ಐಪಿಎಲ್‌ಗೆ ಕಂಬ್ಯಾಕ್ ಮಾಡಲಿರುವ ಮಿಚೆಲ್ ಸ್ಟಾರ್ಕ್‌: ಆಸಿಸ್ ವೇಗಿ ಮೇಲೆ ಕಣ್ಣಿಟ್ಟಿದೆ RCB

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಸೀಸನ್‌ಗೆ ತೆರೆಮರೆಯ ತಯಾರಿ ಜೋರಾಗಿದ್ದು, ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಆಟಗಾರರ ರೀಟೈನ್ ಪ್ರಕ್ರಿಯೆ ಕೂಡ ಮುಗಿದಿದ್ದು, ಎರಡು ಹೊಸ ಫ್ರಾಂಚೈಸಿಗಳೊಂದಿಗೆ ಐಪಿಎಲ್ ರಂಗು ಹೆಚ್ಚಿದೆ.

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ವೇಗಿ ಮಿಚೆಲ್ ಸ್ಟಾರ್ಕ್‌ ಮತ್ತೆ ಐಪಿಎಲ್‌ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದು, ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ಕ್‌ ಕಾಣಿಸಿಕೊಳ್ಳಲಿದ್ದಾರೆ.

2014 ರ ಐಪಿಎಲ್ ಹರಾಜಿನಲ್ಲಿದ್ದ ಸ್ಟಾರ್ಕ್​ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿಸಿತ್ತು. ಆರ್​ಸಿಬಿ ಪರ 2 ಸೀಸನ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಸ್ಟಾರ್ 27 ಪಂದ್ಯಗಳಿಂದ 34 ವಿಕೆಟ್ ಕಬಳಿಸಿದ್ದರು. ಇದಾದ ಬಳಿಕ ಸ್ಟಾರ್ ಐಪಿಎಲ್​ನಲ್ಲಿ ಭಾಗವಹಿಸಿರಲಿಲ್ಲ.

ಇದ್ರ ನಂತರ 2018 ರಲ್ಲಿ ಮಿಚೆಲ್ ಸ್ಟಾರ್ಕ್​ ಹೆಸರು ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿತ್ತು. ನಿರೀಕ್ಷೆಯಂತೆ ಆಸ್ಟ್ರೇಲಿಯಾ ಎಡಗೈ ವೇಗಿಯ ಖರೀದಿಗಾಗಿ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸಿತ್ತು. ಆದ್ರೆ ಅಂತಿಮವಾಗಿ ಕೊಲ್ಕತ್ತಾ ನೈಟ್​ ರೈಡರ್ಸ್ ತಂಡವು 9.40 ಕೋಟಿ ರೂ. ನೀಡಿ ಸ್ಟಾರ್ಕ್​ ಅವರನ್ನು ಖರೀದಿಸಿತ್ತು. ಆದರೆ ಗಾಯದ ಕಾರಣ ಮಿಚೆಲ್ ಸ್ಟಾರ್ಕ್​ ಟೂರ್ನಿಯಿಂದ ಹಿಂದೆ ಸರಿದಿದ್ದರು. ಆ ಬಳಿಕ ಐಪಿಎಲ್​ನಲ್ಲಿ ಮತ್ತೆ ಕಾಣಿಸಿಕೊಂಡಿರಲಿಲ್ಲ. ಆದ್ರೀಗ 6 ವರ್ಷಗಳ ಬಳಿಕ ಸ್ಟಾರ್ಕ್​ ಐಪಿಎಲ್​ಗೆ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ.

ಸ್ಟಾರ್ಕ್ ಮೇಲೆ ಕಣ್ಣಿಟ್ಟಿದೆ ಆರ್‌ಸಿಬಿ

ಸ್ಟಾರ್ಕ್ ಮೇಲೆ ಕಣ್ಣಿಟ್ಟಿದೆ ಆರ್‌ಸಿಬಿ

ಮಿಚೆಲ್ ಸ್ಟಾರ್ಕ್ ಅತ್ಯಂತ ಯಶಸ್ವಿ ಟಿ20 ಬೌಲರ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಹೀಗಾಗಿ ಆಸೀಸ್ ವೇಗಿಯನ್ನ ತನ್ನ ತೆಕ್ಕೆಗೆ ಹಾಕಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ ಹೊಸ ನಾಯಕ ಹುಡುಕಾಟದಲ್ಲಿರೋ ಆರ್‌ಸಿಬಿ ಹೇಗಾದ್ರೂ ಮಾಡಿ ಸ್ಕಾರ್ಕ್‌ ಮೇಲೆ ಬಿಡ್‌ ಮಾಡಿ ತನ್ನ ಬೌಲಿಂಗ್ ಬಲ ಹೆಚ್ಚಿಸುವ ಯೋಜನೆ ರೂಪಿಸಿದೆ.

ಕೆಎಲ್ ರಾಹುಲ್‌ಗೆ ಮಾತ್ರ ಆ ದೊಡ್ಡ ಜವಾಬ್ದಾರಿ ಕೊಡಲೇಬೇಡಿ ಎಂದ ಗಂಭೀರ್!

ಐಸಿಸಿ ಟೂರ್ನಮೆಂಟ್ ಹಿನ್ನೆಲೆ ಐಪಿಎಲ್‌ ಆಡುತ್ತಿರಲಿಲ್ಲ!

ಐಸಿಸಿ ಟೂರ್ನಮೆಂಟ್ ಹಿನ್ನೆಲೆ ಐಪಿಎಲ್‌ ಆಡುತ್ತಿರಲಿಲ್ಲ!

