ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮುಂದುವರಿದರೆ ಮುಂಬೈ, ಆರ್‌ಸಿಬಿ ಸೇಫ್ ; ಉಳಿದ ತಂಡಗಳಿಗೆ ಸಂಕಷ್ಟ ಪಕ್ಕಾ

 MI and RCB will be absolutely unaffected says Aakash Chopra
RCB, ಮುಂಬೈ ಬಿಟ್ಟು IPL ಉಳಿದ ತಂಡಗಳಿಗೆ ಎದುರಾಗಲಿದೆ ಸಂಕಷ್ಟ | Oneindia Kannada

ಕೊರೊನಾವೈರಸ್ ಹೊಡೆತದಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಮುಂದೂಡಲಾಗಿದೆ. ಅರ್ಧಕ್ಕೆ ನಿಂತಿರುವ ಐಪಿಎಲ್ ಟೂರ್ನಿಯನ್ನು ಸೆಪ್ಟೆಂಬರ್‌ನಲ್ಲಿ ಮುಂದುವರಿಸುವ ಯೋಜನೆಯಲ್ಲಿದೆ ಬಿಸಿಸಿಐ. ಯುಎಇ ಅಥವಾ ಇಂಗ್ಲೆಂಡ್‌ನಲ್ಲಿ ಐಪಿಎಲ್ ಮುಂದುವರಿಯುವ ಸಾಧ್ಯತೆಯಿದೆ.

ಹೀಗಾಗಿ ಐಪಿಎಲ್ ಪುನರಾರಂಭವಾಗಲು ಇನ್ನೂ 4 ತಿಂಗಳ ಸಮಯವಿದ್ದು ಅಷ್ಟರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಸೇರಿ ಹಲವಾರು ಅಂತಾರಾಷ್ಟ್ರೀಯ ಸರಣಿಗಳು ನಡೆಯಲಿವೆ. ಅಲ್ಲದೆ ಈ ಹಿಂದೆ ನಿಶ್ಚಯಿಸಿದಂತೆ ಸೆಪ್ಟೆಂಬರ್ ನಂತರ ವಿವಿಧ ದೇಶಗಳ ನಡುವೆ ಸರಣಿಗಳು ನಡೆಯಲಿದ್ದು ಕೆಲ ತಂಡಗಳ ಆಟಗಾರರು ಪುನರಾರಂಭವಾಗುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಹರಿದಾಡುತ್ತಿವೆ.

ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ಧ ಇಂಗ್ಲೆಂಡ್ ಸರಣಿಗಳಿರುವುದರಿಂದ ಹಾಗೂ ಪ್ರತಿಷ್ಟಿತ ಆ್ಯಶಸ್ ಸರಣಿ ಕೂಡ ಮುಂಬರುವುದರಿಂದ ಸೆಪ್ಟೆಂಬರ್ ತಿಂಗಳಿನಲ್ಲಿ ಪುನರಾರಂಭವಾಗುವ ಐಪಿಎಲ್ ಟೂರ್ನಿಗೆ ಬಹುತೇಕ ಇಂಗ್ಲೆಂಡ್ ಆಟಗಾರರು ಅಲಭ್ಯರಾಗಲಿದ್ದಾರೆ ಎಂಬ ಸುದ್ದಿ ಇದೆ. ಈ ವಿಷಯದ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಹೊರತುಪಡಿಸಿ ಉಳಿದ ತಂಡಗಳಿಗೆ ಇಂಗ್ಲೆಂಡ್ ತಂಡದ ಆಟಗಾರರ ಅಲಭ್ಯತೆ ಸಂಕಷ್ಟವಾಗಿ ಪರಿಣಮಿಸಲಿದೆ ಎಂದು ತಿಳಿಸಿದ್ದಾರೆ.

