ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ಲಾರ್ಕ್ ಪ್ರಕಾರ ಕೊಹ್ಲಿಗಿಂತ ಗಂಗೂಲಿ-ಧೋನಿ ಭಿನ್ನ ನಾಯಕರು, ಆದರೆ..!

Michael Clarke compares captaincy of MS Dhoni, Sourav Ganguly and Virat Kohli

ಸಿಡ್ನಿ, ಜೂನ್ 3: ಟೀಮ್ ಇಂಡಿಯಾ ಈಗಿನ ನಾಯಕ ವಿರಾಟ್ ಕೊಹ್ಲಿಯನ್ನು ಮಾಜಿ ನಾಯಕರಾದ ಸೌರವ್ ಗಂಗೂಲಿ ಮತ್ತು ಎಂಎಸ್ ಧೋನಿಗೆ ತುಲನೆ ಮಾಡಿರುವ ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅವರು, ಕೊಹ್ಲಿಗಿಂತ ಗಂಗೂಲಿ, ಧೋನಿ ಭಿನ್ನ ನಾಯಕರು ಎಂದಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಭಾರತದ ಮಾಜಿ ನಾಯಕರಿಗೂ ಈಗಿನ ನಾಯಕನಿಗೂ ಹೋಲಿಸಿ ಮಾತನಾಡಿದ 38ರ ಹರೆಯದ ಕ್ಲಾರ್ಕ್, 'ನನಗನ್ನಿಸಿದಂತೆ ಕೊಹ್ಲಿಗೆ ಹೋಲಿಸಿದರೆ ಗಂಗೂಲಿ ಮತ್ತು ಎಂಎಸ್ ಧೋನಿ ವಿಶೇಷ ಗುಣದ, ವಿಭಿನ್ನ ಸಾಮರ್ಥ್ಯದ ನಾಯಕರು. ಆದರೆ ಕೊಹ್ಲಿ ಉತ್ತಮ ನಾಯಕರಾಗಿ ಬೆಳೆಯುತ್ತಿದ್ದಾರೆ' ಎಂದು ಅಭಿಪ್ರಾಯಿಸಿದ್ದಾರೆ.

ಹೀಗಂದಿದ್ದರೂ ಕ್ಲಾರ್ಕ್ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ ಅತ್ಯದ್ಭುತ ಬ್ಯಾಟ್ಸ್ಮನ್‌ ಅನ್ನೋದನ್ನು ಒತ್ತಿ ಹೇಳಿದ್ದಾರೆ. 'ಬ್ಯಾಟ್ಸ್ಮನ್‌ ಆಗಿ ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿಗೆ ಸರಿಸಾಟಿಯಿಲ್ಲ. ಸಚಿನ್ ತೆಂಡೂಲ್ಕರ್ ಮತ್ತು ಬ್ರಿಯಾನ್ ಲಾರಾ ಕ್ರಿಕೆಟ್ ನಿಯಮಗಳನ್ನು ನಾನು ನೋಡುತ್ತಲೇ ಬೆಳೆದವನು. ಆದರೆ ಏಕದಿನದಲ್ಲಿ ಕೊಹ್ಲಿಗೆ ಯಾರೂ ಹೋಲಿಕೆಯಾಗಲಾರರು' ಎಂದು ಕ್ಲಾರ್ಕ್ ಹೇಳಿದ್ದಾರೆ.

2007ರಲ್ಲಿ ನಿವೃತ್ತಿ ಹೊಂದಬೇಕಿದ್ದ ಸಚಿನ್‌ ಅವರನ್ನು ತಡೆದದ್ದು ಯಾರು ಗೊತ್ತಾ?2007ರಲ್ಲಿ ನಿವೃತ್ತಿ ಹೊಂದಬೇಕಿದ್ದ ಸಚಿನ್‌ ಅವರನ್ನು ತಡೆದದ್ದು ಯಾರು ಗೊತ್ತಾ?

ಶತಕೋಟಿ ಜನರ ನಿರೀಕ್ಷೆ ಕಾಯುವ ಒತ್ತಡವನ್ನಿಟ್ಟುಕೊಂಡೇ ಕೊಹ್ಲಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಾರೆ. ರನ್ ಗಳಿಸುತ್ತಲೇ ಇದ್ದಾರೆ. ಇದಕ್ಕಾಗಿಯೇ ಕೊಹ್ಲಿ ವಿಶೇಷವಾಗಿ ಕಾಣಿಸುತ್ತಾರೆ' ಎಂದು ಮೈಕಲ್ ತಿಳಿಸಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ನಾಸೆರ್ ಹುಸೇನ್ ಕೂಡ ಮುಂದೊಮ್ಮೆ ಕೊಹ್ಲಿ ಅವರು ಸಚಿನ್ ಎಲ್ಲಾ ದಾಖಲೆಗಳನ್ನು ಮುರಿಯುತ್ತಾರೆ' ಎಂದಿದ್ದಾರೆ.

Story first published: Monday, June 3, 2019, 18:28 [IST]
Other articles published on Jun 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X