ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೊಚ್ಚಲ ಮಹಿಳಾ IPL ಸೀಸನ್‌ನಲ್ಲಿ ಆಡುವ ಸುಳಿವು ನೀಡಿದ ಮಿಥಾಲಿ ರಾಜ್

Mithali Raj

23 ವರ್ಷಗಳ ಅಮೋಘ ಕ್ರಿಕೆಟ್ ಕೆರಿಯರ್‌ಗೆ ಇತ್ತೀಚೆಗಷ್ಟೇ ಗುಡ್‌ಬೈ ಹೇಳಿರುವ ಮಿಥಾಲಿ ರಾಜ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಈಗಾಗಲೇ ನಿವೃತ್ತಿ ಪಡೆದಿದ್ದಾರೆ. ಆದ್ರೆ ಮುಂಬರುವ ವರ್ಷ ನಡೆಯಬಹುದಾದ ಮಹಿಳಾ ಐಪಿಎಲ್ ಚೊಚ್ಚಲ ಸೀಸನ್‌ನಲ್ಲಿ ಮಿಥಾಲಿ ಆಡುತ್ತಾರೆ ಎಂಬ ಸುಳಿವನ್ನ ನೀಡಿದ್ದಾರೆ.

ಮಿಥಾಲಿ ಈಗಾಗಲೇ ಮೂರು ಅಂತರಾಷ್ಟ್ರೀಯ ಕ್ರಿಕೆಟ್ ಫಾರ್ಮೆಟ್‌ಗೆ ನಿವೃತ್ತಿ ಘೋಷಿಸಿದ್ದಾಗಿದೆ. ಹೀಗಿರುವಾಗ ಭವಿಷ್ಯದ ಚೊಚ್ಚಲ ಐಪಿಎಲ್ ಸೀಸನ್‌ನಲ್ಲಿ ಮಿಥಾಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಜೂನ್‌ನಲ್ಲಿ ನಿವೃತ್ತಿ ನಿರ್ಧಾರ ತೆಗೆದುಕೊಂಡ ಮಿಥಾಲಿ, ತಮ್ಮ ನಿವೃತ್ತಿಯ ದಿನಗಳಿಂದ ಹೊರಬರುವ ಸಾಧ್ಯತೆಯಿದೆ.

ಬಿಸಿಸಿಐ ಮೊದಲ ಬಾರಿಗೆ ಪುರುಷರ ಐಪಿಎಲ್ ಜೊತೆಯಲ್ಲಿಯೇ ಮಹಿಳೆಯರಿಗೆ ಟಿ20 ಪಂದ್ಯಾವಳಿಯನ್ನು 2018 ರಲ್ಲಿ ಆಯೋಜಿಸಿದಾಗ ಕೇವಲ ಎರಡು ತಂಡಗಳು ಭಾಗವಹಿಸಿದ್ದು, ಒಂದು ಪಂದ್ಯದೊಂದಿಗೆ ಪ್ರಾರಂಭಿಸಿತು. 2019 ರಲ್ಲಿ, ಬಿಸಿಸಿಐ ಮತ್ತೊಂದು ಹೊಸ ತಂಡವನ್ನು ಪರಿಚಯಿಸಿತು, ಅಲ್ಲಿ ಪ್ರತಿ ತಂಡವು ಇನ್ನೊಂದನ್ನು ಒಮ್ಮೆ ಆಡಿತು ಮತ್ತು ಅಗ್ರ ಎರಡು ತಂಡಗಳು ಫೈನಲ್‌ಗೆ ಮುನ್ನಡೆದವು.

2010 ರಲ್ಲಿ, ಟೂರ್ನಿಯನ್ನ ಯುಎಇಯಲ್ಲಿ ನಡೆಸಲಾಯಿತು, ಆದರೆ ಕಳೆದ ವರ್ಷ ಭಾರತದ ಆಸ್ಟ್ರೇಲಿಯಾ ಪ್ರವಾಸದೊಂದಿಗೆ ಘರ್ಷಣೆಗೊಂಡಿದ್ದರಿಂದ ಟೂರ್ನಿ ನಡೆಸಲು ಸಾಧ್ಯವಾಗಲಿಲ್ಲ.

ಈ ಟೂರ್ನಿಯನ್ನ ಭವಿಷ್ಯದ ಮಹಿಳಾ ಐಪಿಎಲ್‌ಗೆ ಪೂರ್ವಭಾವಿಯಾಗಿ ನೋಡಲಾಗಿದೆ. 5-6 ತಂಡಗಳು ಲೀಗ್‌ನಲ್ಲಿ ಸ್ಪರ್ಧಿಸುವ ಮೂಲಕ ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದ WIPL ಜಾರಿಯಲ್ಲಿರುತ್ತದೆ ಎಂದು ಬಿಸಿಸಿಐಯಿಂದ ಸೂಚನೆ ಬಂದಿದೆ.

