ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಅಪರೂಪದ ದಾಖಲೆ ಬರೆದ ಎಂಐ ವೇಗಿ ಜಸ್‌ಪ್ರೀತ್‌ ಬೂಮ್ರಾ

MI unearth Jasprit Bumrah’s incredible IPL record after title victory

ಮುಂಬೈ, ಮೇ 17: ಕೆಲವೊಮ್ಮೆ ದಾಖಲೆಗಳು ಪಕ್ಕನೆ ಬೆಳಕಿಗೆ ಬರೋಲ್ಲ. ಇತಿಹಾಸ ಕೆದಕಿ ಅಂಕಿ-ಅಂಶಗಳ ತುಲನೆ ಮಾಡಿದಾಗ ಅಪರೂಪದ ದಾಖಲೆಗಳು ಗಮನಕ್ಕೆ ಬಂದಿದ್ದ ಅನೇಕ ಸಂಗತಿಗಳಿವೆ. ಈ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ವೇಗಿ ಜಸ್‌ಪ್ರೀತ್ ಬೂಮ್ರಾ ಕೂಡ ಇಂಥದ್ದೇ ದಾಖಲೆ ನಿರ್ಮಿಸಿದ್ದರು.

ODI ವಿಶ್ವಕಪ್‌ನಲ್ಲಿ ದಾಖಲಾದ 5 ವೈಯಕ್ತಿಕ ಗರಿಷ್ಠ ಮೊತ್ತಗಳಿವು!ODI ವಿಶ್ವಕಪ್‌ನಲ್ಲಿ ದಾಖಲಾದ 5 ವೈಯಕ್ತಿಕ ಗರಿಷ್ಠ ಮೊತ್ತಗಳಿವು!

ಹೈದರಾಬಾದ್‌ನಲ್ಲಿ ನಡೆದ 2019ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್ ತಂಡಗಳು ಕಾದಾಡಿದ್ದವು. ಇದರಲ್ಲಿ ಮುಂಬೈ 1 ರನ್ ರೋಚಕ ಗೆಲುವನ್ನಾಚರಿಸಿತ್ತು. ಎಂಐ ಗೆಲುವಿಗೆ ಬೂಮ್ರಾ 14 ರನ್‌ಗೆ 2 ವಿಕೆಟ್ ಸಾಧನೆಯೂ ಮಹತ್ವದ್ದೆನಿಸಿತ್ತು.

ಐಸಿಸಿ ವಿಶ್ವಕಪ್ 2019: ಚಾಂಪಿಯನ್ ತಂಡಕ್ಕೆ ಭರ್ಜರಿ ನಗದು ಬಹುಮಾನ!ಐಸಿಸಿ ವಿಶ್ವಕಪ್ 2019: ಚಾಂಪಿಯನ್ ತಂಡಕ್ಕೆ ಭರ್ಜರಿ ನಗದು ಬಹುಮಾನ!

ಫೈನಲ್‌ನಲ್ಲಿ ಬೂಮ್ರಾ ನಿರ್ಮಿಸಿದ ದಾಖಲೆ ಮತ್ತು ಹಿಂದಿನ ಅಂಕಿ-ಅಂಶಗಳ ಒಂದು ಇಣುಕು ಇಲ್ಲಿದೆ.

ಮ್ಯಾನ್ ಆಫ್ ದ ಮ್ಯಾಚ್ ಬೂಮ್ರಾ

ಮ್ಯಾನ್ ಆಫ್ ದ ಮ್ಯಾಚ್ ಬೂಮ್ರಾ

ಮುಂಬೈ ಇಂಡಿಯನ್ಸ್ ನಾಲ್ಕನೇ ಐಪಿಲ್ ಟ್ರೋಫಿ ಜಯಿಸಿ ದಾಖಲೆ ನಿರ್ಮಿಸಿದರೆ, ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡಿದ್ದ ಜಸ್‌ಪ್ರೀತ್ ಬೂಮ್ರಾ ಐಪಿಎಲ್ ಫೈನಲ್‌ನಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಜಯಿಸಿದ ಎರಡನೇ ಬೌಲರ್ ಎಂಬ ದಾಖಲೆಗೆ ಕಾರಣರಾಗಿದ್ದರು.

