ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಪಂದ್ಯ ಬೇಕೆಂದೇ ಕೈಬಿಟ್ಟ ಮಿಚೆಲ್ ಸ್ಟಾರ್ಕ್: ಕಾರಣ ಏನ್ ಗೊತ್ತಾ?!

Mitchell Starc to miss 3rd ODI against South Africa

ಪೊಚೆಫ್‌ಸ್ಟ್ರೂಮ್, ಮಾರ್ಚ್ 6: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಸರಣಿಯನ್ನಾಡುತ್ತಿದೆ. ಇತ್ತಂಡಗಳ ಮಧ್ಯೆ ಸದ್ಯ ಏಕದಿನ ಸರಣಿ ನಡೆಯುತ್ತಿದೆ. ಸರಣಿಯ ಕೊನೇಯ ಪಂದ್ಯ ಪೊಚೆಫ್‌ಸ್ಟ್ರೂಮ್ ನ ಸೆನ್ವೆಸ್ ಪಾರ್ಕ್ ನಲ್ಲಿ ಮಾರ್ಚ್ 7ರಂದು ನಡೆಯಲಿದೆ. ಆದರೆ ಈ ಪಂದ್ಯದಿಂದ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಬೇಕೆಂದೇ ಹೊರಗುಳಿದಿದ್ದಾರೆ.

ಕ್ರಿಸ್‌ ಗೇಲ್ ಆಡಲಿದ್ದ ಟ್ವೆಂಟಿ 20 ಟೂರ್ನಿಯನ್ನೇ ರದ್ದುಗೊಳಿಸಿದ ನೇಪಾಳಕ್ರಿಸ್‌ ಗೇಲ್ ಆಡಲಿದ್ದ ಟ್ವೆಂಟಿ 20 ಟೂರ್ನಿಯನ್ನೇ ರದ್ದುಗೊಳಿಸಿದ ನೇಪಾಳ

ಆಸ್ಟ್ರೇಲಿಯಾದ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20ಐ ಸರಣಿಯನ್ನು ಆಸ್ಟ್ರೇಲಿಯಾ 2-1ರಿಂದ ಗೆದ್ದುಕೊಂಡಿತ್ತು. ಮೂರು ಪಂದ್ಯಗಳ ಏಕದಿನ ಸರಣಿ 2-0ರಿಂದ ದಕ್ಷಿಣ ಆಫ್ರಿಕಾ ವಶವಾಗಿತ್ತು. ಕಡೇಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲ್ಲದಿದ್ದರೆ ವೈಟ್‌ವಾಷ್ ಮುಖಭಂಗ ಅನುಭವಿಸಿದಂತಾಗುತ್ತದೆ.

20 ಸಿಕ್ಸರ್ 158* ರನ್: ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ದಾಖಲೆಯ ಶತಕ20 ಸಿಕ್ಸರ್ 158* ರನ್: ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ದಾಖಲೆಯ ಶತಕ

ದಕ್ಷಿಣ ಆಫ್ರಿಕಾದಿಂದ ಕ್ಲೀನ್ ಸ್ವೀಪ್ ತಪ್ಪಿಸಿಕೊಳ್ಳುವುದಕ್ಕಾಗಿ ಗೆಲ್ಲಬೇಕಿದ್ದ ಪಂದ್ಯದಿಂದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಬೇಕೆಂದೇ ತಪ್ಪಿಸಿಕೊಂಡಿದ್ದಾರೆ. ಇದಕ್ಕೆ ಸ್ಟಾರ್ಕ್ ನೀಡಿದ ಕಾರಣ ಕುತೂಹಲಕಾರಿಯಾಗಿದೆ.

ಪಂದ್ಯ ನೋಡೋಕೆ ಪಂದ್ಯವನ್ನೇ ಕೈಬಿಟ್ಟ!

ಪಂದ್ಯ ನೋಡೋಕೆ ಪಂದ್ಯವನ್ನೇ ಕೈಬಿಟ್ಟ!

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನದಿಂದ ಸ್ಟಾರ್ಕ್ ಹೊರಗುಳಿಯಲು ಕಾರಣ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯ. ಭಾರತದ ಮಹಿಳಾ ತಂಡ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡ ಆಡಲಿರುವ ಟಿ20 ವಿಶ್ವಕಪ್ ಫೈನಲ್ ನೋಡುವುದಕ್ಕೋಸ್ಕರ ಸ್ಟಾರ್ಕ್ ದಕ್ಷಿಣ ಆಫ್ರಿಕಾ ಪಂದ್ಯವನ್ನು ತಪ್ಪಿಸಿಕೊಳ್ಳುತ್ತಿದ್ದಾರೆ.

