ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯರೇಕೆ ಚತುರ ಬ್ಯಾಟ್ಸ್‌ಮನ್‌ಗಳು?!: ಅಥರ್ಟನ್ ಸ್ವಾರಸ್ಯಕರ ವಿವರಣೆ

Michael Atherton explains why Indian openers are so genius

ಲಂಡನ್: ರೋಹಿತ್ ಶರ್ಮಾ ಆಟದ ವೈಖರಿ ನೋಡುವಾಗಲೇ ಅವರೊಬ್ಬರು ಅಪಾಯಕಾರಿ ಬ್ಯಾಟ್ಸ್‌ಮನ್‌ ಅನ್ನೋದು ಎದುರಿದ್ದವರಿಗೆ ಅರ್ಥವಾಗಿಬಿಡುತ್ತದೆ. ಬ್ಯಾಟ್ ಬೀಸುವಾಗಿನ ಟೈಮಿಂಗ್, ಪುಲ್ ಶಾಟ್ ಹೊಡೆಯುವ ರೀತಿ ಇವೆಲ್ಲ ಶರ್ಮಾ ಅವರನ್ನು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ತಂದು ನಿಲ್ಲಿಸಿದೆ. ಅದರಲ್ಲೂ ಆರಂಭಿಕರಾಗಿ ರೋಹಿತ್ ಅವರ ದಿಟ್ಟ ಬ್ಯಾಟಿಂಗ್ ಭಾರತಕ್ಕೆ ಅನೇಕ ಬಾರಿ ಬಲ ತುಂಬಿದ್ದಿದೆ. ಈ ಉತ್ತಮ ಬ್ಯಾಟಿಂಗ್ ಶೈಲಿಗಾಗಿಯೇ ಟೆಸ್ಟ್‌ನಲ್ಲೂ ರೋಹಿತ್ ಓಪನರ್‌ ಆಗಿ ಬಡ್ತಿ ಪಡೆದರು.

'ಆತ ಬೆಸ್ಟ್, ಶ್ರೇಷ್ಠ ಮನುಷ್ಯ': ಭಾರತೀಯನ ಶ್ಲಾಘಿಸಿದ ಮೊಹಮ್ಮದ್ ನಬಿ'ಆತ ಬೆಸ್ಟ್, ಶ್ರೇಷ್ಠ ಮನುಷ್ಯ': ಭಾರತೀಯನ ಶ್ಲಾಘಿಸಿದ ಮೊಹಮ್ಮದ್ ನಬಿ

ಕಳೆದ ಅಕ್ಟೋಬರ್‌ನಲ್ಲಷ್ಟೇ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರಂಭಿಕ ಸ್ಥಾನ ಆವರಿಸಿರುವ ರೋಹಿತ್ ಶರ್ಮಾ ಕೇವಲ 10 ಪಂದ್ಯಗಳಲ್ಲಿ 556 ರನ್ ಕಲೆ ಹಾಕಿದ್ದಾರೆಂದರೆ ರೋಹಿತ್ ಬ್ಯಾಟಿಂಗ್ ಹೇಗಿರುತ್ತದೆ ಅನ್ನೋದು ನಿಮಗರ್ಥವಾಗಬಹುದು. ಲಿಮಿಟೆಡ್ ಓವರ್‌ ಕ್ರಿಕೆಟ್‌ನ ಯಶಸ್ಸನ್ನು ಟೆಸ್ಟ್‌ ಕ್ರಿಕೆಟ್‌ಗೂ ತರಲು ಸಾಧ್ಯವಿದೆ ಅಂತ ತೋರಿಸಿಕೊಟ್ಟವರು ಹಿಟ್‌ಮ್ಯಾನ್ ರೋಹಿತ್.

