ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತ ಸೆಹ್ವಾಗ್‌ನಂತೆ ವಿಧ್ವಂಸಕಾರಿ ಬ್ಯಾಟರ್: 22ರ ಹರೆಯದ ಭಾರತೀಯ ಆಟಗಾರನ ಬಗ್ಗೆ ಕ್ಲಾರ್ಕ್ ಪ್ರಶಂಸೆ

Michael Clarkes praises 22-year-old Indian cricketer said Hes a terrific player like Sehwag

ಕಳೆದ ಎರಡ್ಮೂರು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಯುವ ಆಟಗಾರರು ಅವಕಾಶವನ್ನು ಪಡೆಯುತ್ತಿದ್ದಾರೆ. ಕೆಲ ಆಟಗಾರರಂತೂ ಅದ್ಭುತ ಪ್ರದರ್ಶನ ನೀಡಿದ್ದರೂ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಹೀಗಾಗಿ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಲ್ಲಿ ರಿಷಭ್ ಪಂತ್ ತಂಡದಲ್ಲಿ ಖಾಯಂ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ ಮೊಹಮ್ಮದ್ ಸಿರಾಜ್ ಅದ್ಭುತ ಪ್ರದರ್ಶನ ನೀಡುತ್ತಿದ್ದು ಅನುಭವಿ ಇಶಾಂತ್ ಶರ್ಮಾ ಬದಲಿಗೆ ತಂಡದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನು ಯುವ ಆಟಗಾರರಾದ ಶುಬ್ಮನ್ ಗಿಲ್, ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ಪೃಥ್ವಿ ಶಾ ತಮ್ಮ ಅದ್ಭುತ ಬ್ಯಾಟಿಂಗ್ ಕೌಶಲ್ಯದಿಂದ ಸಾಕಷ್ಟು ಭರವಸೆಯನ್ನು ಮೂಡಿಸಿರುವ ಆಟಗಾರರಾಗಿ ಹೊರಹೊಮ್ಮಿದ್ದರೂ ತಂಡದಲ್ಲಿ ಸ್ಥಿರವಾಗಿ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲವಾಗಿದ್ದಾರೆ.

ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಟೀಮ್ ಇಂಡಿಯಾದ ಯುವ ಆಟಗಾರನ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಯುವ ಆಟಗಾರ ಭಾರತದ ಭವಿಷ್ಯದ ತಾರೆ ಎಂದಿರುವ ಅವರು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರಂತೆ ಈಗ ಕೂಡ ವಿಧ್ವಂಸಕಾರಿ ಬ್ಯಾಟರ್ ಎಂದು ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಭಾರತ v/s ವಿಂಡೀಸ್ ಏಕದಿನ ಸರಣಿ: ಅಹಮದಾಬಾದ್‌ಗೆ ಆಗಮಿಸಿದ ವೆಸ್ಟ್ ಇಂಡೀಸ್ ತಂಡಭಾರತ v/s ವಿಂಡೀಸ್ ಏಕದಿನ ಸರಣಿ: ಅಹಮದಾಬಾದ್‌ಗೆ ಆಗಮಿಸಿದ ವೆಸ್ಟ್ ಇಂಡೀಸ್ ತಂಡ

ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೀಗೆ ಯಾವ ಆಟಗಾರನ ಬಗ್ಗೆ ಮೆಚ್ಚುಕೆಯ ಮಾತುಗಳನ್ನಾಡಿದ್ದಾರೆ? ಮುಂದೆ ಓದಿ..