ಮಹಿಳಾ ಐಪಿಎಲ್ ಆಡುವ ಕುರಿತು ಮಿಥಾಲಿ ರಾಜ್ ಪ್ರತಿಕ್ರಿಯೆ

ಮಹಿಳಾ ಐಪಿಎಲ್ ಆಡುವ ಕುರಿತು ಮಿಥಾಲಿ ರಾಜ್ ಪ್ರತಿಕ್ರಿಯೆ

ಬಿಸಿಸಿಐ ಹೀಗೆ ಕೆಲವೇ ಪಂದ್ಯಗಳನ್ನ ಆಯೋಜಿಸಿದ್ದರ ಕುರಿತಾಗಿ ಸಾಕಷ್ಟು ಟೀಕೆ ಬಂದ ಹಿನ್ನಲೆಯಲ್ಲಿ ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಸೀಸನ್‌ ನಡೆಸಲು ದೀರ್ಘ ಯೋಜನೆಯನ್ನ ಹೊಂದಿದೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿರುವಂತೆ 2023ರಲ್ಲಿ ಪೂರ್ಣ ಪ್ರಮಾಣದಲ್ಲಿ ಮಹಿಳಾ ಟಿ20 ಟೂರ್ನಮೆಂಟ್ ನಡೆಸಲು ಯೋಜನೆ ಸಿದ್ಧಗೊಳ್ಳುತ್ತಿದೆ.

ಏಕದಿನ ಕ್ರಿಕೆಟ್‌ ಫಾರ್ಮೆಟ್‌ನಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ರನ್ ಹಾಕಿರುವ ಬ್ಯಾಟರ್ ಆಗಿರುವ ಮಿಥಾಲಿ ರಾಜ್ ಅವರನ್ನು ಬಿಸಿಸಿಐ ನಿರ್ಧಾರದ ಕುರಿತು ಅವರ ಅಭಿಪ್ರಾಯದ ಬಗ್ಗೆ ಕೇಳಲಾಯಿತು. 100% ಕ್ರಿಕೆಟ್ ಪಾಡ್‌ಕಾಸ್ಟ್‌ನಲ್ಲಿ ಇಸಾ ಗುಹಾ ಮತ್ತು ಫ್ರಾಂಕಿ ಮ್ಯಾಕೆ ಅವರು ಪಂದ್ಯಾವಳಿಯ ಭಾಗವಾಗಲು ಬಯಸುತ್ತೀರಾ ಎಂದು ಕೇಳಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಈ ಆಲೋಚನೆಗೆ ಮುಕ್ತವಾಗಿದ್ದೇನೆ, ಆದರೆ ಇನ್ನೂ ಏನನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.

"ನಾನು ಆ ಆಯ್ಕೆಯನ್ನು ತೆರೆದಿರುತ್ತೇನೆ. ನಾನು ಇನ್ನೂ ನಿರ್ಧರಿಸಿಲ್ಲ. ಮಹಿಳಾ ಐಪಿಎಲ್ ನಡೆಯಲು ಇನ್ನೂ ಕೆಲವು ತಿಂಗಳುಗಳಿವೆ. ಮಹಿಳಾ ಐಪಿಎಲ್‌ನ ಮೊದಲ ಆವೃತ್ತಿಯ ಭಾಗವಾಗಲು ನಿಜಕ್ಕೂ ಸುಂದರವಾಗಿರುತ್ತದೆ, "ಎಂದು ಮಿಥಾಲಿ ಹೇಳಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ಕಂಟಕ: ಕಾರಣ ಇಲ್ಲಿದೆ

1999ರಲ್ಲಿ ಕ್ರಿಕೆಟ್ ಕೆರಿಯರ್ ಆರಂಭಿಸಿದ ಮಿಥಾಲಿ

1999ರಲ್ಲಿ ಕ್ರಿಕೆಟ್ ಕೆರಿಯರ್ ಆರಂಭಿಸಿದ ಮಿಥಾಲಿ

ಮಿಥಾಲಿ 1999ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು, ಶ್ರೇಷ್ಠ ಭಾರತೀಯ ಮಹಿಳಾ ಬ್ಯಾಟರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು ಎರಡು ಬಾರಿ 50 ಓವರ್‌ಗಳ ವಿಶ್ವಕಪ್ ಫೈನಲ್‌ಗೆ ತಂಡದ ನಾಯಕಿಯಾಗಿದ್ದರು ಮತ್ತು 232 ಪಂದ್ಯಗಳಲ್ಲಿ 7805 ರನ್‌ಗಳನ್ನು ಗಳಿಸಿದ್ದಾರೆ.

