ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ಮುಖ್ಯ ಕೋಚ್‌, ಚೀಫ್ ಸೆಲೆಕ್ಟರ್ ಆಗಿ ಮಿಸ್ಬಾ ಉಲ್ ಹಕ್ ಆಯ್ಕೆ

Misbah-ul-Haq named Pakistan head coach and chief selector

ಇಸ್ಲಮಾಬಾದ್, ಸೆಪ್ಟೆಂಬರ್ 4: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಮಿಸ್ಬಾ ಉಲ್ ಹಕ್‌, ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್ (ಪಿಸಿಬಿ) ಮುಖ್ಯ ಆಯ್ಕೆದಾರ ಮತ್ತು ಪಾಕ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಪಿಸಿಬಿ, ಪತ್ರಿಕಾ ಪ್ರಕಟಣೆ ಮೂಲಕ ಈ ವಿಚಾರವನ್ನು ಖಾತರಿಪಡಿಸಿದೆ.

ಇಂಪಾಗಿ ಕೊಳಲು ಬಾರಿಸಿದ ಕ್ರಿಕೆಟರ್ ಶಿಖರ್ ಧವನ್: ವೈರಲ್ ವಿಡಿಯೋಇಂಪಾಗಿ ಕೊಳಲು ಬಾರಿಸಿದ ಕ್ರಿಕೆಟರ್ ಶಿಖರ್ ಧವನ್: ವೈರಲ್ ವಿಡಿಯೋ

ಪಾಕಿಸ್ತಾನ ತಂಡದ ಮಾಜಿ ನಾಯಕ, ಟೀಮ್ ಮ್ಯಾನೇಜರ್ ಮತ್ತು ಕೋಚ್ ಆಗಿದ್ದ ಇಂತಿಖಾಬ್ ಆಲಂ, ಮಾಜಿ ಕ್ರಿಕೆಟಿಗ, ಹೆಚ್ಚು ಗೌತವಾನ್ವಿತ ಕಾಮೆಂಟೇಟರ್ ಬಾಝಿದ್ ಖಾನ್, ಬೋರ್ಡ್ ಆಡಳಿಯ ಸಮಿತಿಯ ಸದಸ್ಯ ಅಸಾದ್ ಅಲಿ ಖಾನ್, ಪಿಸಿಬಿ ಮುಖ್ಯ ಕಾರ್ಯ ನಿರ್ವಾಹಕ ವಾಸೀಮ್ ಖಾನ್ ಮತ್ತು ಪಿಸಿಬಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ನಿರ್ದೇಶಕ ಝಾಕಿರ್ ಖಾನ್ ಒಳಗೊಂಡ 5 ಜನರ ಸಮಿತಿ ಮಿಸ್ಬಾ ಅವರನ್ನು ಆರಿಸಿದೆ ಎಂದು ಪಿಸಿಬಿ ಪ್ರಕಟನೆ ಹೇಳಿದೆ.

ರೋಹಿತ್ ಶರ್ಮಾ ಜೆರ್ಸಿ ಧರಿಸಿ ರೋಹಿತ್ ಎದುರು ಕುಣಿದ ಜಮೈಕಾ ಫ್ಯಾನ್ಸ್ರೋಹಿತ್ ಶರ್ಮಾ ಜೆರ್ಸಿ ಧರಿಸಿ ರೋಹಿತ್ ಎದುರು ಕುಣಿದ ಜಮೈಕಾ ಫ್ಯಾನ್ಸ್

ಮಿಸ್ಬಾ ಅವರಿಗೆ ಎರಡು ಪ್ರಮುಖ ಜವಾಬ್ದಾರಿಗಳನ್ನು ಹೊರಿಸುವುದರ ಜೊತೆಗೆ ಪಿಸಿಸಿ, ಎರಡು ಬಾರಿ ಮುಖ್ಯ ಕೋಚ್ ಆಗಿದ್ದ, ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿರುವ ವಾಕರ್ ಯೂನಿಸ್ ಅವರನ್ನು 3 ಮೂರು ವರ್ಷಗಳ ಅವಧಿಗೆ ಬೌಲಿಂಗ್ ಕೋಚ್ ಆಗಿ ನೇಮಿಸಿದೆ.

'ಅವನ ಆಟ ನೋಡಲು ಖುಷಿ' ಅಂತ ತೆಂಡೂಲ್ಕರ್ ಹೇಳಿದ್ಯಾರಿಗೆ ಗೊತ್ತಾ?!'ಅವನ ಆಟ ನೋಡಲು ಖುಷಿ' ಅಂತ ತೆಂಡೂಲ್ಕರ್ ಹೇಳಿದ್ಯಾರಿಗೆ ಗೊತ್ತಾ?!

ಸೆಪ್ಟೆಂಬರ್ 27ರಿಂದ ಅಕ್ಟೋಬರ್ 9ರ ವರೆಗೆ ಪಾಕಿಸ್ಥಾನಕ್ಕೆ ಪ್ರವಾಸ ಕೈಗೊಳ್ಳುವ ಶ್ರೀಲಂಕಾ ವಿರುದ್ಧದ 3 ಏಕದಿನ ಪಂದ್ಯ, 3 ಟಿ20 ಪಂದ್ಯಗಳನ್ನು ನಿಭಾಯಿಸುವ ಹೊಣೆಗಾರಿಕೆ ಮಿಸ್ಬಾ-ವಾಕರ್ ಮೇಲಿದೆ. ಅದಾಗಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವಾಗಿ ಪಾಕಿಸ್ತಾನ ತಂಡ ಬ್ರಿಸ್ಬೇನ್ ವಿರುದ್ಧ ಆಸ್ಟ್ರೆಲಿಯಾದಲ್ಲಿ ನವೆಂಬರ್ 21ರಿಂದ ಮೊದಲ ಟೆಸ್ಟ್ ಪಂದ್ಯ ಆಡಲಿದೆ.

Story first published: Wednesday, September 4, 2019, 15:52 [IST]
Other articles published on Sep 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X