18ನೇ ವಯಸ್ಸಿನಲ್ಲಿ ವಿಂಡೀಸ್ ವಿರುದ್ಧ ಶತಕ ಸಿಡಿಸಿದ್ದ ದಾಂಡಿಗ

18ನೇ ವಯಸ್ಸಿನಲ್ಲಿ ವಿಂಡೀಸ್ ವಿರುದ್ಧ ಶತಕ ಸಿಡಿಸಿದ್ದ ದಾಂಡಿಗ

ಮೈಕಲ್ ಕ್ಲಾರ್ಕ್ ವಿರೇಂದ್ರ ಸೆಹ್ವಾಗ್ ರೀತಿಯ ಸ್ಪೋಟಕ ಆಟಗಾರ ಎಂದು ಮಾತನ್ನಾಡಿದ್ದು ಬೇರೆ ಯಾರ ಬಗ್ಗೆಯೂ ಅಲ್ಲ. ಭಾರತ ತಂಡದ ಯುವ ಆಟಗಾರ ಪೃಥ್ವಿ ಶಾ ಬಗ್ಗೆ. ಕಿರಿಯರ ಕ್ರಿಕೆಟ್‌ನಿಂದಲೇ ಸಾಕಷ್ಟಿ ಖ್ಯಾತಿಗಳಿಸಿದ್ದ ಶಾ 18ನೇ ವಯಸ್ಸಿನಲ್ಲಿ ಭಾರತ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದು ಮಾತ್ರವಲ್ಲದೆ ವೆಸ್ಟ್ ಇಂಡೀಸ್ ವಿರುದ್ಧಧ ಸರಣಿಯಲ್ಲಿ ಭರ್ಜರಿ ಶತಕವನ್ನು ಕೂಡ ಸಿಡಿಸಿ ಮಿಂಚುಹರಿಸಿದ್ದಾರೆ. ಆದರೆ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪೃಥ್ವಿ ಶಾ ಅನುಭವಿಸಿದ ಹಿನ್ನಡೆಯಿಂದಾಗಿ ಅವರು ಆಡುವ ಬಳಗದಿಂದ ಹೊರಬೀಳಬೇಕಾಯಿತು. ನಂತರ ಭಾರತ ತಂಡದಲ್ಲಿ ಮತ್ತೊಮ್ಮೆ ಅವಕಾಶ ಪಡೆಯಲು ಪೃಥ್ವಿ ಶಾಗೆ ಸಾಧ್ಯವಾಗಿಲ್ಲ.

ಪೃಥ್ವಿ ಶಾಗೆ ಮ್ಯಾನೇಜ್‌ಮೆಂಟ್ ಬೆಂಬಲವಾಗಿ ನಿಲ್ಲಬೇಕು

ಪೃಥ್ವಿ ಶಾಗೆ ಮ್ಯಾನೇಜ್‌ಮೆಂಟ್ ಬೆಂಬಲವಾಗಿ ನಿಲ್ಲಬೇಕು

ಇನ್ನು ಪೃಥ್ವಿ ಶಾ ಪ್ರತಿಭೆಯ ಬಗ್ಗೆ ಮಾತನಾಡಿದ ಮೈಕಲ್ ಕ್ಲಾರ್ಕ್ ವಿರೇಂದ್ರ ಸೆಹ್ವಾಗ್ ರೀತಿಯಲ್ಲಿ ಸ್ಪೋಟಕವಾದ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಪೃಥ್ವಿ ಶಾ ಅವರಲ್ಲಿದೆ. ಆತನ ಬೆನ್ನಿಗೆ ಭಾರತೀಯ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್ ನಿಲ್ಲುವ ಅಗತ್ಯವಿದೆ ಎಂದಿದ್ದಾರೆ. "ಆತ ವಿರೇಂದ್ರ ಸೆಹ್ವಾಗ್ ರೀತಿಯ ವಿಧ್ವಂಸಕಾರಿ ಆಟಗಾರ. ಸೆಹ್ವಾಗ್ ತಂಡವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬಲ್ಲಂತಾ ಚಾಣಾಕ್ಷ ಆಟಗಾರ. ಆ ರೀತಿಯ ಬ್ರ್ಯಾಂಡ್‌ನ ಕ್ರಿಕೆಟ್ ಎಂದರೆ ನನಗಿಷ್ಟ. ಸೆಹ್ವಾಗ್ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಎದುರಾಳಿಯನ್ನು ಕಂಗೆಡಿಸುತ್ತಿದ್ದರು. ಹಾಗಾಗಿ ಸೆಹ್ವಾಗ್ ನನ್ನ ನೆಚ್ಚಿನ ದಾಂಡಿಗ. ಹೀಗಾಗಿ ಪೃಥ್ವಿ ಶಾ ಅವರಂತಾ ಯುವ ಆಟಗಾರನ ಬೆನ್ನಿಗೆ ತಂಡ ನಿಲ್ಲಬೇಕು ಎಂದು ನಾನು ಬಯಸುತ್ತೇನೆ" ಎಂದು ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.