ಕ್ಯಾಪ್ಶನ್ ಕೊಡಿ ಅಂದಿದ್ದೆ ತಡ, ಕರ್ನಾಟಕ ರಣಜಿ ಚಿತ್ರಕ್ಕೆ ಬಂತು ತರ್ಲೆ ರಿಪ್ಲೆಗಳು!ಕ್ಯಾಪ್ಶನ್ ಕೊಡಿ ಅಂದಿದ್ದೆ ತಡ, ಕರ್ನಾಟಕ ರಣಜಿ ಚಿತ್ರಕ್ಕೆ ಬಂತು ತರ್ಲೆ ರಿಪ್ಲೆಗಳು!

ರೋಹಿತ್ ಶರ್ಮಾ ಸೇರಿದಂತೆ ಅನೇಕ ಭಾರತೀಯರು ಯಾಕೆ ಚತುರು ಬ್ಯಾಟ್ಸ್‌ಮನ್‌ಗಳಾಗಿದ್ದಾರೆ ಅನ್ನೋದಕ್ಕೆ ಇಂಗ್ಲೆಂಡ್ ಮಾಜಿ ಓಪನರ್ ಮೈಕೆಲ್ ಅಥರ್ಟನ್ ಸ್ವಾರಸ್ಯಕರ ವಿವರಣೆ ಕೊಟ್ಟಿದ್ದಾರೆ.

ಒಳ್ಳೆ ಬ್ಯಾಟ್ಸ್‌ಮನ್ ಆಗಿ ಕಾಣಿಸುತ್ತಾರೆ

ಒಳ್ಳೆ ಬ್ಯಾಟ್ಸ್‌ಮನ್ ಆಗಿ ಕಾಣಿಸುತ್ತಾರೆ

'ರೋಹಿತ್ ಶರ್ಮಾ ಅವರ ಆಟ ನಾನು ನೋಡುತ್ತಿರುತ್ತೇನೆ. ನೋಡುತ್ತಿರುವಾಗ ನೀವೆಲ್ಲ ಯಾಕೆ ಟೆಸ್ಟ್‌ ಮಟ್ಟದಲ್ಲಿ ಯಶಸ್ವಿಯಾಗುತ್ತಿಲ್ಲ ಅಂತ ಯೋಚಿಸುತ್ತೇನೆ. ರೋಹಿತ್ ಅವರನ್ನು ನೋಡುವಾಗೆಲ್ಲ ಅವರು ಒಳ್ಳೆಯ ಬ್ಯಾಟ್ಸ್‌ಮನ್ ಆಗಿ ಕಾಣಿಸುತ್ತಾರೆ. ಇದೇ ಕಾರಣಕ್ಕೆ ಅವರು ಹೆಚ್ಚು ಯಶಸ್ವಿ ಆರಂಭಿಕ ಬ್ಯಾಟ್ಸ್‌ಮನ್ ಅನ್ನಿಸಿಕೊಳ್ಳುತ್ತಿದ್ದಾರೆ,' ಎಂದು ಅಥರ್ಟನ್ ಹೇಳಿದ್ದಾರೆ.

ಭಾರತೀಯರು ಸ್ವಾಭಾವಿಕ ಬ್ಯಾಟ್ಸ್‌ಮನ್‌ಗಳು

ಭಾರತೀಯರು ಸ್ವಾಭಾವಿಕ ಬ್ಯಾಟ್ಸ್‌ಮನ್‌ಗಳು

ಸೋನಿ ಟೆನ್‌ನ ಪಿಟ್‌ ಸ್ಟಾಪ್ ಶೋನಲ್ಲಿ ಮಾತನಾಡಿದ ಅಥರ್ಟನ್, 'ರೋಹಿತ್ ಬ್ಯಾಟಿಂಗ್ ನೋಡುವಾಗ ಒಂದು ವಿಚಾರವನ್ನು ನಾನು ಎಂಜಾಯ್ ಮಾಡುತ್ತೇನೆ. ಅದು ಸಾಮಾನ್ಯ ಅಂಶ ಕೂಡ, ಅದೇನೆಂದರೆ ಭಾರತೀಯ ಬ್ಯಾಟ್ಸ್‌ಮನ್‌ಗಳು ತುಂಬಾ ಕೋಚಿಂಗ್‌ನ ಅಗತ್ಯವಿಲ್ಲದ, ಒತ್ತಾಯಪೂರ್ವಕವಾಗಿ ಆಡುವ ಬ್ಯಾಟ್ಸ್‌ಮನ್‌ಗಳಾಗಿ ಕಾಣದೆ ಸ್ವಾಭಾವಿಕ ಬ್ಯಾಟ್ಸ್‌ಮನ್‌ಗಳಾಗಿ ಕಾಣಿಸುತ್ತಾರೆ,' ಎಂದರು.