ಐಸಿಸಿ ಏಕದಿನ ವಿಶ್ವಕಪ್, ಐಸಿಸಿ ಟಿ20 ವಿಶ್ವಕಪ್ ಸೇರಿದಂತೆ ಪ್ರಮುಖ ಟೂರ್ನಿಗಳ ಹಿನ್ನಲೆಯಲ್ಲಿ ಮಿಚೆಲ್ ಸ್ಟಾರ್ಕ್‌ ಐಪಿಎಲ್‌ನಿಂದ ದೂರ ಉಳಿದಿದ್ರು. ಆದ್ರೆ ಮುಂಬರುವ ಟಿ20 ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಐಪಿಎಲ್​ನಲ್ಲಿ ಭಾಗವಹಿಸಬಹುದು ಎಂದು ಮಿಚೆಲ್ ಸ್ಟಾರ್ಕ್​ ತಿಳಿಸಿದ್ದಾರೆ.

ಕಳೆದ ವರ್ಷವಷ್ಟೇ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಂಡ ಆಸ್ಟ್ರೇಲಿಯಾವು ಮುಂಬರುವ ಟಿ20 ವಿಶ್ವಕಪ್ ಆತಿಥ್ಯವನ್ನು ವಹಿಸಲಿದೆ. 2022ರ ಟಿ20 ವಿಶ್ವಕಪ್‌ ಕಾಂಗರೂಗಳ ನಾಡಿನಲ್ಲಿ ನಡೆಯಲಿದೆ. ಅನೇಕ ಐಸಿಸಿ ವಿಶ್ವಕಪ್‌ಗಳ ಆತಿಥ್ಯ ವಹಿಸಿಕೊಂಡಿರುವ ಆಸ್ಟ್ರೇಲಿಯಾವು ಮತ್ತೊಂದು ವಿಶ್ವಕಪ್‌ಗೆ ನಡೆಸಿಕೊಡಲು ಈಗಿನಿಂದಲೇ ತಯಾರಿ ನಡೆಸಿದೆ. ಹೀಗಾಗಿ ಭಾರತದ ಬ್ಯಾಟ್ಸ್‌ಮನ್‌ಗಳ ವಿರುದ್ಧ ಜೊತೆಗೆ ವಿಶ್ವದ ಹಲವು ಸ್ಟಾರ್ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡಲು ಮಿಚೆಲ್ ಕಾತುರರಾಗಿದ್ದಾರೆ.

ಸಿಕ್ಸರ್ ಸಿಡಿಸೋದ್ರಲ್ಲಿ ಕೊಹ್ಲಿಗಿಂತ ಮುಂದಿರುವ ಉಮೇಶ್ ಯಾದವ್: ವಿರಾಟ್‌ನ ಅಪರೂಪದ ಸಿಕ್ಸರ್!

Jaspreet Bumrah ಸೇಡು ತೀರಿಸಿಕೊಂಡ ರೀತಿ ಇದು | Oneindia Kannada
ಇನ್ನೆರಡು ದಿನಗಳಲ್ಲಿ ಐಪಿಎಲ್ ಭಾಗಿ ಕುರಿತು ಖಚಿತಪಡಿಸಲಿದ್ದಾರೆ

ಇನ್ನೆರಡು ದಿನಗಳಲ್ಲಿ ಐಪಿಎಲ್ ಭಾಗಿ ಕುರಿತು ಖಚಿತಪಡಿಸಲಿದ್ದಾರೆ

ನಾನು ಇನ್ನೂ ಕೂಡ ಹೆಸರು ನೋಂದಣಿ ಮಾಡಿಕೊಂಡಿಲ್ಲ ಎಂದು ತಿಳಿಸಿರುವ ಸ್ಟಾರ್ಕ್​, ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

"ನನ್ನ ದಾಖಲೆಗಳನ್ನು ಪಡೆಯಲು ನಾನು ಎರಡು ದಿನಗಳನ್ನು ಹೊಂದಿದ್ದೇನೆ, ಆದ್ದರಿಂದ ತರಬೇತಿಯ ಮೊದಲು ಇಂದು ಏನಾದರೂ ಮಾಡಬೇಕಾಗಬಹುದು" ಎಂದು ಕ್ರಿಕೆಟ್.ಕಾಮ್.ಎಯು. ಸ್ಟಾರ್ಕ್ ಹೇಳಿದ್ದಾರೆ

"ನಾನು ಇನ್ನೂ ನನ್ನ ಹೆಸರನ್ನು ಹಾಕಿಲ್ಲ, ಆದರೆ ಅದನ್ನು ನಿರ್ಧರಿಸಲು ನನಗೆ ಇನ್ನೂ ಒಂದೆರಡು ದಿನಗಳ ಅವಕಾಶ ಬೇಕಿದೆ. ಆಸ್ಟ್ರೇಲಿಯಾ ತಂಡದ ವೇಳಾಪಟ್ಟಿ ಏನಾಗುತ್ತಿದೆ ಎಂಬುದರ ಹೊರತಾಗಿಯೂ ಇದು ಖಂಡಿತವಾಗಿಯೂ ಮೇಜಿನ ಮೇಲಿರುತ್ತದೆ, "ಎಂದು ಅವರು ಹೇಳಿದರು.

2014 ಮತ್ತು 2015 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ 27 ಪಂದ್ಯಗಳಲ್ಲಿ, ಸ್ಟಾರ್ಕ್ 7.16 ರ ಎಕಾನಮಿ ರೇಟ್ ನಲ್ಲಿ 34 ವಿಕೆಟ್‌ಗಳನ್ನು ಪಡೆದರು.

For Quick Alerts
ALLOW NOTIFICATIONS
For Daily Alerts
Story first published: Wednesday, January 12, 2022, 19:21 [IST]
Other articles published on Jan 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X