ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಶೀದ್ ಖಾನ್, ಲಿವಿಂಗ್‌ಸ್ಟೋನ್ ಸೇರಿ ಐವರು MI ಕೇಪ್‌ಟೌನ್‌ ಫ್ರಾಂಚೈಸಿಗೆ ಸಹಿ

Liam livingstone

ಐಪಿಎಲ್ ಮಾದರಿಯಲ್ಲಿ ಹುಟ್ಟಿಕೊಂಡಿರುವ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಫ್ರಾಂಚೈಸಿ ಗಿಟ್ಟಿಸಿಕೊಂಡಿರುವ ಭಾರತ ಮೂಲದ ಫ್ರಾಂಚೈಸಿಗಳಲ್ಲಿ ಮುಂಬೈ ಇಂಡಿಯನ್ಸ್ ಕೂಡ ಒಂದಾಗಿದೆ. ಆರು ಫ್ರಾಂಚೈಸಿಗಳಲ್ಲಿ ಒಂದಾಗಿರುವ ಮುಂಬೈ ಕೇಪ್‌ಟೌನ್‌ನಲ್ಲಿ ಯಾವೆಲ್ಲಾ ಆಟಗಾರರು ಸೇರ್ಪಡೆಯಾಗಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು. ಆದ್ರೀಗ ಮುಂಬೈ ಕೇಪ್‌ಟೌನ್ ತಂಡ ಸೇರಿಕೊಂಡ ಐವರು ಹೆಸರು ಬಹಿರಂಗಗೊಂಡಿದೆ.

ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್‌ ತನ್ನ ಫ್ರಾಂಚೈಸಿ ವ್ಯಾಪ್ತಿಯನ್ನ ಬೇರೆ ದೇಶದಲ್ಲೂ ಖರೀದಿಸಿದ್ದು, ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲೂ ಸ್ಪರ್ಧೆಗೆ ಸಜ್ಜಾಗಿದೆ. ಹೀಗಾಗಿ ಭಾರತದ ಕೆಲವು ಆಟಗಾರರನ್ನ ಅಲ್ಲಿಯೂ ಖರೀದಿಸಲು ಸಿದ್ಧತೆ ನಡೆಸುತ್ತಿದೆ.

ಕೇಪ್‌ಟೌನ್ ಫ್ರಾಂಚೈಸಿ ಖರೀದಿಸಿರುವ ಮುಂಬೈ ಇಂಡಿಯನ್ಸ್‌

ಕೇಪ್‌ಟೌನ್ ಫ್ರಾಂಚೈಸಿ ಖರೀದಿಸಿರುವ ಮುಂಬೈ ಇಂಡಿಯನ್ಸ್‌

ಫ್ರ್ಯಾಂಚೈಸ್ ಕೇಪ್ ಟೌನ್‌ನಿಂದ ತಮ್ಮ ತಂಡವನ್ನು ಸ್ಥಾಪಿಸುವ ಹಕ್ಕುಗಳನ್ನು ಮುಂಬೈ ಇಂಡಿಯನ್ಸ್‌ ಪಡೆದುಕೊಂಡಿದೆ. ಐಪಿಎಲ್ ಮತ್ತು ಮುಂಬೈ ಇಂಡಿಯನ್ಸ್ ಸ್ಪರ್ಧೆಯ ಉತ್ತಮ ಭಾಗವಾಗಲು ಬಯಸುವಂತೆಯೇ ದಕ್ಷಿಣ ಆಫ್ರಿಕಾದ ಲೀಗ್ ಖ್ಯಾತಿಯನ್ನು ನಿರ್ಮಿಸಲು ಬಯಸುತ್ತದೆ.

