ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್‌ಗೆ ಹೊಸ ನಿಕ್‌ ನೇಮ್‌!

Mitchell Starc breaks ODI record, gets new nickname

ಲಂಡನ್‌, ಜೂನ್‌ 07: ಐಸಿಸಿ ಏಕದಿನ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಸೀಸ್‌ನ ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌ಗೆ ಹೊಸ ನಿಕ್‌ ನೇಮ್‌ ಸಿಕ್ಕಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಟ್ರೆಂಟ್‌ ಬ್ರಿಡ್ಜ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ 40 ರನ್‌ ಗಳಿಸುವ ಹೊತ್ತಿಗಾಗಲೇ 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಸ್ಟೀವನ್‌ ಸ್ಮಿತ್‌ (73) ಹಾಗೂ 8ನೇ ಕ್ರಮಾಂಕದ ಬ್ಯಾಟ್ಸ್‌ಮನ್‌ ನೇಥನ್‌ ಕೌಲ್ಟರ್‌ ನೈಲ್‌ (60 ಎಸೆತಗಳಲ್ಲಿ 92 ರನ್‌) ಅವರ ವೀರಾವೇಶದ ಬ್ಯಾಟಿಂಗ್‌ ನೆರವಿನಿಂದ 288 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತು.

<span class=ಎಬಿ ಡಿ'ವಿಲಿಯರ್ಸ್‌ ಸೇವೆ ತಿರಸ್ಕರಿಸಿದ್ದಕ್ಕೆ ಕಾರಣಕೊಟ್ಟ ದಕ್ಷಿಣ ಆಫ್ರಿಕಾ!" title="ಎಬಿ ಡಿ'ವಿಲಿಯರ್ಸ್‌ ಸೇವೆ ತಿರಸ್ಕರಿಸಿದ್ದಕ್ಕೆ ಕಾರಣಕೊಟ್ಟ ದಕ್ಷಿಣ ಆಫ್ರಿಕಾ!" />ಎಬಿ ಡಿ'ವಿಲಿಯರ್ಸ್‌ ಸೇವೆ ತಿರಸ್ಕರಿಸಿದ್ದಕ್ಕೆ ಕಾರಣಕೊಟ್ಟ ದಕ್ಷಿಣ ಆಫ್ರಿಕಾ!

ಬಳಿಕ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ ಒಂದು ಹಂತದಲ್ಲಿ ಜಯ ದಕ್ಕಿಸಿಕೊಳ್ಳುವ ಸೂಚನೆ ನೀಡಿತ್ತಾದರೂ, ಎಡಗೈ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್‌ 44ಕ್ಕೆ 5 ವಿಕೆಟ್‌ಗಳನ್ನು ಉರುಳಿಸಿ ತಂಡಕ್ಕೆ 15 ರನ್‌ಗಳ ರೋಚಕ ಜಯ ತಂದುಕೊಟ್ಟರು.

ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಆಸೀಸ್‌ನ ನೇಥನ್‌ ಕೌಲ್ಟರ್‌ ನೈಲ್‌!ವಿಶ್ವಕಪ್‌ನಲ್ಲಿ ವಿಶೇಷ ದಾಖಲೆ ಬರೆದ ಆಸೀಸ್‌ನ ನೇಥನ್‌ ಕೌಲ್ಟರ್‌ ನೈಲ್‌!

ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಆಡಿದ 77 ಪಂದ್ಯಗಳಲ್ಲಿ 6ನೇ ಬಾರಿ ಪಂದ್ಯವೊಂದರಲ್ಲಿ 5ಕ್ಕಿಂತಲೂ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದ 29 ವರ್ಷದ ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌, ಇದೇ ವೇಳೆ 50 ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 150 ವಿಕೆಟ್‌ಗಳ ಗಡಿ ದಾಟಿದ ಬೌಲರ್‌ ಎಂಬ ವಿಶ್ವ ದಾಖಲೆಯನ್ನೂ ಬರೆದರು.

ಇದಕ್ಕೂ ಮುನ್ನ ಪಾಕಿಸ್ತಾನದ ಸ್ಪಿನ್‌ ಬೌಲರ್‌ ಸಕ್ಲೇನ್‌ ಮುಷ್ತಾಕ್‌ 78 ಪಂದ್ಯಗಳಲ್ಲಿ ಈ ಸಾಧನೆ ಮೆರೆದಿದ್ದರು. ಅವರ ಈ ಬೆಂಕಿ ಪ್ರದರ್ಶನದ ಬಳಿಕ ತಂಡದ ಸಹ ಆಟಗಾರ ಆಫ್‌ಸ್ಪಿನ್ನರ್‌ ನೇಥನ್‌ ಲಯಾನ್‌, ಸ್ಟಾರ್ಕ್‌ಗೆ ಹೊಸ 'ನಿಕ್‌ ನೇಮ್‌' ನೀಡಿದ್ದಾರೆ. ನೇಥನ್‌ ಲಯಾನ್‌ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ಸ್ಟಾರ್ಕ್‌ ಅವರನ್ನು 'ಫ್ಲೋಟ್‌' (FLOAT) ಎಂದು ಕರೆದಿದ್ದಾರೆ. ಇದರರ್ಥ 'ಫಾಸ್ಟೆಸ್ಟ್‌ ಲೆಫ್ಟ್‌ ಆರ್ಮರ್‌ಆಫ್‌ ಆಲ್‌ ಟೈಮ್‌'. ಅಂದರೆ ಸಾರ್ವಕಾಲಿಕ ಅತ್ಯಂತ ವೇಗದ ಎಡಗೈ ಬೌಲರ್‌ ಎಂದು.

