ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಿಥಾಲಿ ರಾಜ್ ವಿವಾದ: ಶುರುವಾದಂದಿನಿಂದ ಈವರೆಗಿನ 'ಆಗು-ಹೋಗು'ಗಳು

Mithali Raj controversy: A timeline of events that unfolded

ನವದೆಹಲಿ, ನವೆಂಬರ್ 28: ಕ್ರಿಕೆಟ್ ವಲಯದಲ್ಲಿ ಈಗ 'ಮಿಥಾಲಿ ರಾಜ್' ವಿವಾದ ಹೆಚ್ಚು ಸದ್ದು ಮಾಡುತ್ತಿದೆ. ಐಸಿಸಿ ಮಹಿಳಾ ವಿಶ್ವ ಟಿ20 ಸೆಮಿಫೈನಲ್ ನಲ್ಲಿ ಮಿಥಾಲಿಗೆ ಭಾರತ ತಂಡದಲ್ಲಿ ಆಡಲು ಅವಕಾಶ ನೀಡದಿದ್ದ ದಿನದಿಂದ ಈ ಪ್ರಕರಣಕ್ಕೆ ಕಿಡಿ ಹತ್ತಿಕೊಂಡಿತ್ತು.

ರಮೇಶ್ ನನ್ನನ್ನು ಅವಮಾನಿಸಿದರು, ಡಯಾನಾ ಸರಿಯಿಲ್ಲ: ಮಿಥಾಲಿ ಆರೋಪ!ರಮೇಶ್ ನನ್ನನ್ನು ಅವಮಾನಿಸಿದರು, ಡಯಾನಾ ಸರಿಯಿಲ್ಲ: ಮಿಥಾಲಿ ಆರೋಪ!

ಅನಂತರ ವನಿತಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸುದ್ದಿಗಾರರೊಂದಿಗೆ ಮಾತನಾಡಿ, ಆಡುವ ತಂಡದಿಂದ ಮಿಥಾಲಿಯನ್ನು ಹೊಗಿಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದರು. ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ ಸದಸ್ಯೆ ಡಯಾನಾ ಎಡುಲ್ಜಿ ಅವರು ಕೌರ್ ಅವರನ್ನು ಬೆಂಬಲಿಸಿದ್ದೂ ನಡೆದಿತ್ತು.

ಬಿಗ್ ಬ್ಯಾಷ್ ಲೀಗ್ ನಲ್ಲಿ ಬ್ಯಾಟ್ ಬೀಸಲಿದ್ದಾರೆ ಹರ್ಮನ್ ಪ್ರೀತ್, ಸ್ಮೃತಿಬಿಗ್ ಬ್ಯಾಷ್ ಲೀಗ್ ನಲ್ಲಿ ಬ್ಯಾಟ್ ಬೀಸಲಿದ್ದಾರೆ ಹರ್ಮನ್ ಪ್ರೀತ್, ಸ್ಮೃತಿ

ಐಸಿಸಿ ಮಹಿಳಾ ಟಿ20 ಸೆಮಿಫೈನಲ್ ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತು ಕ್ರೀಡಾಭಿಮಾನಿಗಳ ಕ್ರೀಡಾ ಪರಿಣಿತರ ಕೋಪಕ್ಕೆ ಕಾರಣವಾಗಿದ್ದಂತೂ ನಿಜ. ಪ್ರಕರಣಕ್ಕೆ ಸಂಬಂಧಿಸಿ ಆದ ಎಲ್ಲಾ ಆಗು-ಹೋಗುಗಳ ಸಣ್ಣ ಇಣುಕು ನೋಟ ಇಲ್ಲಿದೆ.

ನವೆಂಬರ್ 22

ನವೆಂಬರ್ 22

ನವೆಂಬರ್ 22ರಂದು ಭಾರತದ ವನಿತೆಯರು ಐಸಿಸಿ ಮಹಿಳಾ ವಿಶ್ವ ಟಿ20 ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಸೋತರು. ಅದಾಗಲೇ ಪ್ರಕರಣ ತೀವ್ರ ಸ್ವರೂಪ ಪಡೆಯತೊಡಗಿತ್ತು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮಿಥಾಲಿಯನ್ನು ಪ್ರಮುಖ ಪಂದ್ಯದಲ್ಲಿ ಬೆಂಚ್ ಪ್ಲೇಯರ್ ಆಗಿಸಿದ್ದೇ ಇದಕ್ಕೆ ಕಾರಣ.

