ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿಗೆ ಕಪ್‌ ಗೆಲ್ಲಿಸಿಕೊಡಬಲ್ಲ 3 ಅನ್‌ಕ್ಯಾಪ್ಡ್ ಭಾರತೀಯರ ಹೆಸರಿಸಿದ ಹೆಸನ್!

Mike Hesson names 3 uncapped Indians who can help RCB win IPL 2021

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಈ ತಂಡದಲ್ಲಿ ಅನೇಕ ಶ್ರೇಷ್ಠ ಆಟಗಾರರಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಹೀಗೆ ಯಾವುದೇ ತಂಡಗಳಲ್ಲಿ ಇರದ ಪ್ರತಿಭಾನ್ವಿತ ಯುವ ಆಟಗಾರರು ಆರ್‌ಸಿಬಿಯಲ್ಲಿದ್ದಾರೆ. ಜೊತೆಗೆ ಎಬಿ ಡಿ ವಿಲಿಯರ್ಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತ ಬಲಿಷ್ಠರೂ ಇದ್ದಾರೆ.

ಸಚಿನ್ ತೆಂಡೂಲ್ಕರ್ ಯುಗದ ಬ್ರಹ್ಮಾಂಡ ಸತ್ಯ ಬಾಯ್ಬಿಟ್ಟ ವೀರೇಂದ್ರ ಸೆಹ್ವಾಗ್!ಸಚಿನ್ ತೆಂಡೂಲ್ಕರ್ ಯುಗದ ಬ್ರಹ್ಮಾಂಡ ಸತ್ಯ ಬಾಯ್ಬಿಟ್ಟ ವೀರೇಂದ್ರ ಸೆಹ್ವಾಗ್!

ಡೇಲ್ ಸ್ಟೇನ್, ಆ್ಯರನ್ ಫಿಂಚ್, ಬ್ರೆಂಡನ್ ಮೆಕಲಮ್, ಕ್ರಿಸ್ ಮೋರಿಸ್, ಕ್ರಿಸ್ ಗೇಲ್ ಮೊದಲಾದವರೆಲ್ಲ ಆರ್‌ಸಿಬಿ ತಂಡಕ್ಕೆ ಆಡಿದ್ದ ಬಲಿಷ್ಠರು. ಆದರೂ ಆರ್‌ಸಿಬಿ ಈಗಲೂ ಕಪ್‌ ಗೆಲ್ಲದ ತಂಡಗಳ ಸಾಲಿನಲ್ಲಿದೆ. ಈ ಬಾರಿ ಅಂದರೆ 2021ರಲ್ಲಿ ಆರ್‌ಸಿಬಿಗೆ ಕಪ್ ಗೆಲ್ಲಿಸಿಕೊಡಬಲ್ಲ ಭಾರತೀಯ ಅನ್‌ಕ್ಯಾಪ್ಡ್ ಆಟಗಾರರನ್ನು ಆರ್‌ಸಿಬಿ ನಿರ್ದೇಶಕ ಮೈಕ್ ಹೆಸನ್ ಹೆಸರಿಸಿದ್ದಾರೆ.

1. ರಜತ್ ಪಾಟಿದಾರ್

1. ರಜತ್ ಪಾಟಿದಾರ್

ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನ ವೇಳೆ ಯುವ ಆಟಗಾರ ರಜತ್ ಪಾಟಿದಾರ್ ಅವರನ್ನು ಆರ್‌ಸಿಬಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. 27ರ ಹರೆಯದ, ಮಧ್ಯಪ್ರದೇಶದ ಇಂದೋರ್‌ನವರಾದ ರಜತ್ ಅವರ ಬಗ್ಗೆ ನೀವು ಇಂಟರ್‌ನೆಟ್‌ನಲ್ಲಿ ಹುಡುಕಾಡಿದರೆ ಒಂದಿಷ್ಟು ವಿಡಿಯೋಗಳು ಕಾಣಿಸುತ್ತವೆ. ಈ ವಿಡಿಯೋಗಳಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಜತ್ 29 ಎಸೆತಗಳಿಗೆ 68 ರನ್ ಬಾರಿಸಿದ್ದು, 51 ಎಸೆತಗಳಿಗೆ 96 ರನ್ ಬಾರಿಸಿದ್ದು ಮತ್ತು 41 ಎಸೆತಗಳಿಗೆ 50 ರನ್ ಬಾರಿಸಿರುವ ವಿಡಿಯೋಗಳು ಕಾಣಿಸುತ್ತವೆ. ರಜತ್ ಎಷ್ಟು ಪ್ರತಿಭಾನ್ವಿತ ಅನ್ನೋದಕ್ಕೆ ಈ ವಿಡಿಯೋಗಳು ಸಾಕ್ಷಿ. ಆರ್ಸಿಬಿ ಪರ ಈ ಬಾರಿ ರಜತ್ ಮಿನುಗುತ್ತಾರೆ ಎಂದು ಹೆಸನ್ ಹೇಳಿದ್ದಾರೆ.

