ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

BBL: ಹೈದರಾಬಾದ್ ತಂಡದ ಜಾನಿ ಮೆಲ್ಬೋರ್ನ್ ಸ್ಟಾರ್ ತಂಡಕ್ಕೆ

Melbourne Stars sign Jonny Bairstow for upcoming BBL

ಇಂಗ್ಲೆಂಡ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜಾನಿ ಬೈಸ್ಟೋ ಅವರು ಅವಧಿಗೆ ಮುನ್ನ ಐಪಿಎಲ್ 2020 ಪ್ರಯಾಣ ಮುಗಿಸಿದ್ದು ಗೊತ್ತಿರಬಹುದು. ಜಾನಿ ಅವರು ಇದೆ ಮೊದಲ ಬಾರಿಗೆ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ನ ಮೆಲ್ಬೋರ್ನ್ ಸ್ಟಾರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

31ವರ್ಷ ವಯಸ್ಸಿನ ಯಾರ್ಕ್ ಶೈರ್ ಮೂಲದ ಜಾನಿ ಅವರು ಇಂಗ್ಲೆಂಡ್ ಪರ ಮೂರು ಮಾದರಿಯಲ್ಲಿ ಆಡಿ ಸೈ ಎನಿಸಿಕೊಂಡ ಆಟಗಾರ. 2012ರಲ್ಲಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಈಗ ಟಿ20 ಆಟಗಾರರಾಗಿ ಬೆಳೆದಿದ್ದು, ಐಪಿಎಲ್ ನಂತರ ಬಿಬಿಎಲ್ ನಲ್ಲಿ ಮೆಲ್ಬೋರ್ನ್ ಸ್ಟಾರ್ ಪರ ಆಡಲಿದ್ದು, ಕ್ರಿಸ್ಮಸ್ ನಂತರ ತಂಡ ಸೇರಲಿದ್ದಾರೆ.

''ಐಪಿಎಲ್ ಜೊತೆಗೆ ಬಿಬಿಎಲ್ ನೋಡುತ್ತಾ ಬಂದಿದ್ದೇನೆ. ಕೊನೆಗೂ ಬಿಬಿಎಲ್ ನಲ್ಲಿ ಆಡಲು ಅವಕಾಶ ಸಿಕ್ಕಿದೆ. ಸ್ಟಾರ್ಸ್ ತಂಡದ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ'' ಎಂದಿದ್ದಾರೆ.

ಐಪಿಎಲ್ 2020ರಲ್ಲಿ ಜಾನಿ 11 ಪಂದ್ಯಗಳಿಂದ 126.83 ಸ್ಟ್ರೈಕ್ ರೇಟ್ ನಂತೆ 345 ರನ್ ಗಳಿಸಿದ್ದಾರೆ. 3 ಅರ್ಧಶತಕ ಗಳಿಸಿದ್ದಾರೆ. ಒಟ್ಟಾರೆ, 21 ಪಂದ್ಯಗಳಲ್ಲಿ 142.34 ಸ್ಟ್ರೈಕ್ ರೇಟ್ ನಂತೆ 790 ರನ್ ಗಳಿಸಿದ್ದಾರೆ. 1 ಶತಕ, 5 ಅರ್ಧಶತಕ ಗಳಿಸಿದ್ದಾರೆ.

ಮೆಲ್ಬೋರ್ನ್ ಸ್ಟಾರ್ ತಂಡದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯಿನಿಸ್, ಆಡಂ ಝಂಪಾ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ ಎಲ್ಲರೂ ಬೇರೆ ಬೇರೆ ತಂಡದಲ್ಲಿ ಆಡಿದ್ದಾರೆ. ಮೆಲ್ಬೋರ್ನ್ ನಲ್ಲಿ ಸದ್ಯ ಕೊವಿಡ್ ಕಾರಣಕ್ಕಾಗಿ ನಿರ್ಬಂಧ ಜಾರಿಯಲ್ಲಿದೆ. ಹೀಗಾಗಿ ಕ್ರಿಸ್ಮಸ್ ಚಳಿ ಕಳೆದು ಪಂದ್ಯಾವಳಿ ಆಯೋಜನೆಯಾಗಲಿದೆ ಎಂದು ಮೆಲ್ಬೋನ್ ಸ್ಟಾರ್ಸ್ ತಂಡದ ಕೋಚ್ ಡೇವಿಡ್ ಹಸ್ಸಿ ಹೇಳಿದ್ದಾರೆ.

ಮೆಲ್ಬೋನ್ ಸ್ಟಾರ್ಸ್ ತಂಡ: ಗ್ಲೆನ್ ಮ್ಯಾಕ್ಸ್ ವೆಲ್(ನಾಯಕ), ಜಾನಿ ಬೈರ್ಸ್ಟೋ, ಹಿಲ್ಟನ್ ಕಾರ್ಟ್ ರೈಟ್, ನಾಥನ್ ಕೌಲ್ಟರ್ ನೈಲ್, ಬೆನ್ ಡಂಕ್, ಸೆಬ್ ಗಾಚ್, ಕ್ಲೈಂಟ್ ಹಿಂಚ್ಲಿಫೆ, ನಿಕ್ ಮ್ಯಾಡಿಸನ್, ಲ್ಯಾನ್ಸ್ ಮೊರಿಸ್, ಟಾಮ್ ಓ ಕೊನೆಲ್, ವಿಲ್ ಪುಕೊವೊಸ್ಕಿ, ಬಿಲ್ ಸ್ಟಾನ್ ಲೇಕ್, ಮಾರ್ಕಸ್ ಸ್ತೋಯಿನಿಸ್, ಆಡಂ ಝಂಪಾ.

Story first published: Monday, November 9, 2020, 16:54 [IST]
Other articles published on Nov 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X