ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಿಚೆಲ್‌ ಮಾರ್ಷ್‌ನನ್ನೇ ಅಪಹಾಸ್ಯ ಮಾಡಿದ ಆಸ್ಟ್ರೇಲಿಯಾ ಪ್ರೇಕ್ಷಕರು!

Mitchell Marsh booed by Australian crowd at MCG

ಮೆಲ್ಬರ್ನ್, ಡಿಸೆಂಬರ್ 26: ಭಾರತದಲ್ಲಿ ಪಂದ್ಯ ನಡೆಯುತ್ತಿದೆ ಅಂದುಕೊಳ್ಳೋಣ. ನಮ್ಮವರು ಚೆನ್ನಾಗಿ ಆಡಲಿ ಆಡದಿರಲಿ ಒಟ್ಟಿನಲ್ಲಿ ಭಾರತೀಯ ಪ್ರೇಕ್ಷಕರು ಅಸ್ಪಷ್ಟವಾಗಿ ತಮ್ಮೊಳಗೇ ಗೊಣಗಿಕೊಂಡಾದ್ರೂ ಸರಿಯೆ, ಒಟ್ಟಿನಲ್ಲಿ ನಮ್ಮವರಿಗೇ ಬೆಂಬಲಿಸೋದು ಸಾಮಾನ್ಯ. ಆದರೆ ಆಸ್ಟ್ರೇಲಿಯಾದಲ್ಲಿ ಇದಕ್ಕೆ ವ್ಯತಿರಿಕ್ತ, ಅಪರೂಪದ ಸಂಗತಿ ನಡೆದಿದೆ.

ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ದಾಖಲೆ ಬರೆದ ಮಯಾಂಕ್ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ದಾಖಲೆ ಬರೆದ ಮಯಾಂಕ್

ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ಬುಧವಾರ (ಡಿಸೆಂಬರ್ 26) ಆರಂಭಗೊಂಡ ಆಸ್ಟ್ರೇಲಿಯಾ-ಭಾರತ ಮೂರನೇ ಟೆಸ್ಟ್ ವೇಳೆ ಆಸ್ಟ್ರೆಲಿಯಾ ಆಲ್‌ ರೌಂಡರ್ ಮಿಚೆಲ್ ಮಾರ್ಚ್ ಅವರು ಆಸ್ಟ್ರೇಲಿಯಾ ಅಭಿಮಾನಿಗಳಿಂದಲೇ ಅಪಹಾಸ್ಯಕ್ಕೀಡಾಗಿ ಅವಮಾನ ಅನುಭವಿಸಿದ್ದಾರೆ.

ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಆಸೀಸ್ ಆಡುವ 11 ಆಟಗಾರರ ತಂಡದಲ್ಲಿ ಮಾರ್ಷ್ ಹೆಸರನ್ನು ಸೇರಿಸಲಾಗಿತ್ತು. ಸ್ಥಳೀಯ ಆಟಗಾರ ಪೀಟರ್ ಹ್ಯಾಂಡ್ಸ್‌ಕಾಂಬ್ ಬದಲಿಗೆ ಮಿಚೆಲ್‌ಗೆ ಸ್ಥಾನ ನೀಡಲಾಗಿತ್ತು. ಸರಣಿಯಲ್ಲಿ ಆಟಗಾರನ ಬದಲಾವಣೆ ನಡೆದಿದ್ದು ಇದೊಂದೆ. ಉಳಿದಂತೆ ಹಿಂದಿನ ಪಂದ್ಯಗಳಲ್ಲಿ ಆಡಿದ್ದ ಅದೇ ತಂಡ ಹೆಸರಿಸಲ್ಪಟ್ಟಿತ್ತು.

ಕ್ರಿಕೆಟ್ ಆಸ್ಟ್ರೇಲಿಯಾದ ಮೇಲೆ ಸಿಡುಕಾಡಿದ ನಿಷೇಧಿತ ಆಟಗಾರ ಸ್ಮಿತ್!ಕ್ರಿಕೆಟ್ ಆಸ್ಟ್ರೇಲಿಯಾದ ಮೇಲೆ ಸಿಡುಕಾಡಿದ ನಿಷೇಧಿತ ಆಟಗಾರ ಸ್ಮಿತ್!

ಮೂರನೇ ಟೆಸ್ಟ್ ವೀಕ್ಷಿಸಲು ಬಂದಿದ್ದ ಕೆಲ ಆಸೀಸ್ ಅಭಿಮಾನಿಗಳಿಗೆ ತಂಡದಲ್ಲಿ ಹ್ಯಾಂಡ್ಸ್‌ಕಾಂಬ್ ಬದಲು ಮಾರ್ಷ್ ಸೇರಿಸಿದ್ದು ಸರಿ ಬಂದಂತೆ ಕಾಣಲಿಲ್ಲವೋ ಏನೋ. ಪಂದ್ಯದ ವೇಳೆ ಮಿಚೆಲ್‌ಗೆ ಮುಜುಗರ ಅನ್ನಿಸುವಂತೆ ಅಪಹಾಸ್ಯ ಮಾಡಿದ್ದಾರೆ. ವೀಕ್ಷಕರ ಈ ದುರ್ವರ್ತನೆಗೆ ಆಸೀಸ್ ಸಹ ಆಟಗಾರರಿಂದ ಅಸಮಾಧಾನ ವ್ಯಕ್ತವಾಗಿದ್ದೂ ಕಂಡುಬಂತು.

Story first published: Wednesday, December 26, 2018, 19:15 [IST]
Other articles published on Dec 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X