ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ಲಾರ್ಕ್ ಈ ಸಲಹೆಗಳಿಂದ ಆಸ್ಟ್ರೇಲಿಯಾ 2019ರ ವಿಶ್ವಕಪ್ ಗೆಲ್ಲುತ್ತಂತೆ!

Michael Clarke thinks if 6 changes are made Australia can still win World

ಸಿಡ್ನಿ, ಜೂ. 26: ಸತತ ಸೋಲಿನ ಬರೆಗೆ ಒಳಗಾಗಿರುವ ಆಸ್ಟ್ರೇಲಿಯಾ ತಂಡಕ್ಕೆ ಮಾಜಿ ಆಸ್ಟ್ರೇಲಿಯನ್ ಆಟಗಾರ ಮೈಕಲ್ ಕ್ಲಾರ್ಕ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ, ಈ ಸಲಹೆಗಳನ್ನು ಪರಿಗಣಿಸಿದರೆ ಆಸ್ಟ್ರೇಲಿಯಾ 2019ರ ವಿಶ್ವಕಪ್ ಗೆಲ್ಲಬಲ್ಲದು ಎಂದು ಕ್ಲಾರ್ಕ್ ಹೇಳಿದ್ದಾರೆ.

ಇಂಗ್ಲೆಂಡ್ ನಲ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ 0-5ರ ಹೀನಾಯ ಸೋಲು ಕಂಡಿತ್ತು. ಬಾಲ್ ಟ್ಯಾಂಪರಿಂಗ್ ಕಳಂಕ ಅಂಟಿಕೊಂಡ ಬೆನ್ನಲ್ಲೇ ಆಸ್ಟ್ರೇಲಿಯಾ ಬೇರೆ ಬೇರೆ ಕಾರಣಕ್ಕೆ ಕೆಳ ಕುಸಿಯುತ್ತಾ ಬಂದಿತ್ತು.

ವಿಶ್ವಕಪ್ 2018: ಪೋರ್ಚುಗೀಸರ ಗೆಲುವು ತಡೆದ ಪರ್ಷಿಯನ್ನರುವಿಶ್ವಕಪ್ 2018: ಪೋರ್ಚುಗೀಸರ ಗೆಲುವು ತಡೆದ ಪರ್ಷಿಯನ್ನರು

ಇಂಗ್ಲೆಂಡ್-ಆಸೀಸ್ ಏಕದಿನ ಸರಣಿಯಲ್ಲಿನ ಆಸ್ಟ್ರೇಲಿಯಾದ ಕಳಪೆ ಪ್ರದರ್ಶನ ವಿಶ್ವ ಏಕದಿನ ರ್ಯಾಂಕಿಂಗ್ ನಲ್ಲಿ ಆಸ್ಟ್ರೇಲಿಯಾ 6ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಿತ್ತು. ಸುಮಾರು 34 ವರ್ಷಗಳಿಂಗೆ ಹಿಂದೆ ಅಂದರೆ 1984ರಲ್ಲಿ ಆಸ್ಟ್ರೇಲಿಯಾ ಏಕದಿನದಲ್ಲಿ 6ನೇ ಸ್ಥಾನಕ್ಕೆ ಕುಸಿದಿತ್ತು. ಸದ್ಯ ಆಸ್ಟ್ರೇಲಿಯಾ ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನಕ್ಕಿಂತ ಹಿಂದಿದೆ.

ಈ ಎಲ್ಲಾ ಸಂಗತಿಗಳನ್ನು ಗಮನಿಸಿರುವ ಅನುಭವಿ ಆಟಗಾರ ಕ್ಲಾರ್ಕ್ ತಂಡಕ್ಕೆ ಹುಮ್ಮಸ್ಸು ತುಂಬುವ ಪ್ರಯತ್ನ ಮಾಡಿದ್ದಾರೆ. ಆಸ್ಟ್ರೇಲಿಯಾ ಗೆಲುವಿನ ಹಾದಿಗೆ ಮರಳಲು ಸಹಾಯಕವಾಗುವಂತೆ ಕೆಲವೊಂದು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಆಸ್ಟ್ರೇಲಿಯಾಕ್ಕೆ 2019ರ ವಿಶ್ವಕಪ್ ಗೆಲ್ಲುವ ಅವಕಾಶವಿದೆ ಎಂದಿದ್ದಾರೆ.

'ಏಕದಿನ ಕ್ರಿಕೆಟ್ ನಲ್ಲೀಗ ಧೋನಿಗಿಂತ ಜಾಸ್ ಬಟ್ಲರ್ ಉತ್ತಮ ಆಟಗಾರ''ಏಕದಿನ ಕ್ರಿಕೆಟ್ ನಲ್ಲೀಗ ಧೋನಿಗಿಂತ ಜಾಸ್ ಬಟ್ಲರ್ ಉತ್ತಮ ಆಟಗಾರ'

ಆಸ್ಟ್ರೇಲಿಯಾ ತಂಡ 6 ಉತ್ತಮ ಆಟಗಾರರನ್ನು ಮರಳಿ ಪಡೆದುಕೊಂಡರೆ ವಿಶ್ವಕಪ್ ಗೆಲ್ಲಲಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ. ಆಟದಲ್ಲಿ ಪ್ರಖರತೆ ಕಳೆದುಕೊಂಡಿರುವ ಕೆಲ ಆಟಗಾರರ ಜೊತೆ ನಿಷೇಧಕ್ಕೆ ಒಳಗಾಗಿರುವ ಸ್ಟಾರ್ ಆಟಗಾರರಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಕ್ಯಾಮರಾನ್ ಬ್ಯಾನ್‌ಕ್ರಾಫ್ಟ್ ಅವರು ತಂಡ ಮರಳಿ ಸೇರಿಕೊಂಡರೆ ಆಸೀಸ್ ಬಲಗೊಳ್ಳಲಿದೆ ಎಂಬರ್ಥದಲ್ಲಿ ಕ್ಲಾರ್ಕ್ ಈ ಮಾತನ್ನಾಡಿದರು.

'ನೀವು (ಆಸೀಸ್ ಆಟಗಾರರು) ಇದೇ ಆಟವನ್ನು ಮುಂದುವರೆಸಿದರೆ ಮತ್ತದೇ ಸೋಲಿನ ಫಲಿತಾಂಶ ಬರುತ್ತರುತ್ತದೆ. ಆಟದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಿ. ಈಗಿರುವ ಪರಿಸ್ಥಿತಿಯಲ್ಲಿ ನಾವು ಸ್ಪಿನ್ ಬೌಲಿಂಗ್ ಗೆ ಪರಿಣಾಮಕಾರಿಯಾಗಿ ಆಟವ ಕೌಶಲ್ಯ ಬೆಳೆಸಿಕೊಳ್ಳುವ ಅನಿವಾರ್ಯತೆಯಿದೆ' ಎಂದು ಕ್ಲಾರ್ಕ್ ಕಿವಿಮಾತು ಹೇಳಿದ್ದಾರೆ.

Story first published: Tuesday, June 26, 2018, 12:58 [IST]
Other articles published on Jun 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X