ರಾಹುಲ್ ದ್ರಾವಿಡ್ ಜೊತೆ ಪ್ರಶ್ನೆ

ರಾಹುಲ್ ದ್ರಾವಿಡ್ ಜೊತೆ ಪ್ರಶ್ನೆ

ಭಾರತ 'ಎ' ತಂಡದ ಮತ್ತು ಅಂಡರ್ 19 ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಜೊತೆಗಿನ ಸಂವಾದನ್ನೂ ಅಥರ್ಟನ್ ನೆನಪಿಸಿಕೊಂಡರು. 'ಕೆಲ ವರ್ಷಗಳ ಹಿಂದೆ ನಾನೊಮ್ಮೆ ರಾಹುಲ್ ದ್ರಾವಿಡ್ ಜೊತೆ ಮಾತನಾಡುತ್ತಿದ್ದೆ. ಇಷ್ಟು ಸಣ್ಣ ವಯಸ್ಸಿನಲ್ಲೂ ಭಾರತೀಯ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್ ಆಟಗಾರರಿಗಿಂತ ಹೆಚ್ಚು ಸ್ವಾಭಾವಿಕರಾಗಿ ಕಾಣುತ್ತಾರಲ್ಲ ಯಾಕೆ ಎಂದು ದ್ರಾವಿಡ್ ಜೊತೆ ಆವತ್ತು ಪ್ರಶ್ನಿಸಿದ್ದೆ,' ಎಂದು ಅಥರ್ಟನ್ ಗತಕಾಲ ಸ್ಮರಿಸಿಕೊಂಡರು.

ರಾಹುಲ್ ದ್ರಾವಿಡ್‌ರಿಂದ ಅರ್ಥಪೂರ್ಣ ಉತ್ತರ

ರಾಹುಲ್ ದ್ರಾವಿಡ್‌ರಿಂದ ಅರ್ಥಪೂರ್ಣ ಉತ್ತರ

'ನನ್ನ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್, ಭಾರತೀಯ ಆಟಗಾರರು ವರ್ಷದುದ್ದಕ್ಕೂ ಆಡುತ್ತಿರುತ್ತಾರೆ. ಆದರೆ ಇಂಗ್ಲೆಂಡ್‌ ಆಟಗಾರರು ಅಲ್ಲಿನ ಹವಾಮಾನದ ಕಾರಣ, 6 ತಿಂಗಳ ಕಾಲ ಇಂಡೋರ್‌ನಲ್ಲಿ ಬೌಲಿಂಗ್ ಮೆಷೀನ್‌ ಜೊತೆ ಆಡುತ್ತಾರೆ. ಬಹುಶಃ ಇದು ಇಂಗ್ಲೆಂಡ್ ಆಟಗಾರರಿಗೆ ಒತ್ತಾಯಪೂರ್ವಕ ಆಟ ಅಥವಾ ಅತಿಯಾಗಿ ಕೋಚಿಂಗ್ ಮಾಡಿದ ರೀತಿಯ ಆಟಕ್ಕೆ ಕಾರಣವಾಗಿರಬಹುದು ಎಂದರು,' ಎಂದು ಅಥರ್ಟನ್ ದ್ರಾವಿಡ್ ಕೊಟ್ಟಿದ್ದ ಅರ್ಥಪೂರ್ಣ ಉತ್ತರವನ್ನು ನೆನಪಿಸಿಕೊಂಡರು.

Story first published: Sunday, June 28, 2020, 15:46 [IST]
Other articles published on Jun 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X