ಆತನ ಮೇಲೆ ಅತಿಯಾದ ಭರವಸೆ ನ್ಯಾಯವಲ್ಲ

ಆತನ ಮೇಲೆ ಅತಿಯಾದ ಭರವಸೆ ನ್ಯಾಯವಲ್ಲ

ಇನ್ನು ಈ ಸಂದರ್ಭದಲ್ಲಿ ಕ್ಲಾರ್ಕ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಶಾ ಅನುಭವಿಸಿದ ಹಿನ್ನಡೆಯ ಬಗ್ಗೆ ಮಾತನಾಡಿದರು. ಅಡಿಲೇಡ್‌ನಲ್ಲಿ ನಡೆದಿದ್ದ ಮೊತ್ತಲ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಪೃಥ್ವಿ ಶಾ 1 ಹಾಗೂ 2 ರನ್‌ಗಳಿಗೆ ವಿಕೆಟ್ ಕಳೆದುಕೊಂಡಿದ್ದರು, ಆದರೆ ಆ ಯುವ ಆಟಗಾರನ ಮೇಲೆ ಅತಿಯಾದ ನಿರೀಕ್ಷೆಯನ್ನಿಟ್ಟುಕೊಳ್ಳುವುದು ಸರಿಯಲ್ಲ ಎಂಬುದು ನನ್ನ ಭಾವನೆ" ಎಂದು ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.

ಪ್ರಾಣಿಗಳ ಮಾಂಸ ತಿಂದು ಸಿಂಹದಂತೆ ಬೇಟೆಯಾಡೋ ಪಾಕ್ ಬೌಲರ್ಸ್ ಹೆಚ್ಚು ಬಲಿಷ್ಟ | Oneindia Kannada
ಆತನಿಗೆ ಬೆಂಬಲ ಬೇಕು

ಆತನಿಗೆ ಬೆಂಬಲ ಬೇಕು

"ಫೃಥ್ವಿ ಶಾ ಅವರಂತಾ ಯುವ ಆಟಗಾರನ ಮೇಲೆ ಭಾರೀ ನಿರೀಕ್ಷೆಯನ್ನು ವ್ಯಕ್ತಪಡಿಸುವುದು ಬಹಳ ಕಷ್ಟ. ಆತನಿಗೆ ಇನ್ನೂ ಕೆಲ ಸಮಯದ ಅವಶ್ಯಕತೆಯಿದೆ. ಆತನಿಗೆ ಆಸ್ಟ್ರೇಲಿಯಾದಲ್ಲಿ ದೊರೆತ ಮೊದಲ ಅವಕಾಶ ಅದಾಗಿತ್ತು. ಬದಲಾವಣೆಗಳು ಹೇಗಿರುತ್ತದೆ ಎಂಬುದನ್ನು ಆತನಿಗೆ ಅವಕಾಶಗಳನ್ನು ನೀಡುವ ಮೂಲಕ ತಿಳಿಸಬೇಕಾಗಿತ್ತು. ಆದರೆ ದುರದೃಷ್ಟವಶಾತ್ ಆ ಪಂದ್ಯದ ಬಳಿಕ ಅವಕಾಶವನ್ನು ಆತ ಕಳೆದುಕೊಂಡ. ಆತ ಅದ್ಭುತ ರೀತಿಯಲ್ಲಿ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನವಿಲ್ಲ" ಎಂದಿದ್ದಾರೆ ಮೈಕಲ್ ಕ್ಲಾರ್ಕ್.

Story first published: Wednesday, February 2, 2022, 16:19 [IST]
Other articles published on Feb 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X