2. ಮೊಹಮ್ಮದ್ ಅಝರುದ್ದೀನ್

2. ಮೊಹಮ್ಮದ್ ಅಝರುದ್ದೀನ್

ರಜತ್ ಪಾಟಿದಾರ್ ಅವರಂತೆ ಮೊಹಮ್ಮದ್ ಅಝರುದ್ದೀನ್ ಕೂಡ ಕ್ರಿಕೆಟ್ ನೋಡುವವರಿಗೆ ಚಿರಪರಿಚಿತ ಹೆಸರೇ. ಕೇರಳದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್‌ ಆಗಿರುವ ಅಝರುದ್ದೀನ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದವರು. ಸಯ್ಯದ್ ಮುಷ್ತಾಕ್ ಅಲಿ ದೇಸಿ ಕ್ರಿಕೆಟ್‌ನಲ್ಲಿ ಅಝರ್ ಅವರು ಮುಂಬೈ ವಿರುದ್ಧ 54 ಎಸೆತಗಳಲ್ಲಿ 137 ರನ್ ಚಚ್ಚಿದ್ದರು. ಇದರಲ್ಲಿ ಒಟ್ಟು 11 ಸಿಕ್ಸರ್‌ಗಳು ಸೇರಿತ್ತು. 'ತನ್ನ ಅತ್ಯುತ್ತಮ ಆಟ ನೀಡುವಾಗ ಅಝರ್ ಯಾವ ರೀತಿ ಆಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ,' ಎಂದು ಆರ್‌ಸಿಬಿಯಲ್ಲಿರುವ ಅಝರ್ ಬಗ್ಗೆ ಮೈಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

3. ಸುಯಶ್ ಪ್ರಭುದೇಸಾಯ್

3. ಸುಯಶ್ ಪ್ರಭುದೇಸಾಯ್

ದೇಸಿ ಕ್ರಿಕೆಟ್‌ನಲ್ಲಿ ಗೋವಾ ಪರವಾಗಿ ಆಡುವ ಸುಯಶ್ ಪ್ರಭುದೇಸಾಯ್ ಕೂಡ ಈ ಬಾರಿ ಆರ್‌ಸಿಬಿ ತಂಡದಲ್ಲಿದ್ದಾರೆ. 23ರ ಹರೆಯದ ಸುಯಶ್ ಕೂಡ ಪ್ರತಿಭಾನ್ವಿತ ಆಟಗಾರ. ಇದೇ ಕಾರಣಕ್ಕೆ ಆರ್‌ಸಿಬಿ ಈ ಬಾರಿ 4ನೇ ಗೋವಾ ಆಟಗಾರನಾಗಿ ಸುಯಶ್ ಅವರನ್ನು ಹರಾಜಿನ ವೇಳೆ ಆರಿಸಿತ್ತು. ಇದಕ್ಕೂ ಮುನ್ನ ಗೋವಾದ ಸೌರಭ್ ಬಂಡೆಕರ್, ಶದಾಬ್ ಜಕತಿ, ಸ್ಪಪ್ನಿಲ್ ಅಸ್ನೋದ್ಕರ್ ಕೂಡ ಆರ್‌ಸಿಬಿ ಪರ ಆಡಿದ್ದರು. ಸುಯಶ್ ಕೂಡ ದೇಸಿ ಕ್ರಿಕೆಟ್‌ನಲ್ಲಿ 22 ಎಸೆತಗಳಲ್ಲಿ ಅಜೇಯ 48 ರನ್ ಬಾರಿಸಿದ ದಾಖಲೆಯಿದೆ.

Story first published: Friday, April 2, 2021, 9:55 [IST]
Other articles published on Apr 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X