ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾರ್ಷ್ ಸ್ಫೋಟಕ ಅರ್ಧ ಶತಕ, ವೆಸ್ಟ್ ಇಂಡೀಸ್‌ ವಿರುದ್ಧ ಆಸ್ಟ್ರೇಲಿಯಾಕ್ಕೆ ರೋಚಕ ಜಯ

Mitchell Marsh half century, Australia beat West Indies in 4th T20I

ಸೇಂಟ್ ಲೂಸಿಯಾ: ಸೇಂಟ್ ಲೂಸಿಯಾದ ಡ್ಯಾರೆನ್ ಸಾಮಿ ಸ್ಟೇಡಿಯಂನಲ್ಲಿ ಬುಧವಾರ (ಜುಲೈ 14) ನಡೆದ ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್ ನಡುವಿನ ನಾಲ್ಕನೇ ಟಿ20ಐ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 4 ರನ್‌ಗಳ ರೋಚಕ ಜಯ ಗಳಿಸಿದೆ. ಮಿಚೆಲ್ ಮಾರ್ಷ್ ಅವರ ಸ್ಫೋಟಕ ಅರ್ಧ ಶತಕ ಮತ್ತು ಬೌಲಿಂಗ್‌ ಕೊಡುಗೆಯಿಂದ ಆಸ್ಟ್ರೇಲಿಯಾ ತಂಡ 5 ಪಂದ್ಯಗಳ ಸರಣಿಯಲ್ಲಿ 1 ಪಂದ್ಯ ಗೆದ್ದಿದೆ.

ಶೋಯೆಬ್ ಅಖ್ತರ್ ಪಾಲಿನ ಕಷ್ಟದ ಬ್ಯಾಟ್ಸ್‌ಮನ್‌ ಯಾರು ಗೊತ್ತಾ? ಹೆಸರು ಕೇಳಿದ್ರೆ ಅಚ್ಚರಿಗೊಳ್ತೀರಿ!ಶೋಯೆಬ್ ಅಖ್ತರ್ ಪಾಲಿನ ಕಷ್ಟದ ಬ್ಯಾಟ್ಸ್‌ಮನ್‌ ಯಾರು ಗೊತ್ತಾ? ಹೆಸರು ಕೇಳಿದ್ರೆ ಅಚ್ಚರಿಗೊಳ್ತೀರಿ!

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ, ನಾಯಕ ಆ್ಯರನ್ ಫಿಂಚ್ 53 (37), ಮಿಚೆಲ್ ಮಾರ್ಷ್ 75 (44), ಡೇನಿಯಲ್ ಕ್ರಿಸ್ಚಿಯನ್ 22, ಮಿಚೆಲ್ ಸ್ಟಾರ್ಕ್ 8, ಮೋಯ್ಸಸ್ ಹೆನ್ರಿಕ್ಸ್ 6 ರನ್‌ನೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 189 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ವೆಸ್ಟ್‌ ಇಂಡೀಸ್, ಲೆಂಡ್ಲ್ ಸಿಮನ್ಸ್ 72 (48), ಎವಿನ್ ಲೂಯಿಸ್ 31 (14), ನಾಯಕ ನಿಕೋಲಸ್ ಪೂರನ್ 16, ಆ್ಯಂಡ್ರೆ ರಸೆಲ್ ಅಜೇಯ 24, ಫ್ಯಾಬಿಯೆನ್ ಅಲೆನ್ 29 ರನ್‌ನೊಂದಿಗೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದು 185 ರನ್ ಬಾರಿಸಿ ಶರಣಾಯಿತು.

ಹಾಶಿಮ್ ಆಮ್ಲ, ವಿರಾಟ್ ಕೊಹ್ಲಿ ಹಿಂದಿಕ್ಕಿ ದಾಖಲೆ ಬರೆದ ಬಾಬರ್ ಅಝಾಮ್!ಹಾಶಿಮ್ ಆಮ್ಲ, ವಿರಾಟ್ ಕೊಹ್ಲಿ ಹಿಂದಿಕ್ಕಿ ದಾಖಲೆ ಬರೆದ ಬಾಬರ್ ಅಝಾಮ್!

ರಾಹುಲ್ ದ್ರಾವಿಡ್ ಅವರ ಬಗ್ಗೆ ಸತ್ಯ ಬಾಯಿ ಬಿಟ್ಟ ಶಿಖರ್ ಧವನ್ | Oneindia Kannada

ಆಸ್ಟ್ರೇಲಿಯಾ ಇನ್ನಿಂಗ್ಸ್‌ನಲ್ಲಿ ವೆಸ್ಟ್‌ ಇಂಡೀಸ್‌ನ ಹೇಡನ್ ವಾಲ್ಶ್ 3, ಫ್ಯಾಬಿಯೆನ್ ಅಲೆನ್ 1, ಆ್ಯಂಡ್ರೆ ರಸೆಲ್ 1, ಒಶಾನೆ ಥಾಮಸ್ 1 ವಿಕೆಟ್ ಪಡೆದರೆ, ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ ನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ 3, ಆ್ಯಡಂ ಜಂಪಾ 2, ರಿಲೇ ಮೆರಿಡಿತ್ 1 ವಿಕೆಟ್ ಪಡೆದರು. ಮಾರ್ಷ್ ಪಂದ್ಯಶ್ರೇಷ್ಠರೆನಿಸಿದರು.

Story first published: Thursday, July 15, 2021, 12:42 [IST]
Other articles published on Jul 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X