ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಿಥಾಲಿ ರಾಜ್ ನಿವೃತ್ತಿ: ಆಟಗಾರ್ತಿಯ ಸಾಧನೆ ಮತ್ತು ಸೇವೆಗೆ ಕ್ರಿಕೆಟಿಗರು ಮತ್ತು ನೆಟ್ಟಿಗರ ಜೈಕಾರ

Mithali Raj retirement: netizens and cricket world appraised mithali rajs achievements
Mithali Raj ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದೇಕೆ | *Sports | Oneindia Kannada

ಕ್ರಿಕೆಟ್ ಲೋಕದ ಮಹಿಳಾ ಸಚಿನ್ ತೆಂಡೂಲ್ಕರ್ ಎಂದೇ ಹೆಸರು ಮಾಡಿದ್ದ ಮಿಥಾಲಿ ರಾಜ್ ತಮ್ಮ 23 ವರ್ಷದ ಸುದೀರ್ಘ ಕ್ರಿಕೆಟ್ ಪಯಣಕ್ಕೆ ಪೂರ್ಣವಿರಾಮ ಇಟ್ಟಿದ್ದಾರೆ. ಇಂದು ( ಜೂನ್ 8 ) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲಾ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

IND vs SA: ಪ್ರಥಮ ಟಿ20ಯಲ್ಲಿ ಕಣಕ್ಕಿಳಿಯುವ ತಂಡಗಳು, ಪಿಚ್ ರಿಪೋರ್ಟ್ ಮತ್ತು ಹವಾಮಾನ ವರದಿIND vs SA: ಪ್ರಥಮ ಟಿ20ಯಲ್ಲಿ ಕಣಕ್ಕಿಳಿಯುವ ತಂಡಗಳು, ಪಿಚ್ ರಿಪೋರ್ಟ್ ಮತ್ತು ಹವಾಮಾನ ವರದಿ

ಮೂಲತಃ ರಾಜಸ್ಥಾನದ ಜೋದ್‌ಪುರದ ಈ ದಂತಕತೆ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ದಾಖಲೆಯನ್ನು ನಿರ್ಮಿಸಿದ್ದಾರೆ. ಒಟ್ಟು 211 ಏಕದಿನ ಇನ್ನಿಂಗ್ಸ್ ಆಡಿರುವ ಮಿಥಾಲಿ ರಾಜ್ 7 ಶತಕ ಮತ್ತು 64 ಅರ್ಧಶಕಗಳ ನೆರವಿನಿಂದ ಒಟ್ಟು 7805 ರನ್ ಕಲೆಹಾಕಿದ್ದಾರೆ. ನಾಯಕಿಯಾಗಿ ಟೀಮ್ ಇಂಡಿಯಾವನ್ನು ಅತಿಹೆಚ್ಚು ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿರುವ ಮಿಥಾಲಿ ರಾಜ್ 155 ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿದ್ದು 89 ಪಂದ್ಯಗಳಲ್ಲಿ ಜಯ, 63 ಪಂದ್ಯಗಳಗಲ್ಲಿ ಸೋಲು ಕಂಡಿದ್ದಾರೆ ಹಾಗೂ ಉಳಿದ ಮೂರು ಪಂದ್ಯಗಳು ಫಲಿತಾಂಶವಿಲ್ಲದೇ ಅಂತ್ಯಗೊಂಡಿವೆ.

ಈತ ಶತಕ ಬಾರಿಸಿದ ಯಾವುದೇ ಪಂದ್ಯದಲ್ಲಿಯೂ ಭಾರತ ಸೋತಿಲ್ಲ! ಇಲ್ಲಿದೆ ಆ ಎಲ್ಲಾ ಪಂದ್ಯಗಳ ಪಟ್ಟಿಈತ ಶತಕ ಬಾರಿಸಿದ ಯಾವುದೇ ಪಂದ್ಯದಲ್ಲಿಯೂ ಭಾರತ ಸೋತಿಲ್ಲ! ಇಲ್ಲಿದೆ ಆ ಎಲ್ಲಾ ಪಂದ್ಯಗಳ ಪಟ್ಟಿ

ಈ ರೀತಿಯ ಹಲವಾರು ಸಾಧನೆಗಳನ್ನು ಮಾಡಿರುವ ಮಿಥಾಲಿ ರಾಜ್ ಇಂದು ತಂಡವು ಕೆಲವು ಪ್ರತಿಭಾವಂತ ಯುವ ಆಟಗಾರರ ಕೈಯಲ್ಲಿದೆ ಮತ್ತು ಭಾರತೀಯ ಕ್ರಿಕೆಟ್‌ನ ಭವಿಷ್ಯವು ಉಜ್ವಲವಾಗಿರುವುದರಿಂದ ನನ್ನ ಆಟದ ವೃತ್ತಿಜೀವನಕ್ಕೆ ತೆರೆ ಎಳೆಯಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಮಿಥಾಲಿ ರಾಜ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಡಿರುವ ಈ ಟ್ವೀಟ್‌ಗೆ ಹಲವಾರು ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು ಹಾಗೂ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಈ ಕೆಳಕಂಡಂತೆ ಬರೆದುಕೊಂಡಿದ್ದಾರೆ.

