ ಬೆಲೆ ಕಟ್ಟಲಾರದ್ದು.

ಈ 5 ಆಟಗಾರರ ಪಾಲಿಗೆ 2020ರ ಐಪಿಎಲ್ ಕೊನೇಯ ಸೀಸನ್ ಎನಿಸಲಿದೆ!

ಆಗಸ್ಟ್ 3ರಂದು ರಕ್ಷಾ ಬಂಧನ. ಈ ದಿನ ಅಣ್ಣ-ತಂಗಿಯರು ಪರಸ್ಪರ ರಕ್ಷಣೆಯ ಭರವಸೆ ನೀಡಿಕೊಳ್ಳುತ್ತಾರೆ. ಕ್ರಿಕೆಟ್‌ ಲೋಕದ ಖ್ಯಾತರಿಗೂ ಅವರವರ ಸಹೋದರಿಯರು ರಕ್ಷಾಬಂಧನ ಶುಭ ಹಾರೈಸಿದ್ದಾರೆ.

ಐಪಿಎಲ್ 2020: ಆರಂಭ, ಅಂತ್ಯ, ಸಮಯ, ಕ್ರೀಡಾಂಗಣ, ಪ್ರಾಯೋಜಕತ್ವ ಎಲ್ಲದಕ್ಕೂ ಸ್ಪಷ್ಟ ಉತ್ತರ

ಟೀಮ್ ಇಂಡಿಯಾದ ಖ್ಯಾತ ಕ್ರಿಕೆಟಿಗ ಪ್ರೀತಿಯ ಸಹೋದರಿಯರ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ? ಇಲ್ಲಿ ಖ್ಯಾತ ಕ್ರಿಕೆಟಿಗರು ಮತ್ತವರ ಸಹೋದರಿಯರ ಮಾಹಿತಿಯಿದೆ.

# ವಿರಾಟ್ ಕೊಹ್ಲಿ-ಭಾವನಾ

# ವಿರಾಟ್ ಕೊಹ್ಲಿ-ಭಾವನಾ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಸೋದರಿ ಭಾವನಾ ಧಿಂಗ್ರ ಬಾಲ್ಯದಿಂದಲೂ ಆತ್ಮೀಯತೆ ಹಂಚಿಕೊಂಡು ಬೆಳೆದವರು. ರಕ್ಷಾ ಬಂಧನ ದಿನ ಭಾವನಾ ಜೊತೆಗಿರುವ ಫೋಟೋ ಶೇರ್ ಮಾಡಿರುವ ಕೊಹ್ಲಿ, 'ಹ್ಯಾಪೀ ಸಿಬ್ಲಿಂಗ್ಸ್ ಡೇ' ಎಂದು ಬರೆದುಕೊಂಡಿದ್ದಾರೆ.

# ಶಿಖರ್ ಧವನ್-ಶ್ರೇಷ್ಠ

# ಶಿಖರ್ ಧವನ್-ಶ್ರೇಷ್ಠ

ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್‌ಗೆ ಶ್ರೇಷ್ಠ ಹೆಸರಿನ ಸಹೋದರಿಯಿದ್ದಾರೆ. ಪರಸ್ಪರ ಪ್ರೀತಿಯಿಂದಿರುವ ಶಿಖರ್-ಶ್ರೇಷ್ಠ ಪ್ರತೀ ವರ್ಷವೂ ತಪ್ಪದೆ ರಕ್ಷಾಬಂಧನ ಆಚರಿಸಿಕೊಳ್ಳುತ್ತಾರೆ, ಅದರ ಸಂಭ್ರಮ ಹಂಚಿಕೊಳ್ಳುತ್ತಾರೆ.

# ಎಂಎಸ್ ಧೋನಿ-ಜಯಂತಿ

# ಎಂಎಸ್ ಧೋನಿ-ಜಯಂತಿ

ಕೂಲ್ ಕ್ಯಾಪ್ಟನ್ ಖ್ಯಾತಿಯ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಜಯಂತಿ ಎನ್ನುವ ಸಹೋದರಿಯಿದ್ದಾರೆ. ಧೋನಿಗೆ ಅಕ್ಕನಾಗಿರುವ ಜಯಂತಿ ಧೋನಿ ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತಾರೆ. ಅಂದ್ಹಾಗೆ ಜಯಂತಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

# ಜಸ್‌ಪ್ರೀತ್ ಬೂಮ್ರಾ-ಜೂಹಿಕಾ

# ಜಸ್‌ಪ್ರೀತ್ ಬೂಮ್ರಾ-ಜೂಹಿಕಾ

ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ತನ್ನ ಸಹೋದರಿ ಜೂಹಿಕಾ ಅವರನ್ನು ತುಂಬಾ ಪ್ರೀತಿಸುತ್ತಾರೆ. ಅಣ್ಣ-ತಂಗಿಯ ಕ್ಷಣಗಳ ಚಿತ್ರಗಳನ್ನು ಬೂಮ್ರಾ ಆಗೀಗ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಜೂಹಿಕಾರ ಬರ್ತ್‌ಡೇಗೆ ಬೂಮ್ರಾ ಭಾವನಾತ್ಮಕವಾಗಿ ಸಂದೇಶ ಬರೆದು ಶುಭ ಕೋರಿದ್ದರು.