ವಿಶ್ವಕಪ್‌: ಸೌರವ್‌ ಗಂಗೂಲಿ ದಾಖಲೆ ಮುರಿದ 'ಹಿಟ್‌ಮ್ಯಾನ್‌' ರೋಹಿತ್‌!ವಿಶ್ವಕಪ್‌: ಸೌರವ್‌ ಗಂಗೂಲಿ ದಾಖಲೆ ಮುರಿದ 'ಹಿಟ್‌ಮ್ಯಾನ್‌' ರೋಹಿತ್‌!

ಹಾಲಿ ಚಾಂಪಿಯನ್ಸ್‌ ಆಸ್ಟ್ರೇಲಿಯಾ ತಂಡ ಜೂನ್‌ 9ರಂದು ದಿ ಓವಲ್‌ನಲ್ಲಿ ತನ್ನ ಮುಂದಿನ ಪಂದ್ಯವನ್ನು ಆಡಲಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿರುವ ಬಲಿಷ್ಠ ಟೀಮ್‌ ಇಂಡಿಯಾ ವಿರುದ್ಧ ಪೈಪೋಟಿ ನಡೆಸಲಿದೆ. ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 6 ವಿಕೆಟ್‌ಗಳಿಂದ ಬಗ್ಗುಬಡಿದು ಆತ್ಮವಿಶ್ವಾಸದ ಅಲೆಯಲ್ಲಿದೆ.

ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 150 ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ವಿವರ ಇಲ್ಲಿದೆ.

ಮಿಚೆಲ್‌ ಸ್ಟಾರ್ಕ್‌ (ಆಸ್ಟ್ರೇಲಿಯಾ): 77 ಪಂದ್ಯಗಳಲ್ಲಿ 150 ವಿಕೆಟ್‌

ಸ್ಟಾರ್ಕ್‌ ಒಡಿಐ ಬೌಲಿಂಗ್‌ ಸಾಧನೆ
77 ಪಂದ್ಯ
151 ವಿಕೆಟ್‌
6/28 ಶ್ರೇಷ್ಠ ಬೌಲಿಂಗ್‌
21.09 ಸರಾಸರಿ
4.94 ಎಕಾನಮಿ

ಸಕ್ಲೇನ್‌ ಮುಷ್ತಾಕ್‌ (ಪಾಕಿಸ್ತಾನ): 78 ಪಂದ್ಯಗಳಲ್ಲಿ 150 ವಿಕೆಟ್‌

ಸಕ್ಲೇನ್‌ ಮುಷ್ತಾಕ್‌ (ಪಾಕಿಸ್ತಾನ): 78 ಪಂದ್ಯಗಳಲ್ಲಿ 150 ವಿಕೆಟ್‌

ಮುಷ್ತಾಕ್‌ ಒಡಿಐ ಬೌಲಿಂಗ್‌ ಸಾಧನೆ
169
ಪಂದ್ಯ
288 ವಿಕೆಟ್‌
5/20 ಶ್ರೇಷ್ಠ ಬೌಲಿಂಗ್‌
21.78 ಸರಾಸರಿ
4.29 ಎಕಾನಮಿ

ಟ್ರೆಂಟ್‌ ಬೌಲ್ಟ್‌ (ನ್ಯೂಜಿಲೆಂಡ್‌): 81 ಪಣದ್ಯಗಳಲ್ಲಿ 150 ವಿಕೆಟ್

ಟ್ರೆಂಟ್‌ ಬೌಲ್ಟ್‌ (ನ್ಯೂಜಿಲೆಂಡ್‌): 81 ಪಣದ್ಯಗಳಲ್ಲಿ 150 ವಿಕೆಟ್

ಬೌಲ್ಟ್‌ ಒಡಿಐ ಬೌಲಿಂಗ್‌ ಸಾಧನೆ
81 ಪಂದ್ಯ
150 ವಿಕೆಟ್‌
7/34 ಶ್ರೇಷ್ಠ ಬೌಲಿಂಗ್‌
24.80
ಸರಾಸರಿ
5.06 ಎಕಾನಮಿ

ಬ್ರೆಟ್‌ ಲೀ (ಆಸ್ಟ್ರೇಲಿಯಾ): 82 ಪಂದ್ಯಗಳಲ್ಲಿ 150 ವಿಕೆಟ್‌

ಬ್ರೆಟ್‌ ಲೀ (ಆಸ್ಟ್ರೇಲಿಯಾ): 82 ಪಂದ್ಯಗಳಲ್ಲಿ 150 ವಿಕೆಟ್‌

ಲೀ ಒಡಿಐ ಬೌಲಿಂಗ್‌ ಸಾಧನೆ
221 ಪಂದ್ಯ
380 ವಿಕೆಟ್‌
5/22 ಶ್ರೇಷ್ಠ ಬೌಲಿಂಗ್‌
23.36 ಸರಾಸರಿ
4.76 ಎಕಾನಮಿ

 ಅಜಂತಾ ಮೆಂಡಿಸ್‌ (ಶ್ರೀಲಂಕಾ): 84 ಪಂದ್ಯಗಳಲ್ಲಿ 150 ವಿಕೆಟ್‌

ಅಜಂತಾ ಮೆಂಡಿಸ್‌ (ಶ್ರೀಲಂಕಾ): 84 ಪಂದ್ಯಗಳಲ್ಲಿ 150 ವಿಕೆಟ್‌

ಮೆಂಡಿಸ್‌ ಒಡಿಐ ಬೌಲಿಂಗ್‌ ಸಾಧನೆ
87 ಪಂದ್ಯ
152 ವಿಕೆಟ್‌
6/13 ಶ್ರೇಷ್ಠ ಬೌಲಿಂಗ್‌
21.86 ಸರಾಸರಿ
4.80 ಎಕಾನಮಿ

Story first published: Friday, June 7, 2019, 17:00 [IST]
Other articles published on Jun 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X