ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಭವಿಷ್ಯದಲ್ಲಿ ಬೋರಿಂಗ್ ಎನಿಸಬಹುದು: ಆತಂಕ ವ್ಯಕ್ತಪಡಿಸಿದ ಮಿಚೆಲ್ ಸ್ಟಾರ್ಕ್

Mitchell Starc Comments On Saliva Ban

ಕೊರೊನಾ ವೈರಸ್ ಇಡೀ ವಿಶ್ವವನ್ನೇ ಬದಲಾಯಿಸಿಬಿಟ್ಟಿದೆ. ಕ್ರೀಡಾ ಲೋಕದಲ್ಲೂ ಸಾಕಷ್ಟು ಬದಲಾವಣೆಗೆ ಕೊರೊನಾ ವೈರಸ್ ಕಾರಣವಾಗಿದೆ. ಹೀಗಾಗಿ ಭವಿಷ್ಯದಲ್ಲಿ ಕ್ರಿಕೆಟ್ ಬೋರಿಂಗ್ ಎನಿಸಬಹುದು ಎಂಬ ಆತಂಕವನ್ನು ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ವ್ಯಕ್ತಪಡಿಸಿದ್ದಾರೆ.

ಮಿಚೆಲ್ ಸ್ಟಾರ್ಕ್ ಈ ರೀತಿ ಪ್ರತಿಕ್ರಿಯೆ ನೀಡಲು ಕಾರಣ ಕ್ರಿಕೆಟ್‌ನಲ್ಲಿ ಎಂಜಲು ಬಳಕೆಯ ನಿಷೇಧ. ಐಸಿಸಿಗೆ ಈ ಬಗ್ಗೆ ಶಿಫಾರಸ್ಸು ಮಾಡಿಲಾಗಿದ್ದು ಈ ಬಗ್ಗೆ ಐಸಿಸಿ ತೀರ್ಮಾನ ತೆಗೆದುಕೊಳ್ಳಲಿದೆ. ಆದರೆ ಇದು ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನವನ್ನು ತೆಗೆದುಹಾಕುತ್ತದೆ ಎಂದು ಎಚ್ಚರಿಸಿದ್ದಾರೆ ಆಸ್ಟ್ರೇಲಿಯಾದ ವೇಗಿ ಸ್ಟಾರ್ಕ್.

ಭಾರತದಿಂದ ಸಹಾಯ ಪಡೆದು ತಿರುಗಿ ಬಿದ್ದ ಅಫ್ರಿದಿ ವಿರುದ್ಧ ಕೆಂಡ ಕಾರಿದ ಪಾಕ್ ಮಾಜಿ ಸ್ಪಿನ್ನರ್ಭಾರತದಿಂದ ಸಹಾಯ ಪಡೆದು ತಿರುಗಿ ಬಿದ್ದ ಅಫ್ರಿದಿ ವಿರುದ್ಧ ಕೆಂಡ ಕಾರಿದ ಪಾಕ್ ಮಾಜಿ ಸ್ಪಿನ್ನರ್

ಆನ್‌ಲೈನ್‌ ಪ್ರೆಸ್ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮಿಚೆಲ್ ಸ್ಟಾರ್ಕ್ ಎಂಜಲಿನ ಬಳಕೆ ನಿಷೇಧದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ನಾವು ಅದನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅಥವಾ ಅದರ ಬದಲಾಗಿ ಬೇರೆ ಯಾವುದಾದರೂ ಬಳಕೆಯ ಅಗತ್ಯವಿದೆ ಎಂದು ಬೆಂಡನ್ನು ಸ್ವಿಂಗ್ ಮಾಡಲು ಕೃತಕ ವಸ್ತುಗಳಿಗೆ ಅನುವು ಮಾಡಿಕೊಡಲು ಬೇಡಿಕೆಯನ್ನಿಟ್ಟಿದ್ದಾರೆ.

ಇದಲ್ಲವಾದರೆ ಅಭಿಮಾನಿಗಳು ಕ್ರಿಕೆಟನ್ನು ನೀಡಲು ಮುಂದೆ ಬರುವುದಿಲ್ಲ, ಮಕ್ಕಳು ಬೌಲರ್‌ಗಳು ಆಗುವ ಕನಸನ್ನು ಬಿಟ್ಟುಬಿಡುತ್ತಾರೆ ಎಂದು ಮಿಚೆಲ್ ಸ್ಟಾರ್ಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಕಳೆದ ಕೆಲ ವರ್ಷಗಳಲ್ಲಿ ಅನೇಕ ಪ್ಲ್ಯಾಟ್ ಪಿಚ್‌ಗಳನ್ನು ಹೊಂದಿದೆ. ಇಲ್ಲಿ ಚೆಂಡು ನೇರವಾಗಿ ಹೋದರೆ ಖಂಡಿತಾ ನೋಡಲು ಬೋರಿಂಗ್ ಎನಿಸುತ್ತದೆ ಎಂದಿದ್ದಾರೆ.

ODI ಕ್ರಿಕೆಟ್‌ನಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು: ಘಟಾನುಘಟಿಗಳದ್ದೇ ಸಿಂಹಪಾಲುODI ಕ್ರಿಕೆಟ್‌ನಲ್ಲಿ ಸೊನ್ನೆಗೆ ವಿಕೆಟ್ ಒಪ್ಪಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು: ಘಟಾನುಘಟಿಗಳದ್ದೇ ಸಿಂಹಪಾಲು

ಭಾರತ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಕಮಿಟಿ ಇತ್ತೀಚೆಗಷ್ಟೇ ಕೊರೊನಾ ವೈರಸ್ ಹರಡುವ ಭೀತಿಯಿಂದ ಎಂಚಲು ಬಳಕೆ ನಿಷೇಧಿಸಲು ಪ್ರಸ್ತಾಪವನ್ನು ಇಟ್ಟಿತ್ತು. ಇದಕ್ಕೆ ಸ್ಟಾರ್ಕ್ ಚೆಂಡನ್ನು ಹೊಳಪು ಮಾಡಲು ಬೇರೆ ದಾರಿಗೆ ಅನುಮತಿಸಬೇಕೆಂದು ಬೇಡಿಕೆಯನ್ನಿಟ್ಟಿದ್ದಾರೆ.

Story first published: Tuesday, May 26, 2020, 18:55 [IST]
Other articles published on May 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X