ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಐಪಿಎಲ್‌: ಮಿಥಾಲಿ, ಹರ್ಮನ್‌, ಸ್ಮೃತಿಗೆ ನಾಯಕತ್ವ

Mithali, Harmanpreet, Mandhana to lead in Womens T20 exhibition matches

ಬೆಂಗಳೂರು, ಏಪ್ರಿಲ್‌ 23: ಭಾರತ ಮಹಿಳಾ ಕ್ರಿಕೆಟ್‌ ತಂಡದ ಮೂವರು ಅನುಭವಿ ಆಟಗಾರ್ತಿಯಾರಾದ ಮಿಥಾಲಿ ರಾಜ್‌, ಹರ್ಮನ್‌ಪ್ರೀತ್‌ ಕೌರ್‌ ಮತ್ತು ಸ್ಮೃತಿ ಮಂಧಾನಾ, ಮುಂಬರುವ ಮಹಿಳಾ ಐಪಿಎಲ್‌ ಪ್ರದರ್ಶನ ಪಂದ್ಯಗಳಲ್ಲಿ ಕ್ರಮವಾಗಿ ಸೂಪರ್‌ನೋವಾಸ್‌, ಟ್ರಯಲ್‌ಬ್ಲೇಝರ್ಸ್‌ ಮತ್ತು ವೆಲಾಸಿಟಿ ತಂಡಗಳನ್ನು ಮುನ್ನನಡೆಸಲಿದ್ದಾರೆ.

ಮಹಿಳಾ ಟಿ20 ಪ್ರದರ್ಶನ ಪಂದ್ಯಗಳಿಗೆ ಜೈಪುರ ಸಂಪೂರ್ಣ ಆತಿಥ್ಯ ವಹಿಸಿದ್ದು, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪ್ಲೇ ಆಫ್ಸ್‌ ಪಂದ್ಯಗಳ ಜೊತೆಗೆ ನಡೆಯಲಿವೆ. ರೌಂಡ್‌ ರಾಬಿನ್‌ ಮಾದರಿಯ ಪಂದ್ಯಗಳು ಮೇ 6, 8, 9 ರಂದು ನಡೆಯಲಿದ್ದು, ಫೈನಲ್‌ ಪಂದ್ಯ ಮೇ 11ರಂದು ಜರುಗಲಿದೆ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಮಾಡಿದೆ.

ಈ ಬಾರಿಯ ಮಹಿಳಾ ಟಿ20 ಪ್ರದರ್ಶನ ಪಂದ್ಯಗಳಲ್ಲಿ ಆರು ದೇಶಗಳಿಂದ ವಿದೇಶಿ ಆಟಗಾರ್ತಿಯರು ಕೂಡ ಪಾಲ್ಗೊಳ್ಳುತ್ತಿರುವುದು ವಿಶೇಷ. ಭಾರತೀಕ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತದಲ್ಲಿಮಹಿಳಾ ಟಿ20 ಕ್ರಿಕೆಟ್‌ನ ಜನಪ್ರಿಯತೆಯನ್ನು ಅರಿಯುವ ಉದ್ದೇಶದಿಂದ ಈ ಪ್ರದರ್ಶನ ಪಂದ್ಯಗಳನ್ನು ಆಯೋಜಿಸುತ್ತಿದೆ.

ನಾಲ್ಕೂ ಪಂದ್ಯಗಳನ್ನು ಟೆಲಿವಿಷನ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಆದರೆ, ಪಂದ್ಯದ ಸಮಯ ಕುರಿತಾಗಿ ಬಿಸಿಸಿಐ ಪ್ರಸಾರ ಮಾಧ್ಯಮದವರೊಂದಿಗೆ ಚರ್ಚಿಸಿ ನಿರ್ಧರಿಸಲಿದೆ.

ಕಳೆದ ವರ್ಷ ಸೂಪರ್‌ನೋವಾಸ್‌ ಮತ್ತು ಟ್ರಯಲ್‌ಬ್ಲೇಝರ್ಸ್‌ ನಡುವೆ ಏಕೈಕ ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿತ್ತು. ಕೊನೆಯ ಓವರ್‌ ವರೆಗೂ ರೋಚಕತೆ ಹಿಡಿದಿಟ್ಟಿದ್ದ ಪಂದ್ಯದಲ್ಲಿ ಸೂಪರ್‌ನೋವಾಸ್‌ ಎದುರು ಟ್ರಯಲ್‌ ಬ್ಲೇಝರ್ಸ್‌ ತಂಡ 3 ವಿಕೆಟ್‌ಗಳ ಜಯ ದಾಖಲಿಸಿತ್ತು.

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ ಕ್ವಾಲಿಫೈಯರ್‌ 1 ಪಂದ್ಯಕ್ಕೂ ಮುನ್ನ ಅದೇ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವನ್ನು ನೇರ ಪ್ರಸಾರ ಮಾಡಲಾಗಿತ್ತು. ಆದರೆ, ಮಧ್ಯಾಹ್ನ 2 ಗಂಟೆಗೆ ಆರಂಭವಾದ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮನಿಸಿರಲಿಲ್ಲ.

Story first published: Tuesday, April 23, 2019, 18:20 [IST]
Other articles published on Apr 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X