ಕೇಪ್‌ಟೌನ್ ಫ್ರಾಂಚೈಸಿಗಾಗಿ ಮುಂಬೈ ಕೆಲವು ಐಪಿಎಲ್ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ಈ ಟಿ20 ಲೀಗ್‌ನಲ್ಲಿ ಭಾರತದ ಹಾಲಿ ಆಟಗಾರರು ಯಾರು ಭಾಗಿಯಾಗುವಂತಿಲ್ಲ, ಹೀಗಾಗಿ ವಿದೇಶಿ ಆಟಗಾರರಿಗೆ ಲೀಗ್‌ನಲ್ಲಿ ಹೆಚ್ಚಿನ ಅವಕಾಶ ನೀಡಿದೆ.

ಹೆಚ್ಚಾಯ್ತು ಲೀಗ್‌ ಕ್ರಿಕೆಟ್‌ನ ಅಬ್ಬರ: ಬಿಸಿಸಿಐಗೆ ನಿದ್ದೆಗೆಡಿಸಿದೆ ಐಪಿಎಲ್ ಫ್ರಾಂಚೈಸಿಗಳ ಈ ನಡೆ!

ರಶೀದ್ ಖಾನ್, ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ತಂಡದಲ್ಲಿ ಅವಕಾಶ

ರಶೀದ್ ಖಾನ್, ಲಿಯಾಮ್ ಲಿವಿಂಗ್‌ಸ್ಟೋನ್‌ಗೆ ತಂಡದಲ್ಲಿ ಅವಕಾಶ

ಮುಂಬೈ ಇಂಡಿಯನ್ಸ್ ತಂಡದ ಬೇಬಿ ಎಬಿಡಿ ಖ್ಯಾತಿಯ ಡೆವಾಲ್ಡ್‌ ಬ್ರೆವಿಸ್ ಮುಂಬೈ ಕೇಪ್‌ಟೌನ್‌ಗೆ ಸಹಿ ಮಾಡಿದ ಆಟಗಾರಲ್ಲಿ ಒಬ್ಬರಾಗಿದ್ದು, ಇಂಗ್ಲೆಂಡ್ ಸ್ಫೋಟಕ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್, ಅಫ್ಘಾನಿಸ್ತಾನದ ಮಿಸ್ಟರಿ ಸ್ಪಿನ್ನರ್ ರಶೀದ್ ಖಾನ್ ಮುಂಬೈ ಕೇಪ್‌ಟೌನ್ ಫ್ರಾಂಚೈಸಿಗೆ ಸಹಿ ಮಾಡಿದ್ದಾರೆ.

ಮೂವರು ವಿದೇಶಿ ಆಟಗಾರರನ್ನ ಎಂಐ ಕೇಪ್‌ಟೌನ್ ಸೇರಿಸಿಕೊಂಡಿದ್ದು, ದಕ್ಷಿಣ ಆಫ್ರಿಕಾದ ಓರ್ವ ಕ್ಯಾಪ್ಡ್‌ ಆಟಗಾರ, ಓರ್ವ ಅನ್‌ಕ್ಯಾಪ್ಡ್ ಆಟಗಾರರನ್ನ ಒಳಗೊಂಡಿದೆ. ಈ ಮೂಲಕ ಟೂರ್ನಿ ಉದ್ಘಾಟನೆಗೂ ಮೊದಲೇ ಎಂಐ ಕೇಪ್‌ಟೌನ್ ಆಟಗಾರರನ್ನ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಮುಂಬೈ ಇಂಡಿಯನ್ಸ್ ಅಷ್ಟೇ ಅಲ್ಲದೆ ರಾಜಸ್ಥಾನ್ ರಾಯಲ್ಸ್, ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಸಹಿತ ಐಪಿಎಲ್ ಫ್ರಾಂಚೈಸಿಗಳು ವಿದೇಶಿ ಲೀಗ್‌ಗಳಲ್ಲಿಯೂ ತಂಡಗಳನ್ನು ಖರೀದಿಸಿದೆ.

