ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ 'ಎ' ವಿರುದ್ಧದ ಪಂದ್ಯಕ್ಕೆ ಮಿಚೆಲ್ ಮಾರ್ಷ್ ಕಮ್‌ಬ್ಯಾಕ್‌ ಸಾಧ್ಯತೆ

Mitchell Marsh hopeful of comeback in warm-up game against India A

ಸಿಡ್ನಿ: ಗಾಯಕ್ಕೀಡಾಗಿರುವ ಆಸ್ಟ್ರೇಲಿಯಾದ ಆಲ್ ರೌಂಡರ್ ಮಿಚೆಲ್ ಮಾರ್ಷ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ ತಿಂಗಳು ಭಾರತ 'ಎ' ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಮಾರ್ಷ್ ಆಸ್ಟ್ರೇಲಿಯಾ ತಂಡದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಶುಕ್ರವಾರ ಮಾರ್ಷ್ ಆಸೀಸ್ ತಂಡದಲ್ಲಿ ಕಾಣಿಸಿಕೊಳ್ಳುತ್ತಾರೋ ಇಲ್ಲವೋ ಅನ್ನೋದರ ಸ್ಪಷ್ಟ ಚಿತ್ರಣ ಲಭಿಸಲಿದೆ.

ಭಾರತ vs ಆಸ್ಟ್ರೇಲಿಯಾ: ಕನ್ನಡ ಅವಗಣನೆಗೆ ದೊಡ್ಡ ಗಣೇಶ್ ಬೇಸರಭಾರತ vs ಆಸ್ಟ್ರೇಲಿಯಾ: ಕನ್ನಡ ಅವಗಣನೆಗೆ ದೊಡ್ಡ ಗಣೇಶ್ ಬೇಸರ

ಕಳೆದ ಸೆಪ್ಟೆಂಬರ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದ 29ರ ಹರೆಯದ ಮಿಚೆಲ್ ಮಾರ್ಷ್ ಆರಂಭಿಕ ಪಂದ್ಯದಲ್ಲಿ ಕಾಲಿನ ಮಣಿಕಟ್ಟಿನ ಗಾಯಕ್ಕೀಡಾಗಿ ಟೂರ್ನಿಯಿಂದ ಹೊರ ಬಿದ್ದಿದ್ದರು. ಆದರೆ ಮಾರ್ಷ್ ಅವರನ್ನು ಆಸ್ಟ್ರೇಲಿಯಾ 'ಎ' ತಂಡದಲ್ಲಿ ಹೆಸರಿಸಲಾಗಿದೆ.

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಗೂ ಮುನ್ನ ಇತ್ತಂಡಗಳು ಎರಡು ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಲಿವೆ. ಭಾರತ 'ಎ' ಮತ್ತು ಆಸ್ಟ್ರೇಲಿಯಾ 'ಎ' ನಡುವಿನ ಪಂದ್ಯ ಡಿಸೆಂಬರ್ 6-8 ಮತ್ತು ಡಿಸೆಂಬರ್ 11-13ರಂದು ಅಭ್ಯಾಸ ಪಂದ್ಯಗಳು ನಡೆಯಲಿವೆ.

ಮಾರ್ಕಸ್ ಸ್ಟೋಯ್ನಿಸ್ ಹಿಂದಿಗಿಂತ 5 ಪಟ್ಟು ಉತ್ತಮಗೊಂಡಿದ್ದಾರೆ: ಪಾಂಟಿಂಗ್ಮಾರ್ಕಸ್ ಸ್ಟೋಯ್ನಿಸ್ ಹಿಂದಿಗಿಂತ 5 ಪಟ್ಟು ಉತ್ತಮಗೊಂಡಿದ್ದಾರೆ: ಪಾಂಟಿಂಗ್

'ನಾನು ಆಸ್ಟ್ರೇಲಿಯಾ ತಂಡಕ್ಕೆ ಕಮ್‌ಬ್ಯಾಕ್ ಮಾಡುತ್ತೇನೆ ಎಂದು ಭಾವಿಸಿದ್ದೇನೆ. ನಾನು ಆಸ್ಟ್ರೇಲಿಯಾ ತಂಡದಲ್ಲಿ ಇರುತ್ತೀನಾ ಇಲ್ಲವಾ ಅನ್ನೋದು ಈ ವಾರ ಗೊತ್ತಾಗಲಿದೆ. ಬಹುಶಃ ಶುಕ್ರವಾರ ಇದು ಗೊತ್ತಾಗಲಿದೆ,' ಎಂದು 'ದ ವೆಸ್ಟ್ ಆಸ್ಟ್ರೇಲಿಯಾ' ಜೊತೆ ಹೇಳಿಕೊಂಡಿದ್ದಾರೆ.

Story first published: Monday, November 23, 2020, 18:39 [IST]
Other articles published on Nov 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X