ಹೀರೋ ಆಗಿದ್ದ ಕುಂಬ್ಳೆ

ಹೀರೋ ಆಗಿದ್ದ ಕುಂಬ್ಳೆ

ಈ ಹಿಂದೆ ಬೌಲರ್‌ಗಳಲ್ಲಿ ಮ್ಯಾನ್ ಆಫ್‌ ದ ಮ್ಯಾಚ್ ಪ್ರಶಸ್ತಿ ಜಯಿಸಿದ ಹಿರಿಮೆ ಕನ್ನಡಿಗ ಅನಿಲ್ ಕುಂಬ್ಳೆ ಅವರದ್ದು. 2009ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದ ಕುಂಬ್ಳೆ, ಡೆಕ್ಕನ್ ಚಾರ್ಜರ್ಸ್ ವಿರುದ್ಧ 16 ರನ್‌ಗೆ 4 ವಿಕೆಟ್‌ ಕಬಳಿಸಿ ಪಂದ್ಯಶ್ರೇಷ್ಠರಾಗಿ ಮಿಂಚಿದ್ದರು.

ಯೂಸೂಫ್ ಮೊದಲ ಪಂದ್ಯಶ್ರೇಷ್ಠ ಆಟಗಾರ

ಯೂಸೂಫ್ ಮೊದಲ ಪಂದ್ಯಶ್ರೇಷ್ಠ ಆಟಗಾರ

ಐಪಿಎಲ್ ಇತಿಹಾಸ ಗಮನಿಸಿದರೆ ಫೈನಲ್ ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದವರ ಸಾಲಿನಲ್ಲಿ ಯೂಸೂಫ್ ಪಠಾಣ್ (2008), ಅನಿಲ್ ಕುಂಬ್ಳೆ (2009), ಸುರೇಶ್ ರೈನಾ (2010), ಮುರಳಿ ವಿಜಯ್ (2011), ಮನ್‌ವೀಂದರ್ ಬಿಸ್ಲ (2012), ಕೀರನ್ ಪೊಲಾರ್ಡ್ (2013), ಮನೀಶ್ ಪಾಂಡೆ (2014), ರೋಹಿತ್ ಶರ್ಮಾ (2015), ಬೆನ್ ಕಟಿಂಗ್ (2016), ಕೃನಾಲ್ ಪಾಂಡ್ಯ (2017), ಶೇನ್ ವ್ಯಾಟ್ಸನ್ (2018), ಜಸ್‌ಪ್ರೀತ್‌ ಬೂಮ್ರಾ (2019) ಬರುತ್ತಾರೆ.

ಮುಂಬೈ ಇಂಡಿಯನ್ಸ್‌ಗೆ ಅಗ್ರ ಸ್ಥಾನ

ಮುಂಬೈ ಇಂಡಿಯನ್ಸ್‌ಗೆ ಅಗ್ರ ಸ್ಥಾನ

ಒಟ್ಟು ನಾಲ್ಕು ಸಾರಿ ಐಪಿಎಲ್ ಟ್ರೋಫಿ ಜಯಿಸಿ ಅತೀ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಆಟಗಾರರೇ ಹೆಚ್ಚು ಸಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕೀರನ್ ಪೊಲಾರ್ಡ್ (2013), ರೋಹಿತ್ ಶರ್ಮಾ (2015), ಕೃನಾಲ್ ಪಾಂಡ್ಯ (2017), ಜಸ್‌ಪ್ರೀತ್‌ ಬೂಮ್ರಾ (2019) ಹೀಗೆ ಒಟ್ಟು 4 ಬಾರಿ ಫೈನಲ್‌ನಲ್ಲಿ ಎಂಐ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಂತಾಗಿದೆ.

Story first published: Friday, May 17, 2019, 17:41 [IST]
Other articles published on May 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X