ಜೊತೆಗೆ 89 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 2,364 ರನ್ ಗಳಿಸಿದ್ದಾರೆ, ಆದರೆ ಕೇವಲ 12 ಟೆಸ್ಟ್‌ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ.

ಕಳೆದೆರಡು ವಿಶ್ವಕಪ್ ಸೋಲಿಗೆ ಇದುವೇ ಪ್ರಮುಖ ಕಾರಣ: ಸತ್ಯ ಬಿಚ್ಚಿಟ್ಟ ರವಿಶಾಸ್ತ್ರಿ

ಶಫಾಲಿ ವರ್ಮಾ ದಶಕದಲ್ಲಿ ಸಿಗುವ ಓರ್ವ ಆಟಗಾರ್ತಿ ಎಂದ ಮಿಥಾಲಿ

ಶಫಾಲಿ ವರ್ಮಾ ದಶಕದಲ್ಲಿ ಸಿಗುವ ಓರ್ವ ಆಟಗಾರ್ತಿ ಎಂದ ಮಿಥಾಲಿ

ಭಾರತ ಮಹಿಳಾ ಕ್ರಿಕೆಟ್‌ನ ಯುವ ಓಪನಿಂಗ್ ಬ್ಯಾಟರ್ ಶಫಾಲಿ ವರ್ಮಾ ಕುರಿತು ಮಿಥಾಲಿ ರಾಜ್ ಹೊಗಳಿದ್ದಾರೆ. ತನ್ನ ಅಟ್ಯಾಕಿಂಗ್ ಕೌಶಲ್ಯದ ಮೂಲಕ ಗುರುತಿಸಿಕೊಂಡಿರು ಶಫಾಲಿ ವರ್ಮಾ ವಿಶ್ವದ ಯಾವುದೇ ಯಾವುದೇ ತಂಡದ ವಿರುದ್ಧ ಯಾವುದೇ ಪಿಚ್‌ನಲ್ಲಿ ಬೇಕಾದರೂ ಆಡಬಲ್ಲರು ಎಂದು ಪ್ರಶಂಸಿದ್ದರೆ. ಇದೇ ವೇಳೆಯಲ್ಲಿ ಆಕೆ ದಶಕದಲ್ಲಿ ಸಿಗುವ ಓರ್ವ ಪ್ಲೇಯರ್ ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ನಾನು ಅವಳ ಆಟದ ದೊಡ್ಡ ಅಭಿಮಾನಿಯಾಗಿದ್ದೇನೆ. ಯಾವುದೇ ದಾಳಿ ಮತ್ತು ಯಾವುದೇ ತಂಡದ ವಿರುದ್ಧ ಭಾರತಕ್ಕಾಗಿ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲುವ ಸಾಮರ್ಥ್ಯವನ್ನು ಹೊಂದಿರುವ ಒಬ್ಬ ಆಟಗಾರ್ತಿ ಎಂದು ನಾನು ನೋಡಿದ್ದೇನೆ. ಪೀಳಿಗೆಯಲ್ಲಿ ಒಮ್ಮೆ ಮಾತ್ರ ನೀವು ನೋಡಬಹುದಾದ ಆಟಗಾರರಲ್ಲಿ ಅವಳು ಒಬ್ಬಳು. ಅವಳು ನನ್ನ ತಂಡಕ್ಕಾಗಿ ಆಡಿದಳು, ಮತ್ತು ಆ ವಯಸ್ಸಿನಲ್ಲಿ ಬೌಂಡರಿಯನ್ನು ಸಿಡಿಸುವುದನ್ನ ಮತ್ತು ತನ್ನ ಇಚ್ಛೆಯಂತೆ ಸಿಕ್ಸರ್ ಬಾರಿಸುವ ಕಚ್ಚಾ ಶಕ್ತಿಯನ್ನು ಅವಳು ಹೊಂದಿದ್ದಾಳೆ. ಅಲ್ಲದೆ ಅಪರೂಪದ ಸಾಮರ್ಥ್ಯ ಹೊಂದಿದ್ದಾಳೆ" ಎಂದು ಮಿಥಾಲಿ ರಾಜ್ ಹೇಳಿದ್ದಾರೆ.

Story first published: Tuesday, July 26, 2022, 10:08 [IST]
Other articles published on Jul 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X