ಮಿಥಾಲಿ ರಾಜ್ ನಿವೃತ್ತಿ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ "ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಕನಸನ್ನು ಕೆಲವರು ಮಾತ್ರ ಪೂರೈಸಿಕೊಳ್ಳುತ್ತಾರೆ ಮತ್ತು ರಾಷ್ಟ್ರವನ್ನು 23 ವರ್ಷಗಳ ಸುದೀರ್ಘ ಕಾಲ ಮುನ್ನಡೆಸಿರುವುದು ಅದ್ಭುತ. ನೀವು ಭಾರತೀಯ ಮಹಿಳಾ ಕ್ರಿಕೆಟ್‌ನ ಆಧಾರ ಸ್ತಂಭವಾಗಿದ್ದಿರಿ ಹಾಗೂ ಅನೇಕ ಯುವ ಮಹಿಳಾ ಕ್ರಿಕೆಟಿಗರ ಕ್ರಿಕೆಟ್ ಜೀವನವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದೀರಿ. ನಿಮ್ಮ ಅದ್ಭುತ ಕ್ರಿಕೆಟ್ ಪಯಣಕ್ಕೆ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾಗೆ ನಿಮ್ಮ ಕೊಡುಗೆ ಅತ್ಯಮೂಲ್ಯವಾದದ್ದು, ನಿಮ್ಮ ಅತ್ಯದ್ಭುತವಾದ ಕ್ರಿಕೆಟ್ ಪಯಣಕ್ಕೆ ಶುಭಾಶಯಗಳು, ನೀವು ಶ್ರೀಮಂತ ಪರಂಪರೆಯನ್ನು ನಿರ್ಮಿಸಿ ಹೊರಟಿದ್ದೀರ, ನಿಮ್ಮ ಎರಡನೇ ಇನ್ನಿಂಗ್ಸ್‌ಗೆ ಒಳ್ಳೆಯದಾಗಲಿ ಎಂದು ಬಿಸಿಸಿಐ ಮಿಥಾಲಿ ರಾಜ್ ಚಿತ್ರಗಳನ್ನು ಹಂಚಿಕೊಂಡು ಟ್ವೀಟ್ ಮಾಡಿದೆ.

ನಾಯಕಿ, ದಂತಕತೆ, ಸ್ಪೂರ್ತಿ.. ಕ್ರಿಕೆಟ್‌ಗೆ ನಿಮ್ಮ ಕೊಡುಗೆ ಅಪಾರವಾದದ್ದು ಹಾಗೂ ನಿಮ್ಮ ಪ್ರಭಾವ ಶಾಶ್ವತವಾಗಿರಲಿದೆ ಎಂದು ಬಿಸಿಸಿಐ ವುಮೆನ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಮಿಥಾಲಿ ರಾಜ್ ನಿವೃತ್ತಿ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅನಿಲ್ ಕುಂಬ್ಳೆ ನಿಮ್ಮ ಅದ್ಭುತ ಕ್ರಿಕೆಟ್ ವೃತ್ತಿ ಜೀವನಕ್ಕೆ ಅಭಿನಂದನೆಗಳು, ನೀವು ಹಲವರಿಗೆ ರೋಲ್ ಮಾಡೆಲ್ ಮತ್ತು ಸ್ಪೂರ್ತಿಯಾಗಿದ್ದೀರಿ, ನಿಮ್ಮ ಎರಡನೇ ಇನ್ನಿಂಗ್ಸ್‌ಗೆ ಶುಭವಾಗಲಿ ಎಂದು ಬರೆದುಕೊಂಡಿದ್ದಾರೆ.

ಮಿಥಾಲಿ ರಾಜ್ ಮಾಡಿರುವ ಕ್ರಿಕೆಟ್ ಸಾಧನೆಗಳನ್ನು ಟ್ವೀಟ್ ಮಾಡಿರುವ ನೆಟ್ಟಿಗರೊಬ್ಬರು ಈ ನೆನಪುಗಳಿಗೆಲ್ಲಾ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

Story first published: Wednesday, June 8, 2022, 18:44 [IST]
Other articles published on Jun 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X