ಮುಂಬೈ ತಂಡದಲ್ಲಿ ಆಂಗ್ಲ ಆಟಗಾರರಿಲ್ಲ

ಮುಂಬೈ ತಂಡದಲ್ಲಿ ಆಂಗ್ಲ ಆಟಗಾರರಿಲ್ಲ

ಮುಂಬೈ ಇಂಡಿಯನ್ಸ್ ತಂಡದಲ್ಲಿ ಇಂಗ್ಲೆಂಡ್ ತಂಡದ ಆಟಗಾರರೇ ಇಲ್ಲ. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಗೆ ಇಂಗ್ಲೆಂಡ್ ಆಟಗಾರರ ಅಲಭ್ಯತೆಯ ಕುರಿತು ಮುಂಬೈ ಇಂಡಿಯನ್ಸ್ ಯಾವುದೇ ರೀತಿಯಲ್ಲೂ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ. ತಂಡದಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾದ ಆಟಗಾರರಿದ್ದು ಮುಂಬೈ ಇಂಡಿಯನ್ಸ್ ತಂಡಕ್ಕೆ ಇಂಗ್ಲೆಂಡ್ ಆಟಗಾರರ ಅಲಭ್ಯತೆ ಯಾವುದೇ ರೀತಿಯ ಪ್ರಭಾವವನ್ನು ಬೀರುವುದಿಲ್ಲ ಎಂದು ಆಕಾಶ್ ಚೋಪ್ರಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಸೇಫ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಸೇಫ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಮುಂದುವರಿಯುವ ಐಪಿಎಲ್ ಟೂರ್ನಿಗೆ ಇಂಗ್ಲೆಂಡ್ ಆಟಗಾರರ ಅಲಭ್ಯತೆಯ ಕುರಿತು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ, ತಂಡದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡದ ಆಟಗಾರರೇ ಹೆಚ್ಚಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್, ಡೇನಿಯಲ್ ಸ್ಯಾಮ್ಸ್, ಆಡಂ ಜಂಪಾ ಹಾಗೂ ಡೇನಿಯಲ್ ಕ್ರಿಶ್ಚಿಯನ್ ನಾಲ್ವರೂ ಕೂಡ ಆಸ್ಟ್ರೇಲಿಯಾ ತಂಡದ ಆಟಗಾರರಾಗಿದ್ದು, ತಂಡದ ಪ್ರಮುಖ ವಿದೇಶಿ ಆಟಗಾರ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ತಂಡದವರಾಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ಆಟಗಾರರ ಅಲಭ್ಯತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೂ ಕೂಡ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ರಾಜಸ್ಥಾನ್, ಹೈದರಾಬಾದ್ ಹಾಗೂ ಚೆನ್ನೈಗೆ ಸಂಕಷ್ಟ

ರಾಜಸ್ಥಾನ್, ಹೈದರಾಬಾದ್ ಹಾಗೂ ಚೆನ್ನೈಗೆ ಸಂಕಷ್ಟ

ರಾಜಸ್ಥಾನ್ ರಾಯಲ್ಸ್ ತಂಡದ ಪ್ರಮುಖ ಅಸ್ತ್ರ ಜೋಸ್ ಬಟ್ಲರ್, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಯಾಮ್ ಕರನ್, ಸನ್ ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಆಟಗಾರ ಜಾನಿ ಬೇರ್‌ಸ್ಟೋವ್ ಹಾಗೂ ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್ ಇಂಗ್ಲೆಂಡ್ ತಂಡದ ಆಟಗಾರರಾಗಿರುವುದರಿಂದ ಈ ತಂಡಗಳಿಗೆ ಈ ಆಟಗಾರರ ಅಲಭ್ಯತೆ ಖಚಿತವಾಗಿಯೂ ಕಾಡಲಿದೆ. ಇನ್ನುಳಿದ ತಂಡಗಳಲ್ಲಿಯೂ ಕೆಲವೊಂದಿಷ್ಟು ಇಂಗ್ಲೆಂಡ್ ಆಟಗಾರರಿದ್ದು ಆ ತಂಡಗಳಿಗೂ ಇಂಗ್ಲೆಂಡ್ ಆಟಗಾರರ ಅಲಭ್ಯತೆ ತಲೆನೋವಾಗಿ ಪರಿಣಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Story first published: Sunday, May 16, 2021, 9:08 [IST]
Other articles published on May 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X