ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ಕ್ರಿಕೆಟ್‌ ತಂಡ ಬಲಿಷ್ಠಗೊಳಿಸಲು ಮಹತ್ವದ ನಿರ್ಧಾರ ಕೈಗೊಂಡ ಮಿಸ್ಬಾ!

ಪಾಪ ಪಾಕಿಸ್ತಾನ ತಂಡದ ಆಟಗಾರರು ಬಿರಿಯಾನಿ ತಿನ್ನುವಹಾಗಿಲ್ಲ. | Misbah-ul-Haq
Misbah-Ul-Haq bans biryani, netizens troll Pakistan cricket team

ಇಸ್ಲಮಾಬಾದ್, ಸೆಪ್ಟೆಂಬರ್ 17: ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ಇತ್ತೀಚೆಗಷ್ಟೇ ಮುಖ್ಯ ಕೋಚ್‌ ಆಗಿ ಆಯ್ಕೆಯಾಗಿರುವ ಮಿಸ್ಬಾ ಉಲ್ ಹಕ್, ಪಾಕಿಸ್ತಾನ ಆಟಗಾರರ ಆಹಾರ ಮೆನುವಿನಿಂದ ಬಿರಿಯಾನಿ ಸೇರಿದಂತೆ ಎಣ್ಣೆಯ ಆಹಾರ, ಸಿಹಿ ತಿನಿಸುಗಳನ್ನು ಕಿತ್ತು ಹಾಕಲು ನಿರ್ಧರಿಸಿದ್ದಾರೆ.

ಭಾರತ vs ದ.ಆಫ್ರಿಕಾ: 2ನೇ ಟಿ20 ಪಂದ್ಯದ ವೇಳೆಯ ಹವಾಮಾನ ವರದಿಭಾರತ vs ದ.ಆಫ್ರಿಕಾ: 2ನೇ ಟಿ20 ಪಂದ್ಯದ ವೇಳೆಯ ಹವಾಮಾನ ವರದಿ

ಪಾಕ್ ಕ್ರಿಕೆಟ್‌ ತಂಡ ವಿಶ್ವದಲ್ಲೆ ಅತ್ಯಂತ ಅನರ್ಹ ತಂಡವೆಂದು ಸಾಮಾಜಿಕ ತಾಣಗಳಲ್ಲಿ ಟೀಕಿಸಲ್ಪಟ್ಟಿತ್ತು. ಐಸಿಸಿ ವಿಶ್ವಕಪ್‌ 2019ರಲ್ಲಿನ ಪ್ರದರ್ಶನ ಕಂಡು ಪಾಕ್ ಕ್ರಿಕೆಟ್‌ ಅಭಿಮಾನಿಗಳು ದೇಸಿ ತಂಡವನ್ನು ಜರೆದಿದ್ದರು. ಸಾಲದ್ದಕ್ಕೆ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ನಾಯಕ ಸರ್ಫರಾಜ್ ಅಹ್ಮದ್ ಅವರನ್ನು 'ಡುಮ್ಮ ಮತ್ತು ಅನರ್ಹ' ಎಂದು ಕಾಲೆಳೆದಿದ್ದರು.

ಭಾರತ vs ದಕ್ಷಿಣ ಆಫ್ರಿಕಾ: 2ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ‍‍XIಭಾರತ vs ದಕ್ಷಿಣ ಆಫ್ರಿಕಾ: 2ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ‍‍XI

ಮುಖ್ಯವಾಗಿ ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಸೋತಿದ್ದು ಪಾಕ್ ಕ್ರಿಕೆಟ್‌ ಪ್ರಿಯರನ್ನು ರೊಚ್ಚಿಗೆಬ್ಬಿಸಿತ್ತು. ಕೊಹ್ಲಿ ಪಡೆ ಪಾಕ್ ವಿರುದ್ಧ 89 ರನ್ ಜಯ (ಡಿಎಲ್‌ಎಸ್ ನಿಯಮ) ಸಾಧಿಸಿದ ಬೆನ್ನಲ್ಲೇ ಪಾಕಿಸ್ತಾನ ತಂಡ ಅಭಿಮಾನಿಗಳ ಸಿಟ್ಟಿಗೆ ಗುರಿಯಾಗಿತ್ತು. ಇದೆಲ್ಲವನ್ನು ಮನಗಂಡಿರುವ ಮಿಸ್ಬಾ, ಆಹಾರ ಮೆನುವಿನಲ್ಲಿ ಬದಲಾವಣೆ ತರಲು ನಿರ್ಧರಿಸಿದ್ದಾರೆ.

ವಿಜಯ್ ಹಝಾರೆ ಟ್ರೋಫಿ: ಡೆಲ್ಲಿಗೆ ಆನೆ ಬಲ ತಂದ ಪಂತ್, ಧವನ್, ಸೈನಿ!ವಿಜಯ್ ಹಝಾರೆ ಟ್ರೋಫಿ: ಡೆಲ್ಲಿಗೆ ಆನೆ ಬಲ ತಂದ ಪಂತ್, ಧವನ್, ಸೈನಿ!

ಎಲ್ಲದಕ್ಕಿಂತ ಪ್ರಮುಖವಾಗಿ ಪಾಕಿಸ್ತಾನ ತಂಡದ ಫಿಟ್‌ನೆಸ್‌ನತ್ತ ಗಮನ ಹರಿಸಲು ಮಿಸ್ಬಾ ಗಂಭೀರವಾಗಿ ಯೋಚಿಸುತ್ತಿದ್ದಾರೆ. ಹೀಗಾಗಿಯೇ ಪಾಕ್ ಕ್ರಿಕೆಟಿಗರ ಫುಡ್‌ ಮೆನುವಿನಲ್ಲಿ ಮಹತ್ತರ ಬದಲಾವಣೆಯಾಗಿದೆ ಎಂದು ಹೇಳಲಾಗುತ್ತಿದೆ. ಅಂದ್ಹಾಗೆ ಮಿಸ್ಬಾ ಅವರ ಈ ನಿರ್ಧಾರವನ್ನೂ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಟೀಕಿಸಿದ್ದಾರೆ, ಟ್ರೋಲ್ ಮಾಡಿದ್ದಾರೆ.

Story first published: Tuesday, September 17, 2019, 21:06 [IST]
Other articles published on Sep 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X