ಏಷ್ಯಾ ಕಪ್ 2022: ಈತನನ್ನು ತಂಡದಿಂದ ಹೊರಗಿಟ್ಟಿರುವುದು ಆಶ್ಚರ್ಯ ತಂದಿದೆ; ಪಾರ್ಥಿವ್ ಪಟೇಲ್

ಕೆಲವು ಮಾಜಿ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುವ ಯೋಜನೆ

ಕೆಲವು ಮಾಜಿ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಳ್ಳುವ ಯೋಜನೆ

ಟಿ20 ಲೀಗ್‌ನಲ್ಲಿ ಭಾರತದ ಹಾಲಿ ಆಟಗಾರರು ಯಾರು ಭಾಗಿಯಾಗುವಂತಿಲ್ಲ, ಹೀಗಾಗಿ ಮಾಜಿ ಆಟಗಾರರು ಲೀಗ್‌ನಲ್ಲಿ ಭಾಗವಹಿಸುವ ಅವಕಾಶ ಹೊಂದಿದ್ದಾರೆ. ಮುಂಬೈ ಇಂಡಿಯನ್ಸ್‌ ಒಡೆತನದ ದಕ್ಷಿಣ ಆಫ್ರಿಕಾ ಟಿ20 ಲೀಗ್‌ ಫ್ರಾಂಚೈಸಿ ಕೆಲವು ಮಾಜಿ ಆಟಗಾರರ ಮೇಲೂ ಕಣ್ಣಿಟ್ಟಿದೆ. ಜೊತೆಗೆ ಬಿಸಿಸಿಐ ಕಾಂಟ್ರ್ಯಾಕ್ಟ್‌ನಿಂದ ಹೊರಗುಳಿದಿರುವ ಆಟಗಾರರು ಸಹ ಸೇರಿಕೊಳ್ಳಲಿದ್ದಾರೆ.

Virat Kohli ತಮ್ಮ ನೂರನೇ ಪಂದ್ಯವನ್ನು Pakistan ವಿರುದ್ಧ ಆಡಲಿದ್ದಾರೆ | *Cricket | OneIndia Kannada
ಎರಡು ಹೊಸ ಟಿ20 ಲೀಗ್‌ಗೆ ಸಾಕ್ಷಿಯಾಗಲಿದೆ ಟಿ20 ಜಗತ್ತು

ಎರಡು ಹೊಸ ಟಿ20 ಲೀಗ್‌ಗೆ ಸಾಕ್ಷಿಯಾಗಲಿದೆ ಟಿ20 ಜಗತ್ತು

ಹೊಸದಾಗಿ ಆರಂಭಗೊಳ್ಳುತ್ತಿರುವ ಯುಎಇನ ಟಿ20 ಲೀಗ್, ಕ್ರಿಕೆಟ್ ದಕ್ಷಿಣ ಆಫ್ರಿಕಾದ ಟಿ20 ಲೀಗ್ ಮತ್ತಷ್ಟು ಮನರಂಜನೆಗೆ ಸಾಕ್ಷಿಯಾಗಲಿದ್ದು, ವಿಶ್ವದೆಲ್ಲೆಡೆ ಟಿ20 ಸರಣಿ ಮತ್ತಷ್ಟು ಪಸರಿಸಲಿದೆ.

ಈಗಾಗಲೇ ಐಪಿಎಲ್, ಬಿಗ್ ಬ್ಯಾಶ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ಗಳಲ್ಲಿ ಅನೇಕ ಕೆರಿಬಿಯನ್, ದಕ್ಷಿಣ ಆಫ್ರಿಕಾ ಹಾಗೂ ಆಸಿಸ್ ಆಟಗಾರರು ಭಾಗಿಯಾಗುತ್ತಿದ್ದು, ಹೀಗೆಯೇ ಮುಂದುವರೆದ್ರೆ ನಿಜವಾಗಿಯೂ ಅಂತರಾಷ್ಟ್ರೀಯ ಕ್ರಿಕೆಟ್ ಉಳಿಯುತ್ತದೆಯೇ ಎಂಬುದು ಪ್ರಶ್ನೆಯಾಗಿದೆ.

Story first published: Thursday, August 11, 2022, 17:12 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X