ನವೆಂಬರ್ 23

ನವೆಂಬರ್ 23

ಸೆಮಿಫೈನಲ್ ನಲ್ಲಿ ಭಾರತ ಸೋತ ಬಳಿಕ ಪ್ರತಿಕ್ರಿಯಿಸಿದ್ದ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, 'ಮಿಥಾಲಿಯನ್ನು ತಂಡದಿಂದ ಹೊಗಿಟ್ಟಿದ್ದಕ್ಕೆ ಪಶ್ಚಾತಾಪವೇನೂ ಆಗಿಲ್ಲ' ಎಂದು ತಪ್ಪನ್ನೇ ಸಮರ್ಥಿಸಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳನ್ನು, ಪಂಡಿತರನ್ನು ಕೆರಳಿಸಿತ್ತು.

ನವೆಂಬರ್ 25

ನವೆಂಬರ್ 25

ಪ್ರಕರಣ ತೀವ್ರಗೊಳ್ಳುತ್ತಲೇ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ (ಸಿಒಎ) ಮುಖ್ಯಸ್ಥ ವಿನೋದ್ ರೈ ಅವರು ಸಿಒಎ ಸದಸ್ಯೆ ಡಯಾನಾ ಎಡುಲ್ಜಿ, ಮಿಥಾಲಿ ರಾಜ್, ಕೌರ್, ಕೋಚ್ ರಮೇಶ್ ಪೊವಾರ್, ಮ್ಯಾನೇಜರ್ ತೃಪ್ತಿ ಭಟ್ಟಾಚಾರ್ಯ ಎಲ್ಲರನ್ನೂ ಸಭೆ ಕರೆದಿದ್ದರು.

ನವೆಂಬರ್ 26

ನವೆಂಬರ್ 26

ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದರೂ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸದೆಯೇ ರಾಹುಲ್ ಜೋಹ್ರಿಯನ್ನು ನಿರಪರಾಧಿ ಎಂದು ಘೋಷಿಸಿದ್ದ ಡಯಾನಾ, 'ಮಿಥಾಲಿಯನ್ನು ಹೊರಗಿಟ್ಟ ನಮ್ಮ ನಿರ್ಧಾರವನ್ನು ಯಾರೂ ಪ್ರಶ್ನಿಸುವಂತಿಲ್ಲ' ಎಂದು ಹೇಳಿದ್ದರು. ಡಯಾನಾ ಈ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿತ್ತು.

ನವೆಂಬರ್ 27

ನವೆಂಬರ್ 27

ಮಿಥಾಲಿ ರಾಜ್ ಅವರು ಇದೇ ವಿವಾದಕ್ಕೆ ಸಂಬಂಧಿಸಿ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ, ಮುಖ್ಯಾಧಿಕಾರಿ ಸಾಬ ಕರೀಮ್ ಅವರಿಗೆ ಒಂದು ಮೇಲ್ ಕಳಿಸಿದ್ದರು. ಮೇಲೆ ನಲ್ಲಿ ಡಯಾನಾ ಮತ್ತು ಕೋಚ್ ರಮೇಶ್ ಪೊವಾರ್ ನಿಲುವಿನ ಬಗ್ಗೆ ದೂರಿದ್ದರು. ಈ ಇ-ಮೇಲ್ ಒಳಗೊಂಡಿದ್ದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ಹಬ್ಬಿ ಪ್ರಕರಣವನ್ನು ತೀವ್ರಗೊಳಿಸಿತ್ತು.

ನವೆಂಬರ್ 28

ನವೆಂಬರ್ 28

ಪ್ರತಿಭಾನ್ವಿತ ಆಟಗಾರ್ತಿ ಮಿಥಾಲಿಯನ್ನು ಹತ್ತಿಕ್ಕಲು ಹತ್ನಿಸುತ್ತಿರುವ ಹರ್ಮನ್‌ಪ್ರೀತ್ ಕೌರ್ ಮತ್ತು ಡಯಾನಾ ಎಡುಲ್ಜಿ ಮೇಲೆ ಹಿಂದಿನ ಕೋಚ್ ತುಷಾರ್ ಅರೋತೆ ಕಿಡಿ ಕಾರಿದ್ದರು. ಇಬ್ಬರೂ ಬಿಸಿಸಿಐಗೆ ಮಾರಕವಾಗಲಿದ್ದಾರೆ ಎನ್ನುವ ಅರ್ಥದಲ್ಲಿ ಅರೋತೆ ಹೇಳಿದ್ದರು. ಹರ್ಮನ್ ಪ್ರೀತ್ ಸೇರಿ ಇನ್ನಿತರ ಕೆಲ ಆಟಗಾರ್ತಿಯರು ಅರೋತೆ ಕೋಚಿಂಗ್ ಬಗ್ಗೆ ದೂರಿದ್ದರಿಂದ ಹರೋತೆ ಕೆಲ ತಿಂಗಳ ಹಿಂದೆ ಕೋಚ್ ಜವಾಬ್ದಾರಿಯಿಂದ ಕೆಳಗಿಳಿದಿದ್ದರು.

Story first published: Wednesday, November 28, 2018, 19:13 [IST]
Other articles published on Nov 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X