ಆ ಪಂದ್ಯ ನೋಡೋಕೆ ಅಷ್ಟ್ಯಾಕೆ ಕುತೂಹಲ?!

ಆ ಪಂದ್ಯ ನೋಡೋಕೆ ಅಷ್ಟ್ಯಾಕೆ ಕುತೂಹಲ?!

ಮೆಲ್ಬರ್ನ್ ಸ್ಟೇಡಿಯಂನಲ್ಲಿ ಮಾರ್ಚ್ 8ರ ಭಾನುವಾರ 12.30 pmಗೆ ನಡೆಯಲಿರುವ ಭಾರತ vs ಆಸ್ಟ್ರೇಲಿಯಾ ಮಹಿಳಾ ಟಿ20 ವಿಶ್ವಕಪ್ ಪಂದ್ಯ ಅಷ್ಟ್ಯಾಕೆ ಸ್ಟಾರ್ಕ್ ಪಾಲಿಗೆ ಪ್ರಮುಖವೆಂದರೆ, ಈ ಪಂದ್ಯದಲ್ಲಿ ಸ್ಟಾರ್ಕ್ ಪತ್ನಿ ಅಲಿಸಾ ಹೀಲಿ ಕೂಡ ಆಡುತ್ತಿದ್ದಾರೆ. ವಿಶ್ವಕಪ್‌ ಫೈನಲ್‌ನಲ್ಲಿ ಪತ್ನಿ ಆಡುವುದನ್ನು ಕಣ್ತುಂಬಿಕೊಳ್ಳಲು ಸ್ಟಾರ್ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯ ಕೈಬಿಟ್ಟಿದ್ದಾರೆ.

ಕೋಚ್ ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

ಕೋಚ್ ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

ಸ್ಟಾರ್ಕ್, ಪಂದ್ಯದಿಂದ ಹೊರಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್, 'ತವರು ನೆಲದಲ್ಲಿ ಪತ್ನಿ ಅಲಿಸಾ ಆಡುತ್ತಿರೋದನ್ನು ನೋಡುವ ಅವಕಾಶ ಸ್ಟಾರ್ಕ್ ಪಾಲಿಗೆ ಬದುಕಿನಲ್ಲಿ ಒಮ್ಮೆ ಬಂದಿದೆ. ಹೀಗಾಗಿ ಇಂಥ ಅಪರೂಪದ ಸಂದರ್ಭದಲ್ಲಿ ಪತ್ನಿಗೆ ಬೆಂಬಲಿಸುವ ಸಲುವಾಗಿ ತವರಿಗೆ ಹಿಂದಿರುಗಲು ನಾವು ಖುಷಿಯಿಂದಲೇ ಅವನಿಗೆ ಅನುಮತಿ ನೀಡುತ್ತಿದ್ದೇವೆ,' ಎಂದರು.

ಅತ್ಯಧಿಕ ರನ್ ಪಟ್ಟಿಯಲ್ಲಿ ಹೀಲಿ

ಅತ್ಯಧಿಕ ರನ್ ಪಟ್ಟಿಯಲ್ಲಿ ಹೀಲಿ

ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ್ತಿ ಆಗಿರುವ ಅಲಿಸಾ ಹೀಲಿ, ವಿಕೆಟ್ ಕೀಪರ್ ಕೂಡ ಹೌದು. ಈ ಬಾರಿಯ ಮಹಿಳಾ ವಿಶ್ವಕಪ್ ನಲ್ಲಿ ಅತ್ಯಧಿಕ ರನ್ ಪಟ್ಟಿಯಲ್ಲಿ ಹೀಲಿ ಸದ್ಯ 4ನೇ ಸ್ಥಾನದಲ್ಲಿದ್ದಾರೆ. 5 ಇನ್ನಿಂಗ್ಸ್‌ಗಳಲ್ಲಿ ಹೀಲಿ 161 ರನ್ ಕಲೆ ಹಾಕಿದ್ದಾರೆ. 5ನೇ ಸ್ಥಾನದಲ್ಲಿರುವ ಭಾರತದ ಶೆಫಾಲಿ ವರ್ಮಾ ಕೂಡ 4 ಇನ್ನಿಂಗ್ಸ್‌ಗಳಲ್ಲಿ 161 ರನ್ ಗಳಿಸಿದ್ದಾರೆ.

Story first published: Friday, March 6, 2020, 19:29 [IST]
Other articles published on Mar 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X