# ದೀಪಕ್-ರಾಹುಲ್-ಮಾಲತಿ

# ದೀಪಕ್-ರಾಹುಲ್-ಮಾಲತಿ

ಭಾರತದ ವೇಗಿಗಳಾದ ದೀಪಕ್ ಚಾಹರ್ ಮತ್ತು ರಾಹುಲ್ ಚಾಹರ್‌ಗೆ ಮಾಲತಿ ಹೆಸರಿನ ಸಹೋದರಿಯಿದ್ದಾರೆ. ತನ್ನ ಸಹೋದರರ ಬಗ್ಗೆ ಸದಾ ಕಾಳಜಿ ವಹಿಸುವ ಮಾಲತಿ, ಸಹೋದರರ ಸಾಧನೆಯತ್ತ ಗಮನ ಹರಿಸುತ್ತಿರುತ್ತಾರೆ.

# ಸುರೇಶ್ ರೈನಾ-ರೇಣು

ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸುರೇಶ್ ರೈನಾ ಪ್ರತೀ ವರ್ಷವೂ ರಕ್ಷಾ ಬಂಧನದ ದಿನ ತನ್ನ ಸಹೋದರಿ ರೇಣು ಜೊತೆಗೆ ಫೋಟೋ ಹಂಚಿಕೊಳ್ಳುತ್ತಾರೆ. ಈ ಚಿತ್ರವನ್ನು 2018ರ ರಕ್ಷಾ ಬಂಧನ ದಿನ ರೈನಾ ಶೇರ್ ಮಾಡಿದ್ದರು.

# ಸಚಿನ್ ತೆಂಡೂಲ್ಕರ್-ಸವಿತಾ

'ಕ್ರಿಕೆಟ್ ದೇವರು', ಭಾರತದ ದಂತಕತೆ ಸಚಿನ್ ತೆಂಡೂಲ್ಕರ್‌ಗೆ ಸವಿತಾ ಹೆಸರಿನ ಸಹೋದರಿಯಿದ್ದಾರೆ. ಸಚಿನ್ ತೆಂಡೂಲ್ಕರ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಸವಿತಾ ಮಹತ್ವದ ಪಾತ್ರ ವಹಿಸಿದ್ದಾರೆ. ಸಚಿನ್ ಕೂಡ ಸವಿತಾ ಅವರನ್ನು ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ.

# ಅಜಿಂಕ್ಯ ರಹಾನೆ-ಅಪೂರ್ವಾ

# ಅಜಿಂಕ್ಯ ರಹಾನೆ-ಅಪೂರ್ವಾ

ಭಾರತದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಮತ್ತು ಸಹೋದರಿ ಅಪೂರ್ವಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕಳೆದ ವರ್ಷ ರಹಾನೆ ರಾಖಿ ದಿನ ಇಂಗ್ಲೆಂಡ್‌ನಲ್ಲಿದ್ದರು. ಈ ಬಾರಿ ಅವರಿಗೆ ರಕ್ಷಾ ಬಂಧನ ಆಚರಿಸುವ ಅವಕಾಶ ಸಿಕ್ಕಿದೆ.

# ಸೆಹ್ವಾಗ್-ಮಂಜು-ಅಂಜು

ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್‌ಗೆ ಇಬ್ಬರು ಪ್ರೀತಿಯ ಸಹೋದರಿಯರಿದ್ದಾರೆ. ಅವರು ಹೆಸರು ಮಂಜು ಮತ್ತು ಅಂಜು. ರಕ್ಷಾ ಬಂಧನ ದಿನ ಸೆಹ್ವಾಗ್ ತನ್ನ ಸಹೋದರಿಯರೊಂದಿಗಿನ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

# ಶ್ರೇಯಸ್ ಐಯ್ಯರ್-ನತಾಶಾ

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ, ಟೀಮ್ ಇಂಡಿಯಾದಲ್ಲಿ 4ನೇ ಸ್ಥಾನಕ್ಕೆ ಗಟ್ಟಿಯಾಗುತ್ತಿರುವ ಶ್ರೇಯಸ್ ಐಯ್ಯರ್ ಅವರ ಸಹೋದರಿಯ ಹೆಸರು ನತಾಶಾ. ಸಾಮಾಜಿಕ ತಾಲತಾಣದಲ್ಲಿ ಶ್ರೇಯಸ್ ಮ್ಯಾಜಿಕ್ ಮಾಡಿ ಗಮನ ಸೆಳೆಯುವಾಗ ಆಗೀಗ ನತಾಶಾ ಕೂಡ ಕಾಣಿಸಿಕೊಂಡಿದ್ದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, August 3, 2020, 22:48 [IST]
Other articles published on Aug 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X