ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ಬರೆದ ಮಿಥಾಲಿ ರಾಜ್

Mithali Raj First Woman Cricketer To Score 7,000 Runs In ODIs

ಲಕ್ನೋ: ಭಾರತದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 7000 ರನ್ ಬಾರಿಸಿದ ವಿಶ್ವದ ಮೊದಲ ಮಹಿಳಾ ಆಟಗಾರ್ತಿಯಾಗಿ ಮಿಥಾಲಿ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಪಂದ್ಯದಲ್ಲಿ ಮಿಥಾಲಿ ಈ ಸಾಧನೆ ಮಾಡಿದ್ದಾರೆ.

6, 6, 6, 6-ಗತಕಾಲ ನೆನಪಿಸಿದ ಸಿಕ್ಸರ್ ಕಿಂಗ್ ಯುವರಾಜ್: ವಿಡಿಯೋ6, 6, 6, 6-ಗತಕಾಲ ನೆನಪಿಸಿದ ಸಿಕ್ಸರ್ ಕಿಂಗ್ ಯುವರಾಜ್: ವಿಡಿಯೋ

ಲಕ್ನೋವಿನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 14) ನಡೆದ ಭಾರತದ ಮಹಿಳೆಯರು ಮತ್ತು ದಕ್ಷಿಣ ಆಫ್ರಿಕಾ ಮಹಿಳೆಯರ ನಡುವಿನ 4ನೇ ಏಕದಿನ ಪಂದ್ಯದಲ್ಲಿ 213ನೇ ಪಂದ್ಯಕ್ಕಾಗಿ ಮೈದಾನಕ್ಕಿಳಿದಿದ್ದ ಮಿಥಾಲಿ 71 ಎಸೆತಗಳಲ್ಲಿ 45 ರನ್ ಬಾರಿಸಿದರು. ಇದರೊಂದಿಗೆ ಮಿಥಾಲಿ ಹೆಸರಿಗೆ ದೊಸ ದಾಖಲೆ ಸೇರ್ಪಡೆಗೊಂಡಿದೆ.

ಹಿಂದಿನ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ 7000 ರನ್ ಮೈಲಿಗಲ್ಲು ಸ್ಥಾಪಿಸಲು ಕೇವಲ 26 ರನ್‌ಗಳು ಬೇಕಿತ್ತು. ಈಗ ಮಿಥಾಲಿ ಏಕದಿನದಲ್ಲಿ ಒಟ್ಟಾರೆ 7019 ರನ್ ಬಾರಿಸಿದಂತಾಗಿದೆ. ಹಿಂದಿನ ಪಂದ್ಯದಲ್ಲಿ ಮಿಥಾಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್ ಬಾರಿಸಿದ ಭಾರತದ ಮೊದಲ ಮಹಿಳೆಯಾಗಿ ಗುರುತಿಸಿಕೊಂಡಿದ್ದರು.

ರೋಡ್‌ ಸೇಫ್ಟಿ ಸೀರೀಸ್: ಸಚಿನ್, ಯುವಿ ಅಬ್ಬರದ ಆಟಕ್ಕೆ ಬೆದರಿದ ದಕ್ಷಿಣ ಆಫ್ರಿಕಾ ದಿಗ್ಗಜರುರೋಡ್‌ ಸೇಫ್ಟಿ ಸೀರೀಸ್: ಸಚಿನ್, ಯುವಿ ಅಬ್ಬರದ ಆಟಕ್ಕೆ ಬೆದರಿದ ದಕ್ಷಿಣ ಆಫ್ರಿಕಾ ದಿಗ್ಗಜರು

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಮಹಿಳೆಯರಲ್ಲಿ ನಂ.1 ಸ್ಥಾನದಲ್ಲಿರುವ ಷಾರ್ಲೆಟ್ ಎಡ್ವರ್ಡ್ಸ್ (5,992 ಏಕದಿನ ರನ್‌ಗಳು) ಅವರು ಏಕದಿನ ಕ್ರಿಕೆಟ್ ಅತ್ಯಧಿಕ ರನ್ ಪಟ್ಟಿಯಲ್ಲಿ ಮಿಥಾಲಿ ಬಳಿಕ ದ್ವಿತೀಯ ಸ್ಥಾನದಲ್ಲಿದ್ದಾರೆ. 38ರ ಹರೆಯದ ರಾಜಸ್ಥಾನ್ ಆಟಗಾರ್ತಿ ಮಿಥಾಲಿ 1999ರಲ್ಲಿ ಐರ್ಲೆಂಡ್ ವಿರುದ್ಧದ ಏಕದಿನದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

Story first published: Sunday, March 14, 2021, 14:22 [IST]
Other articles published on Mar 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X